ಈ ರಾಶಿಯವರಿಗೆ ಇಂದು ಮನೆಯಲ್ಲಿ ಸಮಾಧಾನವೇ ಪ್ರಧಾನ ಅಸ್ತ್ರವಾಗಲಿ: ನಿತ್ಯ ಭವಿಷ್ಯ

Nithya-Bhavishya
Published on

ಮೇಷ: ಶ್ರಮಪಡುವ ಮನಸ್ಸಿದೆ. ಆದರೆ ನಿರೀಕ್ಷಿತ ಸಹಕಾರ ಸಿಗುವುದು ಕಷ್ಟ.. ದೇವರ ಮೇಲೆ ಭಾರ ಹಾಕಿದರೆ ಕಾರ್ಯ ಸಿದ್ಧಿ. ಶುಭಸಂಖ್ಯೆ: 2

ವೃಷಭ: ನೀರಿನಂತೆ ಹಣ ಖರ್ಚಾಗುವುದು. ಆದರೂ ಅನಿರೀಕ್ಷಿತ ಲಾಭವಿದೆ. ಮಾನಸಿಕ ಏಕಾಗ್ರತೆಯತ್ತ ಗಮನ ಕೊಡಿ. ಶುಭಸಂಖ್ಯೆ: 6

ಮಿಥುನ: ಸಹೋದರರಿಂದ ಕಿರಿಕಿರಿ. ಮನೆಯಲ್ಲಿ ಸಮಾಧಾನವೇ ಪ್ರಧಾನ ಅಸ್ತ್ರವಾಗಲಿ. ಮಕ್ಕಳ ಭವಿಷ್ಯದ ಚಿಂತೆ ಬಗೆಹರಿಯದು. ಶುಭಸಂಖ್ಯೆ: 9

ಕಟಕ: ಬಂಧುವರ್ಗದವರ ಭೇಟಿ. ಅಗತ್ಯ ವಿಚಾರವಾಗಿ ತಿರುಗಾಟ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 1

ಸಿಂಹ: ನಿಮ್ಮ ಪರಿಶ್ರಮ ಮುಂದುವರಿಸಿ. ರಾತ್ರಿ ಕಳೆದ ಮೇಲೆ ತಾನೆ ಹಗಲು ಬರಬೇಕು? ಬರುತ್ತದೆ. ಹಣದ ಉಳಿತಾಯ ಮಾಡಿ. ಶುಭಸಂಖ್ಯೆ: 3

ಕನ್ಯಾ: ಅತಿಯಾದ ಆತ್ಮವಿಶ್ವಾಸ ದಿಂದ ತೊಂದರೆ ಯಾಗಬಹುದು. ಹಿತಶತ್ರುಗಳಿಂದ ದೂರವಿರಿ. ಸ್ನೇಹಿತನ ನೆರವು ಸಿಗಲಿದೆ. ಶುಭಸಂಖ್ಯೆ: 4

ತುಲಾ: ಅನಗತ್ಯ ವಸ್ತುಗಳನ್ನು ಖರೀದಿಸಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಉತ್ತಮ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 6

ವೃಶ್ಚಿಕ: ವಾಸ್ತವ ಬಿಟ್ಟು ಭ್ರಮೆಯಲ್ಲಿರಬೇಡಿ. ನಿಮ್ಮ ರ್ತಾಕ ನಡವಳಿಕೆ ಮಾತ್ರ ನಿಮ್ಮನ್ನು ಕಾಪಾಡಬಲ್ಲದು. ಶುಭಸಂಖ್ಯೆ: 2

ಧನು: ಸಹೋದ್ಯೋಗಿಗಳಿಂದ ವಿಶೇಷ ಸಲಹೆ. ಕೆಲಸದಲ್ಲಿ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇರಲಿ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 8

ಮಕರ: ದೂರದ ಊರಿಗೆ ಪ್ರಯಾಣ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸೀತು, ಅಲಕ್ಷ್ಯ ಬೇಡ. ಹಿರಿಯರಿಂದ ಸಲಹೆ ಸಿಗಲಿದೆ. ಶುಭಸಂಖ್ಯೆ: 4

ಕುಂಭ: ಬೇರೆಯವರ ವಿಚಾರದಲ್ಲಿ ತಲೆ ತೂರಿಸಬೇಡಿ. ಶ್ರಮಪಟ್ಟು ಕೆಲಸ ಮಾಡುವುದು ಆನಿವಾರ್ಯ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶುಭಸಂಖ್ಯೆ: 9

ಮೀನ: ಧೈರ್ಯದಿಂದ ಮುನ್ನುಗ್ಗಿ. ಹಳೇ ವಿಷಯಕ್ಕೆ ಹೊಸ ರೂಪ ದೊರೆಯಲಿದೆ. ಸ್ಥಿರಾಸ್ತಿ ಖರೀದಿ ಪ್ರಕ್ರಿಯೆ ಮುಂದುವರಿಸಿ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net