

ಮೇಷ: ಚಿನ್ನಾಭರಣ ಕೆಲಸದವರಿಗೆ ಲಾಭವಾಗಲಿದೆ. ಋಣಾತ್ಮಕ ಚಿಂತನೆಯಿಂದ ಹಾನಿ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ವೃಷಭ: ಕಚೇರಿಯಲ್ಲಿ ನಿಮ್ಮ ಕಾರ್ಯವೈಖರಿಯಿಂದ ಧನಲಾಭ. ಆದಾಯದಲ್ಲಿ ಇಳಿಕೆ. ಮಕ್ಕಳ ವಿವಾಹ ಪ್ರಯತ್ನದಲ್ಲಿ ಸಫಲತೆ. ಶುಭಸಂಖ್ಯೆ: 2
ಮಿಥುನ: ಕಾರ್ಖಾನೆ ಕೆಲಸಗಾರರಿಗೆ ಧನಲಾಭವಾಗಲಿದೆ. ಸಂಗಾತಿಯಿಂದ ಅಧಿಕ ಖರ್ಚು. ಅಭಿಮಾನಿಗಳಿಗೆ ಶುಭಸುದ್ದಿ ಬರಲಿದೆ. ಶುಭಸಂಖ್ಯೆ: 7
ಕಟಕ: ಆರ್ಥಿಕ ಪರಿಸ್ಥಿತಿಯ ಏರಿಳಿತ. ಹೊಸ ಉದ್ಯೋಗ ದೊರೆಯುವ ಸಂಭವ. ಕೃಷಿ ಉಪಕರಣಗಳ ಖರೀದಿ ಮಾಡುವಿರಿ. ಶುಭಸಂಖ್ಯೆ: 6
ಸಿಂಹ: ಸಗಟು ವ್ಯಾಪಾರಿಗಳಿಗೆ ಅಧಿಕ ಲಾಭ. ಕಲಾವಿದರಿಗೆ ವಿಶೇಷ ದಿನ. ಮಹಿಳಾ ಉದ್ಯೋಗಿಗಳಿಗೆ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9
ಕನ್ಯಾ: ಮಕ್ಕಳ ಚಿಂತೆ. ಅನಿರೀಕ್ಷಿತ ಖರ್ಚು ಬರುವ ಸಾಧ್ಯತೆ ಇದೆ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 6
ತುಲಾ: ರಿಯಲ್ ಎಸ್ಟೇಟ್ ಉದ್ದಿಮೆಗಳಲ್ಲಿ ನಷ್ಟ. ಕೈಗೆ ಬಂದ ತುತ್ತು ತಪ್ಪೀತು. ಸರ್ಕಾರಿ ಕೆಲಸಗಳಲ್ಲಿ ಸಹಾಯ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 6
ವೃಶ್ಚಿಕ: ಭೂ ವ್ಯವಹಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಸಂಗ. ಮನೆ ಕೊಳ್ಳುವ ಪ್ರಯತ್ನದಲ್ಲಿ ಯಶ. ಗುರುಹಿರಿಯರ ಭೇಟಿ. ಶುಭಸಂಖ್ಯೆ: 4
ಧನುಸ್ಸು: ಸ್ವಂತ ವಾಹನ ಹೊಂದಿದವರಿಗೆ ನಷ್ಟ ಸಾಧ್ಯತೆ. ಕಚೇರಿಯಲ್ಲಿ ವಿವೇಚನೆಯಿಂದ ಮಾಡಿದ ಕೆಲಸದ ಬಗ್ಗೆ ಹಿರಿಯರಿಂದ ಶ್ಲಾಘನೆ. ಶುಭಸಂಖ್ಯೆ: 3
ಮಕರ: ಅಪರಿಚಿತರಿಂದ ಮೋಸವಾದೀತು. ವ್ಯಾಪಾರಿಗಳಿಗೆ ಕೆಲಸಗಾರರಿಂದ ತೊಂದರೆ. ಆತ್ಮೀಯರ ವಿಯೋಗ. ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 7
ಕುಂಭ: ನೋಂದಣಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಕೆಲಸಗಾರರಿಗೆ ತೊಂದರೆ. ಅನಿರೀಕ್ಷಿತ ಅನಾರೋಗ್ಯದಿಂದ ಸಮಸ್ಯೆ. ಶುಭಸಂಖ್ಯೆ: 2
ಮೀನ: ಋಣಾತ್ಮಕ ಚಿಂತನೆಯಿಂದ ಕಿರಿಕಿರಿ ಮಾಡಿಕೊಳ್ಳಬೇಡಿ. ಮನೆ ಬದಲಾವಣೆ ಸಾಧ್ಯತೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 8