

ಮೇಷ: ಜನಪ್ರಿಯತೆಯು ಹೆಚ್ಚಾಗುವ ಯೋಗವಿದೆ. ವೃತ್ತಿಪರವಾಗಿ ಕೆಲಸಗಳು ಸುಗಮವಾಗಿರುತ್ತವೆ. ನಿಮ್ಮ ಆದಾಯವು ಹೆಚ್ಚಲಿದೆ. ಶುಭಸಂಖ್ಯೆ: 8
ವೃಷಭ: ಕೆಲಸದ ಸ್ಥಳದಲ್ಲಿ ಮಾಡಿದ ಪ್ರಯತ್ನಗಳು ಯಶಸ್ಸಿಗೆ ಕೊಡುಗೆ ನೀಡುತ್ತವೆ. ಕುಟುಂಬದಲ್ಲಿ ಸಂತೋಷಮಯ ವಾತಾವರಣೆ. ಶುಭಸಂಖ್ಯೆ: 1
ಮಿಥುನ: ಮಹತ್ವಾಕಾಂಕ್ಷೆಯ ಸಾಹಸಕ್ಕೆ ಯಶಸ್ಸು. ಉನ್ನತ ವ್ಯಾಸಂಗ, ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ವಿದೇಶಕ್ಕೆ ಹೋಗಲು ಅವಕಾಶ. ಶುಭಸಂಖ್ಯೆ: 2
ಕಟಕ: ಕೆಲಸದ ಸ್ಥಳದಲ್ಲಿ ತೆಗೆದುಕೊಳ್ಳುವ ಕೊನೆಯ ನಿಮಿಷದ ನಿರ್ಧಾರಗಳು ಬದಲಾವಣೆಗೆ ಕಾರಣ ಆಗಬಹುದು. ನಿರೀಕ್ಷಿತ ಯಶ. ಶುಭಸಂಖ್ಯೆ: 4
ಸಿಂಹ: ವೃತ್ತಿಗೆ ಸಂಬಂಧಿಸಿದಂತೆ, ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಮೇಲಧಿಕಾರಿಗಳು ನಿಮ್ಮನ್ನು ಗೊಂದಲಗೊಳಿಸಬಹುದು. ಶುಭಸಂಖ್ಯೆ: 9
ಕನ್ಯಾ: ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಆದರೆ ಆದಾಯದಲ್ಲಿ ಹೆಚ್ಚಳ. ವೈವಾಹಿಕ ಜೀವನವು ಆಹ್ಲಾದಕರವಾಗಿರುತ್ತದೆ. ಶುಭಸಂಖ್ಯೆ: 5
ತುಲಾ: ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವದಿಂದ ನಿರ್ವಹಿಸಿ. ವಿದ್ಯಾರ್ಥಿಗಳ ನಿರೀಕ್ಷಿತ ಫಲಿತಾಂಶ ಧನಾತ್ಮಕ ವಾಗಿರುತ್ತದೆ. ಶುಭಸಂಖ್ಯೆ: 1
ವೃಶ್ಚಿಕ: ಪ್ರಯತ್ನದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ಪ್ರಶಂಸೆ ಇರುತ್ತದೆ. ಉದ್ಯೋಗ ಬದಲಾವಣೆಗೆ ಒಳ್ಳೆಯಸಮಯ. ಶುಭಸಂಖ್ಯೆ:5
ಧನುಸ್ಸು: ವ್ಯಾಪಾರಕ್ಕಾಗಿ ದೂರ ಪ್ರಯಾಣ ಸಾಧ್ಯತೆ. ಯಾವುದೇ ಪರಿಸ್ಥಿತಿಯಲ್ಲಿ ಯಶಸ್ವಿಯಾಗುತ್ತೀರಿ. ಶಿಕ್ಷಣ ಕ್ಷೇತ್ರದದವರಿಗೆ ಯಶ. ಶುಭಸಂಖ್ಯೆ: 6
ಮಕರ: ಅದೃಷ್ಟವು ಅನುಕೂಲವಾಗಿದೆ. ಮಹತ್ವಾಕಾಂಕ್ಷಿ ಯೋಜನೆ ಕ್ರಿಯಾತ್ಮಕವಾಗಿರಬಹುದು. ಸಹೋದ್ಯೋಗಿಗಳೊಂದಿಗೆ ಎಚ್ಚರ. ಶುಭಸಂಖ್ಯೆ:4
ಕುಂಭ: ಧೈರ್ಯ, ಆತ್ಮವಿಶ್ವಾಸದ ಮಟ್ಟವು ಅತ್ಯುನ್ನತ ಮಟ್ಟದಲ್ಲಿ ಉಳಿಯುವುದು. ವ್ಯಾಪಾರದಲ್ಲಿ, ಪ್ರತಿಕೂಲ ಸನ್ನಿವೇಶ ಎದುರಾದೀತು. ಶುಭಸಂಖ್ಯೆ: 7
ಮೀನ: ಬದಲಾವಣೆಗೆ ಒಳ್ಳೆಯ ಸಮಯವಲ್ಲ. ಆರ್ಥಿಕವಾಗಿ, ನೀವು ಹಿಂದೆ ಮಾಡಿದ ಕಠಿಣ ಪರಿಶ್ರಮದ ಪ್ರತಿಫಲ ಪಡೆಯಬಹುದು. ಶುಭಸಂಖ್ಯೆ: 8