ಈ ರಾಶಿಯವರಿಗೆ ಇಂದು ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಧಾರ್ವಿುಕ ನಾಯಕರಿಗೆ ಶುಭ. ಪ್ರಯಾಣದಿಂದ ಲಾಭ. ಆರೋಗ್ಯ ವೃದ್ಧಿ. ಹೊಸಮಿತ್ರರ ಭೇಟಿ. ಸಂತೋಷದಿಂದ ಕೂಡಿದ ದಿನ. ಶುಭಸಂಖ್ಯೆ: 8

ವೃಷಭ: ರಾಜಕೀಯದವರಿಗೆ, ಆಹಾರ, ವಸ್ತ್ರ, ಆಭರಣ ವ್ಯವಹಾರಸ್ಥರಿಗೆ ಅಭಿವೃದ್ಧಿ. ನಿರೀಕ್ಷಿತ ಧನ ವೃದ್ಧಿ. ವಿದ್ಯಾರ್ಥಿಗಳಿಗೆ ಸಹಾಯ. ಶುಭಸಂಖ್ಯೆ: 1

ಮಿಥುನ: ತಾಳ್ಮೆಯಿಂದ ಶ್ರೇಯಸ್ಸು. ನಿರೀಕ್ಷಿತ ಧನಾರ್ಜನೆ. ಸಹೋದರರಿಂದ ಸುಖ. ಅಧ್ಯಯನ ನಿರತರಿಗೆ ಸೂಕ್ತ ಸಹಾಯ ಲಭ್ಯ. ಶುಭಸಂಖ್ಯೆ: 8

ಕಟಕ: ಉತ್ತಮ ವಾಕ್ ಶಕ್ತಿಯಿಂದ ನಿರೀಕ್ಷಿತ ಧನಾಗಮ. ಭೂಮಿ ವಾಹನಾದಿ ಸುಖ. ಸ್ವಂತ ಪರಿಶ್ರಮದಿಂದ ಗುರಿ ಸಾಧಿಸಿದ ತೃಪ್ತಿ. ಶುಭಸಂಖ್ಯೆ: 2

ಸಿಂಹ: ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ವೃದ್ಧಿ. ದೇಹಕ್ಕೆ ಶ್ರಮವಾದರೂ ಸಾಧಿಸಿದ ಸಂತೋಷ. ವಿದ್ಯಾರ್ಥಿಗಳಿಗೆ ಯಶದ ಸಮಯ. ಶುಭಸಂಖ್ಯೆ: 3

ಕನ್ಯಾ: ಜಲೋತ್ಪನ್ನ ವಸ್ತುಗಳಲ್ಲಿಯೂ ದೂರ ಪ್ರಯಾಣದಲ್ಲೂ ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ: 7

ತುಲಾ: ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಆರೋಗ್ಯ ಉತ್ತಮ. ಶುಭಸಂಖ್ಯೆ:6

ವೃಶ್ಚಿಕ: ಉತ್ತಮ ಮಾತುಗಳಿಂದ ಕೂಡಿದ ಕಾರ್ಯವೈಖರಿ. ಮಿತ್ರರ ಸಹಾಯ ಸಿಗದು. ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಶುಭಸಂಖ್ಯೆ: 4

ಧನುಸ್ಸು: ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಶುಭಸಂಖ್ಯೆ: 1

ಮಕರ: ಮಾತಿನಲ್ಲಿ ತಾಳ್ಮೆಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ. ಶುಭಸಂಖ್ಯೆ: 5

ಕುಂಭ: ಆರೋಗ್ಯ ಹುಷಾರು. ಸಾಂಸಾರಿಕ ಸುಖ ವಕ್ಷಿುಧ್ಯಮ. ಮಿತ್ರರ ಭೇಟಿ. ಗುರುಹಿರಿಯರ ಸಹಕಾರ ಮಾರ್ಗದರ್ಶನದ ಲಾಭ. ಶುಭಸಂಖ್ಯೆ: 7

ಮೀನ: ಧನ ಸಂಪತ್ತಿನ ವೃದ್ಧಿ. ವ್ಯವಹಾರದಲ್ಲಿ ಗೌರವ. ಸಹೋದ್ಯೋಗಿಗಳಿಂದ ಸಹಾಯ. ಆಸ್ತಿ ವಿಚಾರದಲ್ಲಿ ಬದಲಾವಣೆ ಸಂಭವ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net