ಈ ರಾಶಿಯವರ ನನೆಗುದಿಗೆ ಬಿದ್ದ ಕೆಲಸಕ್ಕೆ ಇಂದು ಚಾಲನೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕಚೇರಿಯಲ್ಲಿ ಸಮಸ್ಯೆ ಆಗಬಹುದು. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಆದಾಯ ಕುಸಿತವಾಗುವ ಸಂಭವ. ಕೃಷಿಕರಿಗೆ ಲಾಭ. ಶುಭಸಂಖ್ಯೆ: 5

ವೃಷಭ: ವಿದೇಶ ಪ್ರಯಾಣದ ಒಲವು ಹೆಚ್ಚಾಗಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ವಿಶೇಷ ದಿನ. ಸಾಹಿತಿಗಳು ಮತ್ತು ಬರಹಗಾರರಿಗೆ ಶುಭದಿನ. ಶುಭಸಂಖ್ಯೆ: 1

ಮಿಥುನ: ಹಲವು ದಿನಗಳಿಂದ ಕಷ್ಟಪಟ್ಟ ವ್ಯವಹಾರ ಕುದುರಲಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ಇರಿ. ಅವಿವಾಹಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 9

ಕಟಕ: ಕಲಾವಿದರಿಗೆ ವಿಶೇಷ ದಿನ. ತಂದೆ ತಾಯಿಯ ಆರೋಗ್ಯ ವಿಷಯದಲ್ಲಿ ಕಾಳಜಿ ಅಗತ್ಯ. ಸಹೋದ್ಯೋಗಿಗಳ ಕಿರುಕುಳ. ಶುಭಸಂಖ್ಯೆ: 2

ಸಿಂಹ: ಪದವಿ ಪ್ರಾಪ್ತಿಯಲ್ಲಿ ಹಿತೈಷಿಗಳಿಂದ ಸಹಕಾರ. ಸಾರ್ವಜನಿಕ ರಂಗದಲ್ಲಿ ಅವಮಾನ. ವ್ಯವಹಾರದಲ್ಲಿ ಅಸ್ಥಿರತೆ ಉಂಟಾಗಬಹುದು. ಶುಭಸಂಖ್ಯೆ: 8

ಕನ್ಯಾ: ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಅಗತ್ಯ. ಶಿಲ್ಪಿಗಳಿಗೆ ಹೆಚ್ಚಿನ ಬೇಡಿಕೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 7

ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು. ಆರಕ್ಷಕರಿಗೆ ಕಿರಿಕಿರಿ. ಸ್ವಯಂ ಉದ್ಯೋಗ ನಿರ್ಧಾರ ಕೈ ಕೊಡಬಹುದು. ಕುಟುಂಬದಲ್ಲಿ ಗೌರವ. ಶುಭಸಂಖ್ಯೆ:1

ವೃಶ್ಚಿಕ: ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭದಿನ. ಅವಿವಾಹಿತರಿಗೆ ವಿವಾಹ ನಿಶ್ಚಯ. ಸರ್ಕಾರಿ ಕ್ಷೇತ್ರದಲ್ಲಿ ವಿಪುಲ ಅವಕಾಶ. ಶುಭಸಂಖ್ಯೆ: 3

ಧನುಸ್ಸು: ಭೂ ವ್ಯವಹಾರದಲ್ಲಿ ಮೋಸ. ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಬಡ್ತಿಸಾಧ್ಯತೆ. ಕಲಾವಿದರಿಗೆ ವಿಶೇಷ ಅವಕಾಶ. ಶುಭಸಂಖ್ಯೆ: 9

ಮಕರ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ಅನವಶ್ಯಕ ಖರ್ಚು ತಲೆದೋರಬಹುದು. ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು. ಶುಭಸಂಖ್ಯೆ: 2

ಕುಂಭ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಬ್ಯಾಂಕಿಂಗ್ ಉದ್ಯೋಗಿಗಳಿಗೆ ವಿಶೇಷ ಲಾಭ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡೀತು. ಶುಭಸಂಖ್ಯೆ: 7

ಮೀನ: ನಿವೇಶನ ಖರೀದಿ ಸಾಧ್ಯತೆ ಇದೆ. ಪ್ರೀತಿ ಪ್ರೇಮದಿಂದ ಮನಸ್ಸಿಗೆ ಘಾಸಿ. ವೃಥಾ ತೊಂದರೆ ಅನುಭವಿಸಬೇಕಾಗಬಹುದು. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net