ಮೇಷ: ಕೆಲಸ ಮಾಡುವ ಜಾಗದಲ್ಲಿ ಸಿಟ್ಟು ಮಾಡಿಕೊಂಡರೆ ಸಿಗಬೇಕಾದ ಬೆಲೆಯನ್ನು ಕಳೆದುಕೊಳ್ಳುವ ಸಾಧ್ಯತೆ. ಅದೃಷ್ಟಸಂಖ್ಯೆ: 1
ವೃಷಭ: ಬಣ್ಣದ ವಸ್ತ್ರಗಳು ಆಕರ್ಷಿಸುತ್ತವೆ. ಕಾರಣಾಂತರಗಳಿಂದ ಹೊಸ ವಸ್ತ್ರ ಖರೀದಿಸಲಾಗದೆ ದುಃಖ. ಅದೃಷ್ಟಸಂಖ್ಯೆ: 4
ಮಿಥುನ: ಸ್ವತಃ ಉಲ್ಲಾಸಭರಿತರಾಗಿ ಇರುವುದಲ್ಲದೆ ಸಹೋದ್ಯೋಗಿಗಳನ್ನೂ ಚಿಂತಿಸದೆ ಇರಲು ಪ್ರೇರೇಪಿಸುತ್ತೀರಿ. ಅದೃಷ್ಟಸಂಖ್ಯೆ: 2
ಕಟಕ: ಯಾರೋ ಮೂರನೇ ವ್ಯಕ್ತಿ ಸುಳ್ಳು ಹೇಳಿದರೂ ನೀವೂ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 7
ಸಿಂಹ: ದಿನಚರಿಯಲ್ಲಿನ ಚಿಕ್ಕ ಬದಲಾವಣೆಯೊಂದು ಬರಬಹುದಾದ ದೊಡ್ಡ ಸಮಸ್ಯೆಯನ್ನು ಪರಿಹರಿಸಲಿದೆ. ಅದೃಷ್ಟಸಂಖ್ಯೆ: 6
ಕನ್ಯಾ: ನಿಮ್ಮನ್ನು ಹೊರತುಪಡಿಸಿ ಎಲ್ಲರಿಗೂ, ನಿಮ್ಮದು ಬಹಳ ಸುಲಭವಾದ ಕೆಲಸ ಎಂದೇ ಅನಿಸುತ್ತಿರುತ್ತದೆ. ಅದೃಷ್ಟಸಂಖ್ಯೆ: 9
ತುಲಾ: ಬಹಳ ಅಗತ್ಯದ ವಸ್ತುಗಳು ಖಾಲಿ ಆಗುತ್ತಿರುವುದು ಗಮನಕ್ಕೆ ಬರುತ್ತದೆ. ಆ ಬಗ್ಗೆ ತಾತ್ಸಾರ ಬೇಡ. ಅದೃಷ್ಟಸಂಖ್ಯೆ: 3
ವೃಶ್ಚಿಕ: ದುಶ್ಚಟಗಳು ಅಭ್ಯಾಸ ಇದ್ದಲ್ಲಿ ನಿಮಗೆ ಇದು ಬಹಳ ಕೆಟ್ಟ ಹಾಗೂ ಕಷ್ಟದ ದಿನ ಆಗಬಹುದು. ಎಚ್ಚರವಿರಲಿ. ಅದೃಷ್ಟಸಂಖ್ಯೆ: 5
ಧನಸ್ಸು: ಅವಶ್ಯವಾಗಿ ಮಾಡಲೇಬೇಕಾದ ಕೆಲಸಗಳನ್ನು ಮಾಡದೆ ತಪ್ಪಿಸಿಕೊಂಡಿದ್ದೀರಿ. ಇಂದು ಹಾಗೆ ಮಾಡಲಾಗದು. ಅದೃಷ್ಟಸಂಖ್ಯೆ: 1
ಮಕರ: ತನ್ನ ಕೆಲಸವನ್ನು ಬೇಗ ಮಾಡಿಕೊಡು ಎಂದು ಸ್ನೇಹಿತನೊಬ್ಬ ನಿಮಗೆ ಗಂಟುಬೀಳುವ ಸಾಧ್ಯತೆಗಳು ಹೆಚ್ಚು. ಅದೃಷ್ಟಸಂಖ್ಯೆ: 9
ಕುಂಭ: ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುತ್ತಿದ್ದ ಸ್ನೇಹಿತ ಕಾರಣಾಂತರಗಳಿಂದ ಜತೆಗಿಲ್ಲದೆ ಕಷ್ಟವೆನಿಸುತ್ತದೆ. ಅದೃಷ್ಟಸಂಖ್ಯೆ: 6
ಮೀನ: ನಿಮ್ಮನ್ನು ಹೊಗಳುವ ಎಲ್ಲರೂ ನಿಮ್ಮ ಶುಭ ಅಥವಾ ಲಾಭವನ್ನು ಬಯಸುವವರು ಎಂದು ತಪ್ಪು ತಿಳಿಯಬೇಡಿ. ಅದೃಷ್ಟಸಂಖ್ಯೆ: 3