

ಮೇಷ: ಪ್ರತಿಕೂಲ ಸಂದರ್ಭಗಳು ಎದುರಾದರೂ ಮನೋಬಲವನ್ನು ಮಾತ್ರ ಕಳೆದುಕೊಳ್ಳದಿರಿ. ಗುರಿ ಸೇರುವ ಅವಕಾಶಗಳಿವೆ. ಶುಭಸಂಖ್ಯೆ: 7
ವೃಷಭ: ಸುಳ್ಳು ಆರೋಪ ಬರಬಹುದು. ಅದಕ್ಕೆ ಹೆದರದೆ ನಿಮ್ಮ ಕೆಲಸಗಳನ್ನು ಮಾಡಿ ಮುಗಿಸಿ. ಬೇಗ ಯಶಸ್ವಿಯಾಗಲಿದ್ದೀರಿ. ಶುಭಸಂಖ್ಯೆ: 4
ಮಿಥುನ: ಅಪರಿಚಿತ ಮೂಲದಿಂದ ಹೊಸ ಬಗೆಯ ನೆರವು ಒದಗಿಬರುವಂತಹ ಹೇರಳವಾದ ಅವಕಾಶಗಳಿವೆ. ಬಳಸಿ. ಶುಭಸಂಖ್ಯೆ: 6
ಕಟಕ: ದೈನಂದಿನ ಕೆಲಸದ ಏಕತಾನತೆಯಿಂದ ಬೇಸರ ಬರುವುದು ಸಹಜ. ಆದರೂ ನೀವು ವಿಮುಖರಾಗದೆ ಗೆಲ್ಲಬೇಕು. ಶುಭಸಂಖ್ಯೆ: 5
ಸಿಂಹ: ಕಚೇರಿಯಲ್ಲಿ ಹೆಚ್ಚಿನ ಉದ್ವೇಗ, ಒತ್ತಡಗಳು ಎದುರಾಗಬಹುದು. ಆದರೂ ಅಪಾರವಾದ ತಾಳ್ಮೆ, ಮೌನದಿಂದ ಎದುರಿಸಿ. ಶುಭಸಂಖ್ಯೆ: 2
ಕನ್ಯಾ: ದೂರದ ಊರಿಗೆ ಹೋಗಿಬರುವ ಸಂದರ್ಭ ಬರಬಹುದು. ಹೊಸ ಹೊಸ ಅನುಭವಗಳನ್ನು ಕೂಡ ಪಡೆದುಕೊಳ್ಳಲಿದ್ದೀರಿ. ಶುಭಸಂಖ್ಯೆ: 1
ತುಲಾ: ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಚೇತರಿಕೆ ಕಂಡುಬರುವುದರಿಂದ ಹರ್ಷಿಸುವಿರಿ. ಆಪ್ತರ ಭೇಟಿಯ ಅವಕಾಶವಿದೆ. ಶುಭಸಂಖ್ಯೆ: 8
ವೃಶ್ಚಿಕ: ಲಾಟರಿ, ಬೆಟ್ಟಿಂಗ್ನಂತಹ ಆಮಿಷಗಳು ಕೈಬೀಸಿ ಕರೆಯಬಹುದು. ಅವುಗಳ ಕಡೆಗೆ ಹೋಗುವ ದುಸ್ಸಾಹಸ ಬಿಡಿ. ಶುಭಸಂಖ್ಯೆ: 3
ಧನಸ್ಸು: ಸ್ವಲ್ಪ ಕಾಲ ತಾಳ್ಮೆಯಿಂದಿದ್ದರೆ ಅಪರಿಚಿತರು ಕೂಡ ನಿಮ್ಮ ಮಿತ್ರರಾಗುವ ವಿಶೇಷವಾದ ತಿರುವೊಂದು ಸೃಷ್ಟಿಯಾಗಲಿದೆ. ಶುಭಸಂಖ್ಯೆ: 9
ಮಕರ: ತಪ್ಪುಗಳು ಉಂಟಾಗುವುದು ಸಹಜವಾದದ್ದು. ಅದನ್ನರಿತು ಪುನಃ ಪ್ರಯತ್ನಕ್ಕೆ ಮುಂದಾಗಿ. ಇನ್ನೂ ಅವಕಾಶವಿದೆ. ಶುಭಸಂಖ್ಯೆ: 7
ಕುಂಭ: ಒತ್ತಡವನ್ನು ಒಬ್ಬರೇ ಸಹಿಸಿಕೊಳ್ಳುವ ಬದಲು ಸಂಗಾತಿಯೊಡನೆ ಚರ್ಚಿಸಿ. ಅವರ ಧನಾತ್ಮಕ ಚಿಂತನೆಯ ಬೆಂಬಲವಿದೆ. ಶುಭಸಂಖ್ಯೆ: 4
ಮೀನ: ಎಲ್ಲರ ಜತೆಗೇ ಇದ್ದುಕೊಂಡು ಗೆಲ್ಲುವಂತಹ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಿ. ಇದರಿಂದ ಹೆಚ್ಚಿನ ಲಾಭ ಲಭ್ಯವಾಗಲಿದೆ. ಶುಭಸಂಖ್ಯೆ: 6