

ಮೇಷ: ಶರೀರದ ಆರೋಗ್ಯ ಕೈಕೊಡಬಹುದು. ಅನಗತ್ಯ ತಿರುಗಾಟ ಮಾಡಬೇಕಾದೀತು. ಆಸ್ತಿ ವಿಚಾರಕ್ಕೆ ಸ್ನೇಹಿತನಿಂದ ಸಲಹೆ. ಶುಭಸಂಖ್ಯೆ: 8
ವೃಷಭ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ದೃಢನಿರ್ಧಾರವನ್ನು ತೆಗೆದುಕೊಳ್ಳಿ. ಕಚೇರಿಯಲ್ಲಿ ಬಿಗುವಿನ ವಾತಾವರಣ. ಕಲಾವಿದರಿಗೆ ಲಾಭ. ಶುಭಸಂಖ್ಯೆ: 6
ಮಿಥುನ: ಹಿರಿಯರ ಅನಾರೋಗ್ಯದ ವಾರ್ತೆ. ಸಹೋದ್ಯೋಗಿ ಗಳಿಂದ ಅಪಪ್ರಚಾರ. ಕೆಲಸಗಳಲ್ಲಿ ಸೋಲು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 3
ಕಟಕ: ಆತ್ಮೀಯರ ಭೇಟಿ. ಹಿತೈಷಿಗಳಿಂದ ಮುಖ್ಯವಾದ ವಿಚಾರದಲ್ಲಿ ಸಲಹೆ. ಅನಾರೋಗ್ಯ ಬಾಧಿಸಬಹುದು, ಕಾಳಜಿ ವಹಿಸಿ. ಶುಭಸಂಖ್ಯೆ:7
ಸಿಂಹ: ಎಷ್ಟೋ ಕಾಲದಿಂದ ತೊಂದರೆ ಕೊಡುತ್ತಿದ್ದ ವ್ಯಾಧಿ ಉಪಶಮನ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ. ಶುಭಸಂಖ್ಯೆ: 6
ಕನ್ಯಾ: ಮಾನಸಿಕ ಚಾಂಚಲ್ಯ. ಲೇಖಕರಿಗೆ ಒಳ್ಳೆಯ ದಿನ. ಕಲಾಕ್ಷೇತ್ರದವರಿಗೆ ಉತ್ತಮ ಫಲ. ಫಲ ಸಿಗುವ ಸಮಯದಲ್ಲಿ ವಿಘ್ನ. ಶುಭಸಂಖ್ಯೆ: 4
ತುಲಾ: ವಾಹನ ಚಲಾಯಿಸುವಾಗ ಎಚ್ಚರದಿಂದಿರಿ. ಉದ್ಯೋಗದಲ್ಲಿ ಸ್ಥಾನಮಾನದ ನಿರೀಕ್ಷೆ ಸಫಲ. ದಿನಾಂತ್ಯದಲ್ಲಿ ಉತ್ತಮ ಭೋಜನ. ಶುಭಸಂಖ್ಯೆ: 2
ವೃಶ್ಚಿಕ: ಹಿತಶತ್ರುಗಳು ಕಾಡುವರು. ಆಸ್ತಿ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ. ಹಿರಿಯರ ಸಲಹೆ ಪಡೆದು ಮುಂದುವರಿಯಿರಿ. ಶುಭಸಂಖ್ಯೆ: 2
ಧನುಸ್ಸು: ಕುಟುಂಬದಲ್ಲಿ ಗೊಂದಲ. ಯಾರೋ ಮಾಡಿದ ತಪ್ಪಿಗೆ ನೀವು ಬಲಿಪಶುವಾಗುವ ಸಾಧ್ಯತೆ. ಜೋಕೆ. ಸಾಲಗಾರರ ಕಾಟ. ಶುಭಸಂಖ್ಯೆ: 7
ಮಕರ: ಸ್ಥಾನಮಾನದ ನಷ್ಟ. ಸ್ನೇಹಿತನ ಭೇಟಿ. ಮಾತಿನಿಂದ ಶತ್ರುಗಳು ಸೃಷ್ಟಿಯಾದಾರು. ಹುಷಾರು. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7
ಕುಂಭ: ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ. ತಾಯಿಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಎಲ್ಲರ ಬೆಂಬಲ. ಶುಭಸಂಖ್ಯೆ: 7
ಮೀನ: ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ. ಅನಪೇಕ್ಷಿತ ಧನಲಾಭವಾಗುವ ಸಾಧ್ಯತೆ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 1