ನಿತ್ಯಭವಿಷ್ಯ: ಈ ರಾಶಿಯವರಿಂದು ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಗುರು ರಾಘವೇಂದ್ರರ ಸ್ತುತಿ ಮಾಡಿ

Nitya-Bhavishya-vvani-1
Published on

ಮೇಷ: ಮಂಕು ಕವಿದ ಹಾಗೆ ಕುಳಿತಿದ್ದೀರಿ. ಇದು ಪರಿವರ್ತನೆಗಳಿಗೆ ಸಕಾಲವಾಗಿದೆ. ನಿರಾಸೆ ಬಿಟ್ಟು ಮುಂದೆ ಹೆಜ್ಜೆ ಇಡಿ. ಶುಭಸಂಖ್ಯೆ: 7

ವೃಷಭ: ಮೃತ್ಯುಂಜಯ ಎನಿಸಿದ ಶಿವನನ್ನು ಆರಾಧಿಸಿ. ಕಾಡುವ ಅನಗತ್ಯವಾದ ಭಯಗಳೆಲ್ಲ ಬೇಗನೆ ದೂರವಾಗಲಿವೆ. ಶುಭಸಂಖ್ಯೆ: 8

ಮಿಥುನ: ಸೇಡಿಗೆ ಸೇಡು ಎಂಬ ಪ್ರತೀಕಾರದ ಮನೋಭಾವನೆ ಬಿಡಿ. ಬದಲಾವಣೆಯಿಂದ ಸಿದ್ಧಿಯು ಸಾಕಾರಗೊಳ್ಳಲಿದೆ. ಶುಭಸಂಖ್ಯೆ: 9

ಕಟಕ: ಪೂರ್ವತಯಾರಿ ಇಲ್ಲದೆಯೇ ಯಾವುದೇ ಕೆಲಸವನ್ನೂ ಮಾಡಲು ಹೋಗದಿರಿ. ಕೆಲಸವೇ ಕೈಬಿಟ್ಟೀತು. ಎಚ್ಚರ. ಶುಭಸಂಖ್ಯೆ: 1

ಸಿಂಹ: ಯಾರನ್ನು ನಂಬಬೇಕು, ನಂಬಬಾರದು ಎಂಬ ಗಲಿಬಿಲಿ ಕೊನೆಯಾಗಲಿದೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 2

ಕನ್ಯಾ: ಹಲವು ದಿಕ್ಕುಗಳಿಂದ ಗಮನಿಸಲ್ಪಡುತ್ತಿದ್ದೀರಿ. ಈಗ ನಿಮ್ಮ ಪ್ರಾಮಾಣಿಕತೆ ಮಾತ್ರ ನಿಮ್ಮನ್ನು ಕಾಪಾಡಲಿದೆ. ಶುಭಸಂಖ್ಯೆ: 3

ತುಲಾ: ಸಹಾಯ ಪಡೆಯಲೆಂದು ಹಲವರನ್ನು ಭೇಟಿಯಾದರೂ ಎಲ್ಲರೂ ನೆರವಾಗಲಾರರು. ಹೆಚ್ಚಿನ ಸಹನೆ ಇರಲಿ. ಶುಭಸಂಖ್ಯೆ: 6

ವೃಶ್ಚಿಕ: ಪ್ರಗತಿಪರ ಹೆಜ್ಜೆ ಇಡುವ ನಿಮ್ಮ ತೀರ್ಮಾನ ಸರಿಯಾದರೂ ಹಳೆಯ ಆಚರಣೆಗಳನ್ನೆಲ್ಲ ಅಲಕ್ಷಿಸಲು ಹೋಗದಿರಿ. ಶುಭಸಂಖ್ಯೆ: 5

ಧನುಸ್ಸು: ಎಲ್ಲ ಸನ್ನಿವೇಶಗಳಲ್ಲೂ ನಿಮ್ಮ ನಿರ್ಧಾರವೇ ಸರಿ ಎಂದುಕೊಳ್ಳಬೇಡಿ. ಪರಿಣತರ ಬಳಿ ರ್ಚಚಿಸಿದರೆ ಒಳಿತು. ಶುಭಸಂಖ್ಯೆ: 4

ಕುಂಭ: ಮಾನಸಿಕ ದೃಢತೆಯನ್ನು ಸಂಪಾದಿಸಿ. ಇಂಥ ಗಟ್ಟಿತನ ಇಲ್ಲವಾದರೆ ನಿರಾಸೆಯೇ ಹೆಚ್ಚು ಕಾಡಬಹುದಾಗಿದೆ. ಶುಭಸಂಖ್ಯೆ: 8

ಮಕರ: ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಗುರು ರಾಘವೇಂದ್ರರ ಸ್ತುತಿ ಮಾಡಿ. ಅತಿಯಾಗಿ ಚಿಂತಿಸುವುದೇನೂ ಬೇಡ. ಶುಭಸಂಖ್ಯೆ: 2

ಮೀನ: ಅನೇಕ ಯೋಜನೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೀರಿ. ಅವನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರಬಹುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net