

ಮೇಷ: ನಟರಿಗೆ ಅವಕಾಶಗಳು ಸಿಗಲಿವೆ. ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಸಂಪಾದನೆ ಹೆಚ್ಚಲಿದೆ. ಅನಾರೋಗ್ಯದ ಭೀತಿ. ಶುಭಸಂಖ್ಯೆ: 6
ವೃಷಭ: ಬಂಧುಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಲಿದ್ದೀರಿ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆಯಲಿವೆ. ಶುಭಸಂಖ್ಯೆ: 9
ಮಿಥುನ: ಪ್ರಭಾವಶಾಲಿಗಳ ಭೇಟಿ. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ಪೀಠಾಧಿಪತಿಗಳ ದರ್ಶನ. ಶುಭಸಂಖ್ಯೆ: 5
ಕಟಕ: ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವ ಸಂಭವ. ರಾಜಕೀಯದ ಪ್ರಬಲ ಆಕಾಂಕ್ಷಿಯಾಗಿರುವ ನೀವು ಚುರುಕಾಗಬೇಕಾಗಿದೆ. ಶುಭಸಂಖ್ಯೆ: 4
ಸಿಂಹ: ಅನಿರೀಕ್ಷಿತ ಪ್ರಯಾಣ. ಶೀಘ್ರವಾಗಿ ನಿರ್ದಿಷ್ಟವಾದ ಕಾರ್ಯವೊಂದನ್ನು ಪೂರೈಸಲೇಬೇಕೆಂಬುದು ಕನಸಾಗಿಯೇ ಉಳಿಯುವುದು. ಶುಭಸಂಖ್ಯೆ: 7
ಕನ್ಯಾ: ನಾಜೂಕಿನ ಕೆಲಸಕಾರ್ಯಗಳಿಂದಾಗಿ ವಿಶೇಷ ಮನ್ನಣೆ. ಸಹೋದ್ಯೋಗಿಗಳೊಂದಿಗೆ ಹೊಂದಿ ಕೊಂಡು ಹೋಗುವುದು ಉತ್ತಮ. ಶುಭಸಂಖ್ಯೆ: 8
ತುಲಾ: ಧರ್ಮ ಕಾರ್ಯವನ್ನು ಶ್ರದ್ಧೆಯಿಂದ ಆಚರಿಸುವಿರಿ. ಉದ್ದಿಮೆದಾರರಿಗೆ ಪ್ರತಿಕೂಲ ವಾತಾವರಣ. ಕಾರ್ವಿುಕರಿಗೆ ಆದಾಯ. ಶುಭಸಂಖ್ಯೆ:1
ವೃಶ್ಚಿಕ: ವ್ಯಾಪಾರ, ವೃತ್ತಿಯಲ್ಲಿ ಆರೋಗ್ಯಕರ ಪೈಪೋಟಿ. ಮಗನ ಕೆಲಸದ ವಿಚಾರದಲ್ಲಿ ವಿದೇಶದಲ್ಲಿರುವ ಸ್ನೇಹಿತ ನೆರವಿಗೆ ಬರಲಿದ್ದಾರೆ. ಶುಭಸಂಖ್ಯೆ: 7
ಧನುಸ್ಸು: ವಿವಾದವಿರುವ ಬಹುತೇಕ ವಿಷಯಗಳು ಇತ್ಯರ್ಥಗೊಂಡು ಮನಸ್ಸಿಗೆ ಹಿತ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಶುಭಸಂಖ್ಯೆ: 2
ಮಕರ: ಬಹು ವಿಧದ ಉದ್ಯೋಗಾವಕಾಶಗಳು ಬರಲಿವೆ. ಆಸ್ತಿ ವಿವಾದಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಬಯಲಿಗೆ ತರುವ ಪ್ರಯತ್ನ. ಶುಭಸಂಖ್ಯೆ: 6
ಕುಂಭ: ಮನೆಯಲ್ಲಿ ಶಕ್ಷಿುಭಕಾರ್ಯಗಳು. ನಿಮ್ಮ ಜವಾಬ್ದಾರಿ ಹೆಚ್ಚಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿ. ವಿಘ್ನೕಶ್ವರನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 1
ಮೀನ: ಅನಿರೀಕ್ಷಿತ ಬಂಧುಗಳ ಆಗಮನ. ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿವಾದಗಳು ತಾರಕಕ್ಕೆ. ಅನಾರೋಗ್ಯ ಭೀತಿ ಕಾಡಬಹುದು. ಶುಭಸಂಖ್ಯೆ: 5