

ಮೇಷ: ಕೃಷಿ ಕ್ಷೇತ್ರದಲ್ಲಿ ಲಾಭ. ರಾಜಕೀಯ ಸಮೂಹದವರು ಎಚ್ಚರ ವಹಿಸುವುದು ಸೂಕ್ತ. ಮದುವೆಗೆ ಸಕಾಲ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 1
ವೃಷಭ: ವಿದ್ಯಾಭ್ಯಾಸದಲ್ಲಿ ಕಾಳಜಿ ಅಗತ್ಯ. ಏಕಾಗ್ರತೆಗೆ ಧ್ಯಾನ ಸಹಕಾರಿಯಾದೀತು. ಪ್ರಭಾವಿ ವ್ಯಕ್ತಿಯ ಭೇಟಿ. ಆರ್ಥಿಕತೆಯಲ್ಲಿ ಸುಧಾರಣೆ. ಶುಭಸಂಖ್ಯೆ: 4
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ ಉಂಟಾಗಬಹುದು. ವಿವಾಹ ಕಾರ್ಯ ಸಂಭ್ರಮದಿಂದ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ. ಶುಭಸಂಖ್ಯೆ: 7
ಕಟಕ: ವಿವಾಹಕ್ಕೆ ಅಡ್ಡಿ ಎದುರಾಗುವ ಸಾಧ್ಯತೆ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವ್ಯಾಪಾರಿಗಳಿಗೆ, ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 5
ಸಿಂಹ: ಉದ್ಯೋಗ ಬದಲಿಸಲು ಸಮಯ ಸೂಕ್ತವಾಗಿಲ್ಲ. ಬಟ್ಟೆ ವ್ಯಾಪಾರಸ್ಥರಿಗೆ ಶುಭದಿನ. ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸೀತು. ಶುಭಸಂಖ್ಯೆ: 1
ಕನ್ಯಾ: ತೀರ್ಮಾನ ಕೈಗೊಳ್ಳುವಾಗ ಸಾಕಷ್ಟು ಯೋಚಿಸಿ. ರಂಗಕರ್ವಿುಗಳಿಗೆ ಹೆಚ್ಚಿನ ಲಾಭ. ಗೃಹ ನಿರ್ವಣಕ್ಕೆ ಅನುಕೂಲಕರ ಸಮಯ. ಶುಭಸಂಖ್ಯೆ: 9
ತುಲಾ: ಕೃಷಿ ವಿದ್ಯಾರ್ಥಿಗಳಿಗೆ ಗೌರವ, ಸನ್ಮಾನ. ವಿಜ್ಞಾನಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸುವುದು ಅಗತ್ಯ. ಶುಭಸಂಖ್ಯೆ: 4
ವೃಶ್ಚಿಕ: ಔಷಧಿ ಮಾರಾಟಗಾರರಿಗೆ ಬೇಡಿಕೆ ಹೆಚ್ಚಲಿದೆ. ಅಧಿಕಾರಿಗಳೊಂದಿಗೆ ವಾದ -ವಿವಾದ. ಲೇವಾದೇವಿ ವ್ಯವಹಾರದಲ್ಲಿ ಆದಾಯ. ಶುಭಸಂಖ್ಯೆ: 8
ಧನುಸ್ಸು: ಶ್ರಮಕ್ಕೆ ತಕ್ಕ ಯಶಸ್ಸು ಸಿಗುವುದು. ಹಿರಿಯ ಅಧಿಕಾರಿಗಳಿಂದ ಕಿರುಕುಳ ಎದುರಿಸಬೇಕಾದೀತು. ವಕೀಲರಿಗೆ ಉತ್ತಮ ಸಮಯ. ಶುಭಸಂಖ್ಯೆ: 2
ಮಕರ: ಕಾರ್ಯದೊತ್ತಡದಿಂದ ಸುಸ್ತು ಕಾಣಿಸೀತು. ವೈದ್ಯರಿಗೆ ಕಾರ್ಯಕ್ಷೇತ್ರದಲ್ಲಿ ಪ್ರತಿಷ್ಠೆ. ಗುತ್ತಿಗೆ ಕೆಲಸಗಾರರಿಗೆ ಆದಾಯವಿದೆ. ಶುಭಸಂಖ್ಯೆ: 5
ಕುಂಭ: ಯಂತ್ರೋಪಕರಣಗಳ ಕುರಿತು ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಕೆಲಸಗಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 9
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ದೊರೆಯುವುದು. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ದಿನಸಿ ವ್ಯಾಪಾರಿಗಳಿಗೆ ಆದಾಯ. ಶುಭಸಂಖ್ಯೆ: 1