

ಮೇಷ: ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಬಂಧುಗಳ ಸಹಾಯ ಅನಿರಿಕ್ಷಿತವಾಗಿ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ಕೃಷಿಕರಿಗೆ ಲಾಭದಾಯಕ ದಿನ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಗೌರವ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 1
ಮಿಥುನ: ಮಕ್ಕಳಿಂದ ಸಂತೋಷ ಉಂಟಾಗಲಿದೆ. ಹಿರಿಯರ ಆರೋಗ್ಯವನ್ನು ಕಾಳಜಿಯಿಂದ ಗಮನಿಸಿ. ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 5
ಕಟಕ: ಬಂಧು ಮಿತ್ರರ ಭೇಟಿ. ಕೋಪದಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 8
ಸಿಂಹ: ದೈಹಿಕ ಅಸಮರ್ಥತೆ ಕಂಡುಬರುವುದು. ಉದ್ಯೋಗ ಸ್ಥಳದಲ್ಲಿ ವಿನಾಕಾರಣ ಕಿರಿಕಿರಿ. ಅಧ್ಯಾತ್ಮದ ಕಡೆ ಒಲವು ಹೆಚ್ಚಲಿದೆ. ಶುಭಸಂಖ್ಯೆ: 2
ಕನ್ಯಾ: ಕೀರ್ತಿ ಸಂಪಾದನೆಯಾಗಲಿದೆ. ಜನಮನ್ನಣೆ ದೊರೆತು ಮಾನಸಿಕ ನೆಮ್ಮದಿ. ಸ್ವಸಾಮರ್ಥ್ಯದಿಂದ ನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 7
ತುಲಾ: ಸಹೋದ್ಯೋಗಿಗಳಿಂದ ಸಹಕಾರ ದೊರೆಯುವುದು. ಗಣ್ಯ ವ್ಯಕ್ತಿಗಳ ಭೇಟಿ ಮಾಡುವಿರಿ. ಅನಾರೋಗ್ಯದಿಂದ ಚೇತರಿಕೆ. ಶುಭಸಂಖ್ಯೆ: 4
ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ. ಪರರಿಂದ ವಂಚನೆಯಾಗಬಹುದು, ಹುಷಾರಾಗಿರಿ. ಹಣಕಾಸಿನ ಕೊರತೆ ಬೇಸರ ಮೂಡಿಸಲಿದೆ. ಶುಭಸಂಖ್ಯೆ: 9
ಧನುಸ್ಸು: ಆಸ್ತಿಯ ವಿವಾದ ಒಂದು ಹಂತಕ್ಕೆ ಬರಲಿದೆ. ಗುರುಹಿರಿಯರಿಂದ ಮಾರ್ಗದರ್ಶನ. ಉನ್ನತ ವ್ಯಾಸಂಗದಲ್ಲಿ ಆಸಕ್ತಿ ತೋರುವಿರಿ. ಶುಭಸಂಖ್ಯೆ: 5
ಮಕರ: ವಿವಾಹ ಕಾರ್ಯಕ್ಕೆ ಶುಭ ಸಂದರ್ಭ. ಸಹೋದರರಿಂದ ಸಹಾಯ ದೊರೆಯುವುದು. ಮನಸ್ಸಿನಲ್ಲಿ ಆತಂಕ ಮನೆ ಮಾಡುವುದು. ಶುಭಸಂಖ್ಯೆ: 5
ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ ಉಂಟಾಗುವುದು. ಸಾವಯವ ಕೃಷಿಕರಿಗೆ ಹೆಚ್ಚುವ ಬೇಡಿಕೆ. ಆರ್ಥಿಕತೆಯಲ್ಲಿ ಸ್ಥಿರತೆ ಇರಲಿದೆ. ಶುಭಸಂಖ್ಯೆ: 7
ಮೀನ: ಸಲಹೆಗಳನ್ನು ಸ್ವೀಕರಿಸಿ. ಮಾತಿನಲ್ಲಿ ಎಚ್ಚರವಿರಲಿ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಅವಕಾಶ ಬರಲಿದೆ. ಇಷ್ಟದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 2