

ಮೇಷ: ನಿಮ್ಮ ಪರಿಶ್ರಮದಿಂದಾಗಿ ಕಾರ್ಯದಲ್ಲಿ ಯಶಸ್ಸು. ಎದುರಾಳಿಗಳ ಕುತಂತ್ರಗಳು ಬಯಲಾಗಲಿದೆ. ಚಿಂತೆಗೆ ಅವಕಾಶವಿಲ್ಲ. ಶುಭಸಂಖ್ಯೆ: 9
ವೃಷಭ: ಬಂಧುಮಿತ್ರರ ಆಗಮನದಿಂದ ನೆಮ್ಮದಿ. ಆರೋಗ್ಯ ಕ್ಕಾಗಿ ಯೋಗದ ಮೊರೆ ಹೋಗಬೇಕಾದೀತು. ಪಶು ಪಕ್ಷಿಗಳಿಗೆ ಆಹಾರ ನೀಡಿ. ಶುಭಸಂಖ್ಯೆ: 5
ಮಿಥುನ: ಅತಿ ಉಲ್ಲಾಸದಿಂದ ಮೈ ಮರೆಯುವ ಸಾಧ್ಯತೆ. ಉದ್ಯೋಗ ರಂಗದಲ್ಲಿ ಆತ್ಮವಿಶ್ವಾಸದ ಬೆಳವಣಿಗೆ. ಅತಿ ಪ್ರಿಯರಿಂದ ಪ್ರೋತ್ಸಾಹ. ಶುಭಸಂಖ್ಯೆ: 8
ಕಟಕ: ನೌಕರರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ಅನಿರೀಕ್ಷಿತ ನೋವು ಕಂಡುಬರಲಿದೆ. ನಿಗದಿತ ಕಾರ್ಯಗಳಲ್ಲಿ ಯಶಸ್ಸು. ಧನಾಗಮನ. ಶುಭಸಂಖ್ಯೆ: 1
ಸಿಂಹ: ವ್ಯವಹಾರದಲ್ಲಿ ಉನ್ನತಿ. ಸಾಮಾಜಿಕ ಗೌರವಾದರ ಪ್ರಾಪ್ತಿ. ಸತ್ಪುರುಷರ ದರ್ಶನ ಮಾಡಲಿದ್ದೀರಿ. ಚಿನ್ನಾಭರಣ ಖರೀದಿ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ವಸ್ತ್ರವಿನ್ಯಾಸಕಾರರಿಗೆ ಉತ್ತಮ ಆರ್ಥಿಕ ಲಾಭ ತರಲಿದೆ. ನಿಮ್ಮ ಮೇಲಿನ ಹೆಚ್ಚಿನ ಜವಾಬ್ದಾರಿ ನಿಭಾಯಿಸಿಕೊಳ್ಳುವಲ್ಲಿ ಯಶಸ್ಸು. ಶುಭಸಂಖ್ಯೆ:5
ತುಲಾ: ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿರುವಿರಿ. ವ್ಯವಹಾರದಲ್ಲಿ ಪ್ರಗತಿ. ಗ್ರಹಬಲಗಳು ಕೂಡಿಬರಲಿವೆ. ತೀರ್ಥಕ್ಷೇತ್ರ ದರ್ಶನ ಭಾಗ್ಯ. ಶುಭಸಂಖ್ಯೆ: 9
ವೃಶ್ಚಿಕ: ಆರ್ಥಿಕರಂಗದಲ್ಲಿ ಪ್ರಗತಿ. ದೂರಪ್ರಯಾಣದ ಸಾದ್ಯತೆ. ಆರೋಗ್ಯದಲ್ಲಿ ಸುಧಾರಣೆ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ. ಶುಭಸಂಖ್ಯೆ: 4
ಧನುಸ್ಸು: ಯಾವುದೇ ಕಾರ್ಯದಲ್ಲಿ ಬದಲಾವಣೆಯಾದರೂ ಫಲಿತಾಂಶ ನಿಮ್ಮ ಪರವಾಗಿ ಇರಲಿದೆ. ರಕ್ಷಣಾ ಕ್ಷೇತ್ರದವರಿಗೆ ಕಠಿಣ ಸವಾಲು. ಶುಭಸಂಖ್ಯೆ: 1
ಮಕರ: ಸಮಾಧಾನ ಚಿತ್ತದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು. ದುಡುಕುತನ ಬೇಡ. ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 6
ಕುಂಭ: ಅನಿರೀಕ್ಷಿತ ಬೆಳವಣಿಗೆಯಿಂದ ಅಧಿಕಾರ - ಗೌರವ ಹೊಂದುವಿರಿ. ವಿರೋಧಿಗಳಿಂದಲೂ ಸೈ ಎನ್ನಿಸಿಕೊಳ್ಳುವ ಕಾರ್ಯಸಾಧನೆ. ಶುಭಸಂಖ್ಯೆ: 7
ಮೀನ: ವೈದ್ಯರಿಗೆ ಅಧಿಕ ಶ್ರಮ. ಸ್ತ್ರೀಯರಿಗೆ ಅನುಕೂಲಕರ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೋವ್ಯಾಧಿಗಳು ದೂರವಾಗಲಿದೆ. ಶುಭಸಂಖ್ಯೆ: 3