ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಕೆಲಸದ ಸ್ಥಳದಲ್ಲಿ ಕಿರಿಕಿರಿ ಸಂಭವಿಸಬಹುದು..

Nitya-Bhavishya-vvani-1-2-1
Published on

ಮೇಷ: ಹಿರಿಯರೊಬ್ಬರು ಆನಂದ, ಸಂತೃಪ್ತಿಗಳಿಗೆ ಮಾರ್ಗವನ್ನು ತೋರಿಸಿಕೊಡಲಿದ್ದಾರೆ. ದುಡುಕದಿರಿ. ದೇವರ ಕೃಪೆ ಇದೆ. ಶುಭಸಂಖ್ಯೆ: 6

ವೃಷಭ: ಮೇಲಧಿಕಾರಿಗಳು ಕಿರಿಕಿರಿ ಮಾಡಬಹುದು. ಸ್ವಲ್ಪ ಮಟ್ಟಿಗೆ ತಾಳ್ಮೆ ವಹಿಸಿದರೆ ನಿಮ್ಮ ಪಾಲಿಗೆ ಪದೋನ್ನತಿಯ ಸಿದ್ಧಿ ಸಿಗಲಿದೆ. ಶುಭಸಂಖ್ಯೆ: 2

ಮಿಥುನ: ಸಂತೋಷದಿಂದ ಕಾಲ ಕಳೆಯುವಂಥ ಅವಕಾಶ ನಿಮ್ಮ ಪಾಲಿಗಿದೆ. ಬಿಡುವಿನಲ್ಲಿ ಅಧ್ಯಯನ ಕೂಡ ನಡೆಯಲಿ. ಶುಭಸಂಖ್ಯೆ: 4

ಕಟಕ: ಆಧ್ಯಾತ್ಮಿಕ ವ್ಯಕ್ತಿಯೊಬ್ಬರು ಅಲೌಕಿಕವಾದ ವಿಚಾರವನ್ನು ತಿಳಿಸಿಕೊಡಲಿದ್ದಾರೆ. ಗುರು ದತ್ತಾತ್ರೇಯ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 1

ಸಿಂಹ: ವೈಚಾರಿಕ ಮನೋಭಾವದಿಂದ ಜನಮನ್ನಣೆ ಪಡೆಯುವಿರಿ. ನಿಮ್ಮೊಳಗಿನ ಆತ್ಮಸ್ಥೈರ್ಯ ಕೂಡ ಬೇಗ ವೃದ್ಧಿಯಾಗಲಿದೆ. ಶುಭಸಂಖ್ಯೆ: 9

ಕನ್ಯಾ: ನಾನಾ ರೀತಿಯ ಪರದಾಟಗಳಿಂದ ಬಳಲಿದ್ದೀರಿ. ಅವುಗಳಿಂದ ಬಿಡುಗಡೆಯನ್ನು ಪಡೆದುಕೊಳ್ಳಲು ಚಾಮುಂಡಾಷ್ಟಕವನ್ನು ಓದಿ. ಶುಭಸಂಖ್ಯೆ: 5

ತುಲಾ: ಕೆಲಸದ ಸ್ಥಳದಲ್ಲಿ ಕಿರಿಕಿರಿ ಸಂಭವಿಸಬಹುದು. ಅದಕ್ಕೆ ಒಮ್ಮೆಲೇ ಕೆರಳದಿರಿ. ಸದ್ಯದಲ್ಲೇ ಉತ್ತಮ ಬದಲಾವಣೆಗಳು ಜರುಗಲಿವೆ. ಶುಭಸಂಖ್ಯೆ: 7

ವೃಶ್ಚಿಕ: ಬಯಸಿದ್ದನ್ನು ಪಡೆಯುವುದು ಸರಳವಲ್ಲ. ಆದರೆ ಸದ್ಯಕ್ಕೆ ನಿಮ್ಮ ಬೇಕುಬೇಡಗಳನ್ನು ಬಯಸಿದಂತೆ ಪಡೆಯುವಿರಿ. ಶುಭಸಂಖ್ಯೆ: 3

ಧನುಸ್ಸು: ಹೊಸ ಕೆಲಸದ ಮಾಹಿತಿ ಸಿಕ್ಕಿತೆಂದು ಇರುವ ಕೆಲಸವನ್ನು ಬಿಡದಿರಿ. ಮುಂದೆ ನಿಮಗೇ ತೊಂದರೆಗಳಾಗಬಹುದು. ಶುಭಸಂಖ್ಯೆ: 6

ಮಕರ: ಲಕ್ಷ್ಮಿದೇವಿಯ ಅನುಗ್ರಹ ನಿಮ್ಮ ಪಾಲಿಗಿದೆ. ಆದರೆ ಧನಸಂಪಾದನೆಗೆ ಪರಿಶ್ರಮಪಡುವುದಕ್ಕೆ ಸುಮ್ಮನೆ ಹಿಂಜರಿಯದಿರಿ. ಶುಭಸಂಖ್ಯೆ: 2

ಕುಂಭ: ಜೀವನದ ಗುರಿಗೆ ಸಂತಸದ ಗರಿಯೂ ಏರಲಿದೆ. ಸಾಹಸವನ್ನು ಪ್ರಕಟಿಸಿ. ತಾಳ್ಮೆಯ ಜತೆಜತೆಗೆ ನಿಖರ, ಸುಸ್ಪಷ್ಟ ಮಾತುಗಳಿರಲಿ. ಶುಭಸಂಖ್ಯೆ: 4

ಮೀನ: ಅಲ್ಪಕಾಲದ ತನಕ ಮಾತ್ರ ನೀವು ಸೋಲನ್ನು ಒಪ್ಪಿಕೊಳ್ಳಲು ಮುಂದಾಗುವಿರಿ. ಆದರೆ ನಿಮ್ಮ ಪರಿಶ್ರಮಕ್ಕೆ ಜಯವಾಗಲಿದೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net