

ಮೇಷ: ಸಲಹೆಗಳನ್ನು ಸ್ವೀಕರಿಸಿ. ವಿದ್ಯಾರ್ಥಿಗಳಿಗೆ ಶುಭದಾಯಕವಾದ ದಿನ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯುವುದು. ಶುಭಸಂಖ್ಯೆ: 9
ವೃಷಭ: ಶಿಕ್ಷಕರಿಗೆ ಪ್ರಶಸ್ತಿ ಸನ್ಮಾನಗಳು ಲಭ್ಯ. ಸೇವಾಧಾರಿತ ವೃತ್ತಿಪರರಿಗೆ ಉತ್ತಮ ದಿನ. ವಾಹನ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 1
ಮಿಥುನ: ಯಂತ್ರೋಪಕರಣಗಳಿಂದ ತೊಂದರೆಯಿದೆ, ಎಚ್ಚರ. ಸಹೋದರರಿಂದ ಧನ ಸಹಾಯ ಸಿಗುವುದು. ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 5
ಕಟಕ: ಸ್ಟಾಕ್ ಷೇರಿನ ವ್ಯವಹಾರದಲ್ಲಿ ಮಧ್ಯಮ ಪ್ರಗತಿ. ಜ್ವರದ ಸಮಸ್ಯೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ. ಶುಭಸಂಖ್ಯೆ: 8
ಸಿಂಹ: ಸ್ನೇಹಿತರೊಂದಿಗೆ ವಾಗ್ವಾದ. ತಂದೆಯ ಆರೋಗ್ಯದಲ್ಲಿ ಏರು ಪೇರು. ಹಿರಿಯ ಅಧಿಕಾರಿಗಳಿಂದ ಮೋಸವಾಗುವ ಸಂಭವ. ಶುಭಸಂಖ್ಯೆ: 6
ಕನ್ಯಾ: ವಕೀಲರಿಗೆ ವೃತ್ತಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ. ನೀರು ಸರಬರಾಜಿನಲ್ಲಿ ನಷ್ಟ. ಹಾಲಿನ ವ್ಯಾಪಾರದಲ್ಲಿ ಲಾಭವಿಲ್ಲ. ಶುಭಸಂಖ್ಯೆ: 3
ತುಲಾ: ವಿದ್ಯಾರ್ಥಿಗಳಿಗೆ ಅಶುಭ. ಮನಸ್ಸು ದುರ್ಬಲ ವಾಗುತ್ತದೆ. ಮನಸ್ಸಿನ ನಿಗ್ರಹಕ್ಕೆ ಧ್ಯಾನ ಮಾಡಿ. ವ್ಯಾಪಾರದಲ್ಲಿ ಹಾನಿ ಸಂಭವ. ಶುಭಸಂಖ್ಯೆ: 3
ವೃಶ್ಚಿಕ: ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆ. ಶಿಕ್ಷಕರಿಗೆ ಬಡ್ತಿ. ಹಣಕಾಸಿನ ವ್ಯವಹಾರಸ್ಥರು ಒತ್ತಡ ಎದುರಿಸಬೇಕಾಗುವುದು. ಶುಭಸಂಖ್ಯೆ: 3
ಧನುಸ್ಸು: ವಾಹನ ಅಪಘಾತ ಸಂಭವ, ಹುಷಾರಾಗಿರಿ. ವಿವಾಹದಲ್ಲಿ ವಿವಾದ. ಪಾಲುದಾರಿಕೆಯ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 6
ಮಕರ: ಉನ್ನತ ಗಣಿ ಉದ್ಯಮದಾರರಿಗೆ ಮುನ್ನಡೆ. ವಿದ್ಯುತ್ ಕೆಲಸದವರಿಗೆ ಆದಾಯ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ: 2
ಕುಂಭ: ಹಿತಶತ್ರುಗಳಿಂದ ಎಚ್ಚರವಿರಲಿ. ಕಂಪ್ಯೂಟರ್ ವ್ಯಾಪಾರಿಗಳಿಗೆ ಶುಭ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 4
ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲಕರ ದಿನ. ರಕ್ತದೊತ್ತಡದ ಸಮಸ್ಯೆ. ಉದ್ಯೋಗದಲ್ಲಿ ಪ್ರಯತ್ನದಿಂದ ಯಶ, ನೆಮ್ಮದಿ. ಶುಭಸಂಖ್ಯೆ: 6