

ಮೇಷ: ಗ್ರಹಚಾರದ ದುರ್ಭರ ಪರಿಸ್ಥಿತಿ ಎದುರಿಸುತ್ತಿದ್ದೀರಿ. ಹೀಗಾಗಿ ಯಾವುದೇ ಬಗೆಯ ಮಾತಿನ ಆರ್ಭಟ ತೋರಲು ಮುಂದಾಗದಿರಿ. ಶುಭಸಂಖ್ಯೆ: 7
ವೃಷಭ: ನಿಮ್ಮ ಉದ್ಯಮಸಂಬಂಧಿ ಪಾಲುದಾರರ ಆಯ್ಕೆಯಲ್ಲಿ ಚಾತುರ್ಯವಿರಲಿ. ಕೇವಲ ಹಣ ಒಂದೇ ಮುಖ್ಯ ಆಗಬಾರದು. ಶುಭಸಂಖ್ಯೆ: 4
ಮಿಥುನ: ಏನು ಮಾಡಿದರೂ ಅರಗಿಸಿಕೊಳ್ಳಬಹುದು ಎಂಬ ಚಿಂತನೆ ಸಮಂಜಸವಾದುದಲ್ಲ. ಸಾಧ್ಯವಾದಷ್ಟು ತಾಳ್ಮೆ ವಹಿಸಿ. ಶುಭಸಂಖ್ಯೆ: 1
ಕಟಕ: ನೀವು ಅನನ್ಯವಾದ ಆಲೋಚನಾಶಕ್ತಿ ಹೊಂದಿರುವಿರಿ. ಆದರೆ ಅವಸರದಿಂದ ಕೆಲಸ ಮಾಡಲು ಮುಂದಾಗದಿರಿ. ಶುಭಸಂಖ್ಯೆ: 2
ಸಿಂಹ: ಪ್ರೀತಿಯ ವಿಚಾರಗಳು ನಿಮ್ಮನ್ನು ಯಶಸ್ಸಿನ ಕಡೆ ಕರೆದೊಯ್ಯಬಹುದು. ಬೌದ್ಧಿಕವಾದ ಸಾಮರ್ಥ್ಯ ನೈತಿಕವಾಗಿರಲಿ. ಶುಭಸಂಖ್ಯೆ: 5
ಕನ್ಯಾ: ದೂರಪ್ರಯಾಣದ ಏರ್ಪಾಡು ಹಾಕಿಕೊಂಡಿದ್ದರೆ ಕೂಡಲೇ ಅದರ ಬಗೆಗಿನ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡರೆ ಒಳಿತು. ಶುಭಸಂಖ್ಯೆ: 8
ತುಲಾ: ಮನಬಂದಂತೆ ಚಿನ್ನಾಭರಣಗಳನ್ನು ಖರೀದಿ ಮಾಡುವುದು ಒಳಿತನ್ನು ತರಲಾರದು. ಉಳಿತಾಯದಿಂದ ಒಳಿತಿದೆ. ಶುಭಸಂಖ್ಯೆ: 9
ವೃಶ್ಚಿಕ: ನಂಬಿಕೆಗಳ ಪ್ರಶ್ನೆ ಈಗ ಹೆಚ್ಚೇನೂ ಪ್ರಮುಖವಲ್ಲ. ಇಂದಿನ ವ್ಯವಹಾರದಲ್ಲಿ ಕಾರ್ಯಶೀಲತೆಯೇ ನಿಮಗೆ ಮುಂದಾಗಿರಲಿ. ಶುಭಸಂಖ್ಯೆ: 3
ಧನಸ್ಸು: ಕುಟುಂಬದ ಸದಸ್ಯರ ಬೆಂಬಲದೊಂದಿಗೆ ಧೈರ್ಯದಿಂದ ಮುನ್ನುಗ್ಗಿದರೆ ಕ್ರಿಯಾಶೀಲತೆ ನಿಮ್ಮ ಕೈಹಿಡಿಯಲಿದೆ. ಶುಭಸಂಖ್ಯೆ: 6
ಮಕರ: ಕಚೇರಿಯಲ್ಲಿ ವಿಶೇಷವಾದ ಸೌಲಭ್ಯಗಳಿಗೆ ಪಾತ್ರರಾಗಲಿದ್ದೀರಿ. ಇತರರಲ್ಲೂ ನಿಮ್ಮ ಚೈತನ್ಯವು ಉತ್ಸಾಹವನ್ನು ಮೂಡಿಸಲಿದೆ. ಶುಭಸಂಖ್ಯೆ: 7
ಕುಂಭ: ಸಾಕುಪ್ರಾಣಿಗಳು ಕಿರಿಕಿರಿ ಉಂಟುಮಾಡಬಹುದು. ಹೀಗಾಗಿ ಅನಗತ್ಯವಾಗಿ ಸಲುಗೆಯನ್ನು ನೀಡಿ ಮೈಮೇಲೆ ಏರಿಸಿಕೊಳ್ಳದಿರಿ. ಶುಭಸಂಖ್ಯೆ: 4
ಮೀನ: ವೃತ್ತಿಯಲ್ಲಿ ತುಸು ಏರುಪೇರು ಆಯಿತೆಂದು ಅನಿಸಿದರೂ ದಿನದ ಕೊನೆಯ ಹೊತ್ತಿಗೆ ಶುಭ ಸಮಾಚಾರವನ್ನು ಕೇಳುವಿರಿ. ಶುಭಸಂಖ್ಯೆ: 1