ನಿತ್ಯಭವಿಷ್ಯ: ಧನಲಾಭದ ವಿಚಾರದಲ್ಲಿ ಈ ರಾಶಿಯವರಿಗಿಂದು ಬಂಪರ್​

NITYA BHAVISHYA
Published on

ಮೇಷ: ಯಾವ ಕಾರ್ಯಕ್ಕೂ ಎಂದೂ ಆಲೋಚಿಸದೆ ಮುಂದಾಗದ ನಿಮ್ಮಿಂದಲೂ ಅವಸರ ಆದೀತು. ಎಚ್ಚರ ಅಗತ್ಯ. ಶುಭಸಂಖ್ಯೆ: 6

ವೃಷಭ: ಯಶಸ್ಸು ನಾನಾ ಮಾರ್ಗಗಳಲ್ಲಿ ಬರಬೇಕೆಂಬ ನಿಮ್ಮ ಲೆಕ್ಕಾಚಾರ ಸರಿ. ಆದರೆ ಅದಕ್ಕೆ ವಿಳಂಬವೇ ಆಗಬಹುದು. ಶುಭಸಂಖ್ಯೆ: 3

ಮಿಥುನ: ಎಷ್ಟೋ ಸಲ ಮೌನವೇ ಅತ್ಯುತ್ತಮ ಅಸ್ತ್ರವಾಗಿರುತ್ತದೆ. ನೀವು ಕೂಡ ಇಂದು ಅದನ್ನೇ ಬಳಸಬಹುದು. ಶುಭಸಂಖ್ಯೆ: 9

ಕಟಕ: ಸಹೋದ್ಯೋಗಿಗಳು ನಿಮ್ಮನ್ನು ಅನವಶ್ಯಕ ಒತ್ತಡದಲ್ಲಿ ಸಿಲುಕಿಸುವ ತಂತ್ರ ನಡೆಸಬಹುದು. ಈ ಬಗೆಗೆ ಜಾಗ್ರತೆಯಿರಲಿ. ಶುಭಸಂಖ್ಯೆ: 7

ಸಿಂಹ: ಅಗತ್ಯವಿಲ್ಲದವರಿಗೆ ನೆರವು ನೀಡಲು ಹೋಗದಿರಿ. ಆದರೆ ನೆರವು ಬಯಸಿದ ಅರ್ಹರಿಗೆ ಸಹಕಾರ ನೀಡಿ. ಶುಭಸಂಖ್ಯೆ: 5

ಕನ್ಯಾ: ಮನಸ್ಸಿಗೆ ಸರಿಯೆನಿಸದ ಕೆಲಸಗಳನ್ನು ಬಿಡಿ. ಸೂಕ್ಷ್ಮ ಆಲೋಚನೆಯಿಂದ ಸೂಕ್ತ ಮಾರ್ಗ ಎದುರಾಗಲಿದೆ. ಶುಭಸಂಖ್ಯೆ: 2

ತುಲಾ: ಮನಸ್ಸು ಹೊಯ್ದಾಡುವಾಗ ನಿರ್ಧಾರ ಕೈಗೊಳ್ಳದಿರಿ. ದೃಢ ನಿರ್ಧಾರದಿಂದ ದೊಡ್ಡ ಯಶಸ್ಸು ದೊರೆಯಲಿದೆ. ಶುಭಸಂಖ್ಯೆ: 4

ವೃಶ್ಚಿಕ: ಪಿತ್ರಾರ್ಜಿತ ಆಸ್ತಿಯ ಸಲುವಾಗಿ ಕೆಲವು ಜನರಿಂದ ಮಾಹಿತಿಗಳು ಸಿಗಲಿವೆ. ಇದರಿಂದ ಮುಂದೆ ಲಾಭಗಳೂ ಲಭ್ಯ. ಶುಭಸಂಖ್ಯೆ: 3

ಧನುಸ್ಸು: ಕೆಲಸಕ್ಕೆ ಹೊರಡುವ ಮೊದಲು ಕುಲದೇವರ ಪ್ರಾರ್ಥನೆ ಮಾಡಿ ಮನೆಯಿಂದ ಹೊರಬನ್ನಿ. ಯಾವುದೇ ತೊಂದರೆ ಆಗದು. ಶುಭಸಂಖ್ಯೆ: 1

ಕುಂಭ: ಧನಲಾಭದ ವಿಚಾರದಲ್ಲಿ ನಿಮಗೆ ಕೆಲವು ಗ್ರಹಗಳ ಬೆಂಬಲವಿದೆ. ಆದರೆ ಖರ್ಚಿನಲ್ಲಿ ಕೂಡ ಹಿಡಿತ ಬೇಕಾಗುತ್ತದೆ. ಶುಭಸಂಖ್ಯೆ: 6

ಮಕರ: ಮೂರ್ಖರನ್ನು ಬದಲಿಸಲು ಅಸಾಧ್ಯ ಎಂಬ ನಿಮ್ಮ ಧೋರಣೆ ನಿಜ. ಆದರೆ ಅವರನ್ನೇನೂ ಟೀಕಿಸಬೇಡಿ. ಶುಭಸಂಖ್ಯೆ: 9

ಮೀನ: ತೊಂದರೆ ತರಲೆಂದೇ ಸುತ್ತುವರಿದ ಜನರ ಬಗ್ಗೆ ಜಾಗ್ರತೆ ಇರಲಿ. ಹಾಗೆಂದು ಸಿಟ್ಟಿನ ಮಾತುಗಳನ್ನೂ ಆಡದಿರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net