

ಮೇಷ: ಶಿಕ್ಷಕ ವೃಂದಕ್ಕೆ ಒತ್ತಡ ಉಂಟಾಗಬಹುದು. ಹಣಕಾಸು ಸಂಸ್ಥೆಯ ಉದ್ಯೋಗಸ್ಥರಿಗೆ ಅಶುಭ. ಮಾನಸಿಕ ಒತ್ತಡ ಎದುರಿಸುವಿರಿ. ಶುಭಸಂಖ್ಯೆ: 5
ವೃಷಭ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಸ್ತಿ ಕಲಹಗಳು ಅಂತ್ಯವಾಗಿ ಮಾನಸಿಕ ನೆಮ್ಮದಿ. ರಕ್ತದೊತ್ತಡ ಕಡಿಮೆಯಾಗುತ್ತದೆ. ಶುಭಸಂಖ್ಯೆ: 9
ಮಿಥುನ: ಲೇವಾದೇವಿ ವ್ಯವಹಾರದಲ್ಲಿ ಸರಾಸರಿ, ಆಹಾರ ಸಂಸ್ಕರಣೆ ವ್ಯಾಪಾರದಲ್ಲಿ ಬೇಡಿಕೆ, ಕಟ್ಟಡ ಪರಿಕರ ವ್ಯವಹಾರಸ್ಥರಿಗೆ ಆದಾಯ. ಶುಭಸಂಖ್ಯೆ: 1
ಕಟಕ: ಕೆಲಸಗಳಲ್ಲಿ ಉತ್ಸಾಹ ಇರಲಿದೆ. ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿಕೊಳ್ಳುವಿರಿ. ಖರ್ಚು ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಿ. ಶುಭಸಂಖ್ಯೆ: 8
ಸಿಂಹ: ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸಂತಸ. ಉದ್ಯೋಗದಲ್ಲಿ ಬಡ್ತಿ. ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಶುಭಸಂಖ್ಯೆ: 1
ಕನ್ಯಾ: ಗರ್ಭಿಣಿಯರು ಎಚ್ಚರದಿಂದಿರಿ. ಅತಿಯಾದ ಆತ್ಮವಿಶ್ವಾಸದಿಂದ ಸೋಲು. ಗಣ್ಯ ವ್ಯಕ್ತಿಗಳ ಸಹಾಯ ಸಕಾಲಕ್ಕೆ ದೊರೆಯುತ್ತದೆ. ಶುಭಸಂಖ್ಯೆ: 3
ತುಲಾ: ಮಹಿಳೆಯರಿಗೆ ಉದ್ಯೋಗದಲ್ಲಿ ಶುಭದಿನ. ಅಧಿಕಾರಿಗಳಿಗೆ ಉತ್ತಮಕಾಲ. ಅನಿವಾರ್ಯವಾಗಿ ನೌಕರಿಯಲ್ಲಿ ಬದಲಾವಣೆ. ಶುಭಸಂಖ್ಯೆ: 6
ವೃಶ್ಚಿಕ: ವ್ಯಾಪಾರ ವ್ಯವಹಾರಗಳಲ್ಲಿ ಶುಭದಾಯಕ ದಿನ. ಕೃಷಿ ವಿಸ್ತರಣೆಗೆ ವಿಶೇಷ ಯೋಜನೆ. ಇದು ಅದೃಷ್ಟದ ದಿನವಾಗಿರುತ್ತದೆ. ಶುಭಸಂಖ್ಯೆ: 4
ಧನುಸ್ಸು: ಕುಟುಂಬದಲ್ಲಿ ಸಾಮರಸ್ಯ. ಹಣಕ್ಕೆ ತೊಂದರೆ ಆಗುವುದಿಲ್ಲ. ಮನೆ ಕಟ್ಟಿಕೊಳ್ಳುವ ಚಿಂತನೆ ಮಾಡುವಿರಿ, ಮುಂದುವರಿಯಿರಿ. ಶುಭಸಂಖ್ಯೆ: 9
ಮಕರ: ರಾಜಕಾರಣಿಗಳಿಗೆ ಉತ್ತಮ ಸಮಯ ಒದಗಿಬಂದಿದೆ. ಆಂತರಿಕ ಶತ್ರುಗಳು ಹೆಚ್ಚಾಗುವರು. ಮನೆಯ ನವೀಕರಣದ ಚಿಂತನೆ. ಶುಭಸಂಖ್ಯೆ: 2
ಕುಂಭ: ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದಿರಿ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ದೈವದ ಮೇಲೆ ನಂಬಿಕೆ ಇರಲಿ. ಶುಭಸಂಖ್ಯೆ: 5
ಮೀನ: ಹಣಕಾಸಿನಲ್ಲಿ ಅಭಿವೃದ್ಧಿಯಾಗಲಿದೆ. ತೀರ್ಮಾನಗಳನ್ನು ಬದಲಾಯಿಸುವುದು ಒಳ್ಳೆಯದಲ್ಲ. ಅನವಶ್ಯಕ ಖರ್ಚು ಮಾಡಬೇಡಿ. ಶುಭಸಂಖ್ಯೆ: 3