

ಮೇಷ: ಹಣಹೂಡಿಕೆ ಲೇವಾದೇವಿ ವ್ಯವಹಾರ ಬೇಡ. ಆರಕ್ಷಕರು, ರಾಜಕಾರಣಿಗಳು ಮತ್ತು ಆಡಳಿತ ವರ್ಗದವರಿಗೆ ಶುಭದಿನ. ಶುಭಸಂಖ್ಯೆ: 9
ವೃಷಭ: ಅತಿಯಾದ ನಿರೀಕ್ಷೆ ಇಲ್ಲದೆ ತಾಳ್ಮೆಯಿಂದ ವ್ಯವಹರಿಸಿ ದರೆ ಯಶಸ್ಸು ಪ್ರಾಪ್ತಿ. ಮನರಂಜನೆಯವರಿಗೆ ಅಧಿಕ ಧನಲಾಭ. ಶುಭಸಂಖ್ಯೆ: 2
ಮಿಥುನ: ಕಚೇರಿ ಕೆಲಸದಲ್ಲಿ ಉದಾಸೀನ ಬೇಡ. ಮಿತ್ರರು ಸಹೋದರರಲ್ಲಿ ವಿರಸ. ಮೋಜಿನ ವಿಹಾರಗಳಿಗೆ ಅನವಶ್ಯಕ ಖರ್ಚು. ಶುಭಸಂಖ್ಯೆ: 8
ಕಟಕ: ಶುಭ ಕಾರ್ಯ ವಿಳಂಬ ಆಗುವುದಕ್ಕೆ ಚಿಂತಿಸಬೇಡಿ. ಉನ್ನತ ಅಧಿಕಾರಿಗಳಿಗೆ ವಿಶೇಷ ಪದವಿ. ಮಹಿಳೆಯರಿಗೆ ಕಿರಿಕಿರಿ. ಶುಭಸಂಖ್ಯೆ: 5
ಸಿಂಹ: ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಫಲತೆ. ಉನ್ನತ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು. ಶಿಕ್ಷಕರಿಗೆ ಬಡ್ತಿ ಸಾಧ್ಯತೆ. ಶುಭಸಂಖ್ಯೆ: 6
ಕನ್ಯಾ: ಕೆಲಸದಲ್ಲಿ ತಾಳ್ಮೆ, ಭರವಸೆ ಇರಲಿ. ತಂದೆ ತಾಯಿಗಳಲ್ಲಿ ವೈಮನಸ್ಯ. ದೂರ ಪ್ರಯಾಣ ಸಾಧ್ಯತೆ. ಅನಿರೀಕ್ಷಿತ ಅನಾರೋಗ್ಯ. ಶುಭಸಂಖ್ಯೆ: 8
ತುಲಾ: ಕಚೇರಿಯಲ್ಲಿ ಸಿಡಿಮಿಡಿ. ಹಿರಿಯ ಅಧಿಕಾರಿಗಳಿಂದ ಕೆಲಸದ ಒತ್ತಡ. ಕಲಾವಿದರಿಗೆ ಪುರಸ್ಕಾರ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 9
ವೃಶ್ಚಿಕ: ಕುಟುಂಬ ಸಂಬಂಧಗಳಲ್ಲಿ ಏರುಪೇರು. ಆದಾಯ ಉತ್ತಮಗೊಳ್ಳುವುದು. ಶ್ರಮಕ್ಕೆ ತಕ್ಕ ಪ್ರತಿಫಲ ನಿಧಾನವಾದೀತು. ಶುಭಸಂಖ್ಯೆ:2
ಧನುಸ್ಸು: ಉನ್ನತ ಸ್ಥಾನ ಲಭ್ಯ. ಮಹಿಳಾ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ವ್ಯವಹಾರದಲ್ಲಿ ಮೋಸ. ಹಿರಿಯರ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 6
ಮಕರ: ಹಲವು ದಿನಗಳಿಂದ ಬಾಧಿಸುತ್ತಿದ್ದ ರೋಗಕ್ಕೆ ಮುಕ್ತಿ. ರಾಜಕೀಯದಲ್ಲಿ ಇರುವವರಿಗೆ ಅಧಿಕ ಒತ್ತಡ. ಶಿಕ್ಷಕರಿಗೆ ಉತ್ತಮ ದಿನ. ಶುಭಸಂಖ್ಯೆ:5
ಕುಂಭ: ಪ್ರಶಂಸೆ, ನಿರಾಸೆ ಎರಡರ ಅನುಭವವೂ ಆಗಲಿದೆ. ದ್ವೇಷ ಸಾಧನೆ ಮಾಡಬೇಡಿ. ಸಾಲ ತೀರಿಸಲು ಆರ್ಥಿಕ ಸ್ನೇಹಿತನಿಂದ ನೆರವು. ಶುಭಸಂಖ್ಯೆ:1
ಮೀನ: ಕಳೆದು ಹೋದ ವಸ್ತು ಲಭ್ಯ. ಸಜ್ಜನರ ಸಂಪರ್ಕ. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಿ. ವಿಹಾರದಿಂದ ಅನಾರೋಗ್ಯ. ಶುಭಸಂಖ್ಯೆ: 2