ಈ ರಾಶಿಯವರಿಗಿಂದು ಹಣಕಾಸಿನ ವ್ಯವಹಾರದಲ್ಲಿ ಆದಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಡಿಕೆ ವ್ಯಾಪಾರಸ್ಥರಿಗೆ ಅಧಿಕ ಲಾಭ. ವ್ಯವಹಾರದಲ್ಲಿ ಮಂದಗತಿ ಕಾಣಿಸಬಹುದು. ವಿನಾಕಾರಣ ಕೋಪಕ್ಕೆ ಒಳಗಾಗಬೇಡಿ. ಶುಭಸಂಖ್ಯೆ: 5

ವೃಷಭ: ಕೋರ್ಟ್ ವಿಷಯಗಳಲ್ಲಿ ಜಯ ನಿಮ್ಮ ಪರವೇ ಆಗಲಿದೆ. ವೈದ್ಯ ವೃತ್ತಿಯವರಿಗೆ ಕೆಲಸದ ಒತ್ತಡ. ಸ್ವಂತ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಿಥುನ: ಶಿಕ್ಷಕ ವೃಂದದವರಿಗೆ ಶುಭಸುದ್ದಿಯಿಂದ ಸಂತಸ. ಕಮಿಷನ್ ವ್ಯಾಪಾರದಲ್ಲಿ ಹೆಚ್ಚಿದ ಜವಾಬ್ದಾರಿ. ವಾಹನ ಅಪಘಾತ ಸಾಧ್ಯತೆ. ಶುಭಸಂಖ್ಯೆ: 8

ಕಟಕ: ಮಾನಸಿಕ ಉತ್ಸಾಹ ವೃದ್ಧಿಯಾಗುವುದು. ಮಿತ್ರರಿಂದ ವಿರೋಧ ಎದುರಿಸಬೇಕಾಗಲಿದೆ. ಕೃಷಿ ಉತ್ಪನ್ನ ವರ್ತಕರಿಗೆ ಲಾಭ. ಶುಭಸಂಖ್ಯೆ: 7

ಸಿಂಹ: ಹಣಕಾಸಿನ ವ್ಯವಹಾರದಲ್ಲಿ ಆದಾಯ. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಚಂಚಲ ಮನಸ್ಸು ಇರುತ್ತದೆ. ಇಷ್ಟ ದೇವರನ್ನು ಭಜಿಸಿ. ಶುಭಸಂಖ್ಯೆ: 2

ಕನ್ಯಾ: ಹೋಟೆಲ್ ವ್ಯವಹಾರ ಅಬಾಧಿತವಾಗಿರಲಿದೆ. ಗಣ್ಯ ವ್ಯಕ್ತಿಗಳ ಸಹಾಯದಿಂದ ಸಂತಸ. ಸಣ್ಣಪುಟ್ಟ ಗಾಯಗಳಾಗುವ ಸಂಭವ. ಶುಭಸಂಖ್ಯೆ: 3

ತುಲಾ: ಸ್ತ್ರೀಯರಿಗೆ ಅಷ್ಟು ಉತ್ತಮ ದಿನವಲ್ಲ. ವೃತ್ತಿಯಲ್ಲಿ ಯಶಸ್ಸಿನ ಅನುಭವವಾಗಲಿದೆ. ಉನ್ನತ ಶಿಕ್ಷಣ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 7

ವೃಶ್ಚಿಕ: ಕಾರ್ವಿುಕ ವರ್ಗದವರಿಗೆ ಅಧಿಕ ಶ್ರಮ. ಯಂತ್ರೋಪಕರಣಗಳಿಂದ ತೊಂದರೆ ಉಂಟಾಗಲಿದೆ. ಕುಟುಂಬದಲ್ಲಿ ಸಾಮರಸ್ಯ. ಶುಭಸಂಖ್ಯೆ: 3

ಧನುಸ್ಸು: ಹೈನುಗಾರಿಕೆಯಲ್ಲಿ ಶುಭಸುದ್ದಿ. ನೀರು ಸರಬರಾಜು ಕಾರ್ಯದಲ್ಲಿ ಲಾಭವಿದೆ. ಲೇಖಕರಿಗೆ ಸನ್ಮಾನ, ಗೌರವಗಳು ಲಭಿಸುತ್ತವೆ. ಶುಭಸಂಖ್ಯೆ: 6

ಮಕರ: ಸಂಗಾತಿಯಲ್ಲಿ ಅಸಮಾಧಾನ. ಸಹನೆ ಇರಲಿ. ವಕೀಲರಿಗೆ ಉತ್ತಮ ದಿನ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಸಮಾಧಾನ. ಶುಭಸಂಖ್ಯೆ: 7

ಕುಂಭ: ಧಾರ್ವಿುಕ ಕಾರ್ಯ ನಡೆಸುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ. ರಫ್ತು ವ್ಯಾಪಾರದಲ್ಲಿ ಹಿನ್ನಡೆ. ಶುಭಸಂಖ್ಯೆ: 6

ಮೀನ: ಭೂವಿವಾದದಲ್ಲಿ ತಾಳ್ಮೆ ಕಳೆದುಕೊಳ್ಳದಿರಿ. ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರದಲ್ಲಿ ಪ್ರಗತಿ. ನೂತನ ವಸ್ತು ಖರೀದಿಗೆ ಧನವ್ಯಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net