ಈ ರಾಶಿಯವರಿಗಿಂದು ಸಂಗಾತಿಯಿಂದ ಧನಾಗಮನ, ಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ವಂತ ಉದ್ಯಮ, ವ್ಯಾಪಾರ ಕ್ಷೇತ್ರದಲ್ಲಿ ಲಾಭ. ಅಧಿಕ ಧನ ಸಂಪಾದನೆ. ರಿಯಲ್ ಎಸ್ಟೇಟ್ ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ: 9

ವೃಷಭ: ಧನ ನಷ್ಟವಾಗಲಿದೆ. ಮಾನ ಅಪಮಾನಗಳಿಗೆ ಗುರಿಯಾಗುವಿರಿ. ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕುವ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 1

ಮಿಥುನ: ಸಾಲದ ಚಿಂತೆ. ನೆರೆಹೊರೆಯವರಿಂದ, ಬಂಧು ಗಳಿಂದ ಸಾಲ ಬೇಡುವ ಸನ್ನಿವೇಶ. ಅನಾರೋಗ್ಯ ಸಮಸ್ಯೆ ಹೆಚ್ಚು ಬಾಧಿಸುವುದು. ಶುಭಸಂಖ್ಯೆ: 7

ಕಟಕ: ಮಕ್ಕಳಿಂದ ನಷ್ಟವಾದೀತು. ನೆರೆಹೊರೆಯವರಿಂದ, ಬಾಡಿಗೆದಾರರಿಂದ, ಸೇವಕರಿಂದ ಕಿರಿಕಿರಿ ಅನುಭವಿಸುವಿರಿ. ನಿದ್ರಾಭಂಗ. ಶುಭಸಂಖ್ಯೆ: 5

ಸಿಂಹ: ಧನಾಗಮನ. ಲಾಭ. ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ಆರ್ಥಿಕ ನಷ್ಟವಾದೀತು. ಮೋಸ ಹೋಗುವ ಸಾಧ್ಯತೆ ಇದೆ. ಶುಭಸಂಖ್ಯೆ: 1

ಕನ್ಯಾ: ಆಕಸ್ಮಿಕ ಅವಘಡಗಳಿಂದ ಆರೋಗ್ಯ ಸಮಸ್ಯೆ. ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ. ಉದ್ಯೋಗ ಒತ್ತಡಗಳಿಂದ ತೊಂದರೆ. ಶುಭಸಂಖ್ಯೆ: 9

ತುಲಾ: ಸಂಗಾತಿಯಿಂದ ಧನಾಗಮನ, ಲಾಭ. ತಂದೆಯೊಡನೆ ಕಿರಿಕಿರಿ. ಅನಿರೀಕ್ಷಿತ ಘಟನೆಯಿಂದ ನಷ್ಟ. ಸಂಕಷ್ಟದ ಸಮಯವಿದು. ಶುಭಸಂಖ್ಯೆ: 6

ವೃಶ್ಚಿಕ: ಪ್ರಯಾಣದಿಂದ ಅನುಕೂಲವಾಗಲಿದೆ. ಆಕಸ್ಮಿಕವಾಗಿ ಅಧಿಕ ಪ್ರಮಾಣದಲ್ಲಿ ಧನಾಗಮನ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 3

ಧನುಸ್ಸು: ಬಡ್ಡಿ ವ್ಯವಹಾರಸ್ಥರಿಗೆ, ಧಾರ್ವಿುಕ ಕ್ಷೇತ್ರದಲ್ಲಿರು ವವರಿಗೆ, ಚಿನ್ನ ವ್ಯವಹಾರಸ್ಥರಿಗೆ ಅನುಕೂಲಕರ ದಿನ. ಅಧಿಕ ನಷ್ಟ ಸಾಧ್ಯತೆ. ಶುಭಸಂಖ್ಯೆ: 4

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ. ಮಿತ್ರರಿಂದ ಆರ್ಥಿಕ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 6

ಕುಂಭ: ಆರೋಗ್ಯದಲ್ಲಿ ಏರುಪೇರು. ಆಕಸ್ಮಿಕ ಧನಾಗಮನ. ಸಾಲಗಾರರಿಂದ, ಶತ್ರುಗಳಿಂದ ತೊಂದರೆ. ಅಪಾಯವಾಗುವ ಸಾಧ್ಯತೆ. ಶುಭಸಂಖ್ಯೆ: 4

ಮೀನ: ಸ್ಥಿರಾಸ್ತಿಯಿಂದ ಧನಾಗಮನ. ಆರ್ಥಿಕ ಸಂಕಷ್ಟಗಳು ಬಗೆಹರಿದು ಸಂತಸ. ಉದ್ಯೋಗ ದೊರೆತು ಮಾನಸಿಕ ನೆಮ್ಮದಿ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net