

ಮೇಷ: ಮನೆಯಲ್ಲಿ ಆರ್ಥಿಕ ವ್ಯವಹಾರದಲ್ಲಿ ಒತ್ತಡ. ದಿನಸಿ ವ್ಯಾಪಾರಸ್ಥರಿಗೆ ನಷ್ಟ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 9
ವೃಷಭ: ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ ಪಡುವಿರಿ. ನಟರಿಗೆ ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಆಯಾಸ ಕಾಣಿಸಬಹುದು. ಶುಭಸಂಖ್ಯೆ: 5
ಮಿಥುನ: ಅನಾರೋಗ್ಯದಿಂದಾಗಿ ಕಚೇರಿಯಲ್ಲಿ ಕಿರಿಕಿರಿ, ಅಸಮಾಧಾನ. ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದ ಯಶಸ್ಸು ಸಿಗದಿರುವುದಕ್ಕೆ ಬೇಸರ. ಶುಭಸಂಖ್ಯೆ: 2
ಕಟಕ: ಗೃಹ ನಿರ್ವಣದ ಕನಸಿನ ಸಾಕಾರ. ತಂದೆತಾಯಿಗಳ ಸಲಹೆ ತಿರಸ್ಕರಿಸಬೇಡಿ. ಕಚೇರಿಯಲ್ಲಿ ಸಮಾಧಾನದಿಂದ ವರ್ತಿಸಿ. ಶುಭಸಂಖ್ಯೆ: 7
ಸಿಂಹ: ಸಾರ್ವಜನಿಕ ಜೀವನದಲ್ಲಿ ಅಧಿಕಾರ ಪ್ರಾಪ್ತಿ. ರಾಜಕೀಯ ರಂಗದ ವಿಶೇಷ ಬೆಳವಣಿಗೆಗೆ ನೀವು ಕಾರಣರಾಗಬಹುದು. ಶುಭಸಂಖ್ಯೆ:3
ಕನ್ಯಾ: ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪ. ತಾಯಿಗೆ ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 6
ತುಲಾ: ಮಾತೃಮೂಲವಾದ ಧನಪ್ರಾಪ್ತಿ. ಮನೆ ಕಟ್ಟುವುದಕ್ಕೆ ಚಾಲನೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಖಾಸಗಿ ಉದ್ಯೋಗಗಳಿಗೆ ಒತ್ತಡ. ಶುಭಸಂಖ್ಯೆ: 7
ವೃಶ್ಚಿಕ: ಸಹೋದರರ ಸಲಹೆಯನ್ನು ತಿರಸ್ಕರಿಸಬೇಡಿ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಸುಖ ಭೋಜನ ಪ್ರಾಪ್ತಿ. ಶುಭಸಂಖ್ಯೆ: 3
ಧನುಸ್ಸು: ಶುಭಕಾರ್ಯಕ್ಕೆ ನಿರ್ಧಾರ. ಮಾತಿನ ಬಗ್ಗೆ ನಿಗಾ ಇರಲಿ. ಕುಟುಂಬದಲ್ಲಿ ಅಸಮಾಧಾನ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಮಕರ: ದೃಢ ನಿರ್ಧಾರ ತೆಗೆದುಕೊಳ್ಳಲು ಗೊಂದಲ. ಸ್ನೇಹಿತನ ಸಲಹೆ. ಮಕ್ಕಳಿಂದ ಹಣದ ಅಪವ್ಯಯ. ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 4
ಕುಂಭ: ನಿಮ್ಮ ಕನಸು ಸಾಕಾರಗೊಳ್ಳುವ ದಿನ. ಆಲಸ್ಯತನ ನಿಮ್ಮ ಶತ್ರು. ಚುರುಕಾಗಿರಲು ಪ್ರಯತ್ನಿಸಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6
ಮೀನ: ಆರೋಗ್ಯ ಪರಿಕರ ವ್ಯಾಪಾರಸ್ಥರಿಗೆ ವಿಶೇಷ ಧನಲಾಭ. ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ಸಹೋದರಿಯರ ಮನೆಗೆ ಭೇಟಿ. ಶುಭಸಂಖ್ಯೆ: 1