ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸಂಗಾತಿಯ ಸಲಹೆಯಿಂದ ದೊಡ್ಡ ಪ್ರಮಾಣದ ಲಾಭವಾಗಲಿದೆ

Nitya-Bhavishya-vvani-1-2-1
Published on

ಮೇಷ: ವ್ಯಾಪಾರದಲ್ಲಿ ಲಾಭ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವ. ಶುಭಸಂಖ್ಯೆ: 9

ವೃಷಭ: ಯೋಜನೆ ಜಾರಿಗೆ ಮುನ್ನ ಪೂರ್ವತಯಾರಿ ಇರಲಿ. ಹಣಕಾಸಿನ ವಿಚಾರದಲ್ಲಿ ಮನಸ್ತಾಪ. ಸಹನಾಭೂತಿಗೆ ಮಣಿಯದಿರಿ. ಶುಭಸಂಖ್ಯೆ: 5

ಮಿಥುನ: ಕೂಡಿಟ್ಟ ನಿಧಿಗೆ ಹಾನಿ ಸಂಭವ. ಅಣ್ಣತಮ್ಮಂದಿರ ಅಸಹಕಾರದಿಂದ ಆಸ್ತಿ ವಿಚಾರದಲ್ಲಿ ಗೊಂದಲ. ತೋಟಗಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 7

ಕಟಕ: ಮಹಿಳೆಯರಿಗೆ ಇಷ್ಟಾರ್ಥಸಿದ್ಧಿ. ಸರ್ಕಾರಿ ಕೆಲಸವು ರ್ನಿವ್ನಿದಿಂದ ಆಗಲಿದೆ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪು ಶುಭಸಂಖ್ಯೆ: 4

ಸಿಂಹ: ಕೆಲಸದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ. ದೂರ ಪ್ರಯಾಣದ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಶುಭಸಂಖ್ಯೆ: 9

ಕನ್ಯಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ತೊಂದರೆಯಾಗುವ ಸಂಭವ. ನೌಕರಿಯಲ್ಲಿ ಕೆಲಸಗಾರರ ಅಸಹಕಾರ. ಮಾನಸಿಕ ನೆಮ್ಮದಿ ಇಲ್ಲ. ಶುಭಸಂಖ್ಯೆ: 2

ತುಲಾ: ಪ್ರತಿಭಾನ್ವಿತರಿಗೆ ಪ್ರವಾಸ ಯೋಗ. ವ್ಯಾಪಾರಿಗಳಿಗೆ ಸರಕು ನಷ್ಟ. ಸಂಗಾತಿಯ ಸಲಹೆಯಿಂದ ದೊಡ್ಡ ಪ್ರಮಾಣದ ಲಾಭ. ಶುಭಸಂಖ್ಯೆ: 3

ವೃಶ್ಚಿಕ: ಉದ್ಯೋಗ ೇತ್ರದ ಪರಿಶ್ರಮಕ್ಕೆ ಸರಿಯಾದ ಲ. ನಿಮ್ಮ ಕುಟುಂಬದ ಜೀವನವು ಇಂದು ಆನಂದದಾಯಕವಾಗಿರುತ್ತದೆ. ಶುಭಸಂಖ್ಯೆ: 4

ಧನುಸ್ಸು: ಅನವಶ್ಯಕ ಖರೀದಿಯಲ್ಲಿ ಧನನಷ್ಟ ಸಾಧ್ಯತೆ. ನೌಕರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ ಆಸ್ತಿ ವಿವಾದದ ತಾರ್ಕಿಕ ಅಂತ್ಯ. ಶುಭಸಂಖ್ಯೆ: 7

ಮಕರ: ಸಾಲದ ಸಮಸ್ಯೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ಕೌಟುಂಬಿಕವಾಗಿ ನಿಮ್ಮ ನಿರ್ಧಾರಗಳು ಗೊಂದಲಮಯ. ಶುಭಸಂಖ್ಯೆ: 6

ಕುಂಭ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಗುರುಹಿರಿಯರ ಆಶೀರ್ವಾದ ಸಿಗಲಿದೆ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 1

ಮೀನ: ನಿಮ್ಮ ಹಠದಿಂದ ಸಂಗಾತಿಗೆ ತೊಂದರೆ. ಕುಟುಂಬದ ಹಿರಿಯ ಸದಸ್ಯರ ವಿಯೋಗ ಸಾಧ್ಯತೆ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net