ನಿತ್ಯಭವಿಷ್ಯ| ಈ ರಾಶಿಯವರ ಬಹುದಿನಗಳ ಕನಸು ಇಂದು ನನಸಾಗಲಿದೆ..

nity
Published on

ಮೇಷ: ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕುಟುಂಬದ ಸಮಸ್ಯೆಯೊಂದು ಬಗೆಹರಿಯಲಿದೆ. ಹೊಸ ಉದ್ಯಮಕ್ಕೆ ಚಾಲನೆ. ಶುಭಸಂಖ್ಯೆ: 9

ವೃಷಭ: ರಾಜಕೀಯದಲ್ಲಿ ತಾಳ್ಮೆಯಿಂದ ವರ್ತಿಸಿದರೆ ಅಧಿಕಾರ ಪ್ರಾಪ್ತಿ. ಸಂಗೀತಗಾರರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಅವಕಾಶ. ಶುಭಸಂಖ್ಯೆ: 1

ಮಿಥುನ: ಅನಾರೋಗ್ಯ ಕಾಡಬಹುದು. ವೈದ್ಯರ ಸಲಹೆ ಪಾಲಿಸಿ. ಹಳೆಯ ವಿವಾದ ಪುನರಾವರ್ತನೆ. ಮಕ್ಕಳೊಂದಿಗೆ ಕಿರಿಕಿರಿ. ಶುಭಸಂಖ್ಯೆ: 3

ಕಟಕ: ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಬಹಳ ದಿನಗಳ ಕನಸು ನನಸು. ಪತಿಯೊಂದಿಗೆ ವಿಹಾರ.

ಉತ್ತಮ ಭೋಜನ. ಶುಭಸಂಖ್ಯೆ: 8

ಸಿಂಹ: ನಿಮ್ಮ ವಿಚಾರದಿಂದ ಜನಮನ್ನಣೆ. ಆತ್ಮಾಭಿಮಾನದಿಂದ ವರ್ತಿಸಿ. ಹಿರಿಯರೊಂದಿಗೆ ಗೌರವದಿಂದ ಇರಿ. ಶುಭವಾರ್ತೆ. ಶುಭಸಂಖ್ಯೆ: 6

ಕನ್ಯಾ: ಅನವಶ್ಯಕ ತಿರುಗಾಟ. ಪರಿಶ್ರಮವೆಲ್ಲ ವ್ಯರ್ಥವಾಗಿ ಬೇಸರ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 4

ತುಲಾ: ತಾಳ್ಮೆಯಿಂದ ವರ್ತಿಸಿದಷ್ಟೂ ನಿಮಗೆ ಒಳ್ಳೆಯದು. ಮಕ್ಕಳಿಂದ ಖರ್ಚು. ಹಳೆಯ ರೋಗ ಬಂದು ಬಾಧಿಸಬಹುದು. ಶುಭಸಂಖ್ಯೆ: 5

ವೃಶ್ಚಿಕ: ಅಕ್ಕ ತಂಗಿಯರಿಂದ ಸಮಾಧಾನ. ಆಸ್ತಿ ವಿಚಾರದಲ್ಲಿ ಕಿರಿಕಿರಿ ಉಂಟಾಗಬಹುದು. ಮನೆ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 6

ಧನಸ್ಸು: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ತಾಳ್ಮೆಯಿಂದ ವರ್ತಿಸಿ. ಔತಣಕೂಟದಲ್ಲಿ ಭಾಗಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4

ಮಕರ: ಶ್ರಮಕ್ಕೆ ತಕ್ಕುದಾದ ಲಇಲ್ಲ. ನಿರಾಸೆ. ಹಿತೈಷಿಗಳಿಂದ ಸಮಾಧಾನ. ಆತ್ಮೀಯರೊಬ್ಬರ ಭೇಟಿಯಿಂದ ಸಮಾಧಾನ. ಶುಭಸಂಖ್ಯೆ: 2

ಕುಂಭ: ಧನದ ಅಪವ್ಯಯ. ಕುಟುಂಬದಲ್ಲಿ ಪರಸ್ಪರ ಮನಸ್ತಾಪ. ಮಗಳಿಂದ ಶುಭಸುದ್ದಿ. ವ್ಯಾಪಾರಸ್ಥರಿಗೆ ನಷ್ಟ ಸಾಧ್ಯತೆ. ಶುಭಸಂಖ್ಯೆ: 5

ಮೀನ : ನಟರಿಗೆ ವಿಶೇಷ ದಿನ. ಹಲವು ದಿನದಿಂದ ಪಟ್ಟ ಕಷ್ಟಕ್ಕೆ ಪ್ರತಿಫಲ. ಕೃಷಿಕರಿಗೆ ಅಧಿಕ ಲಾಭ. ಧಾರ್ಮಿಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net