ಈ ರಾಶಿಯವರಿಗೆ ಬಾಳಸಂಗಾತಿ ಜತೆ ಮನಸ್ತಾಪಗಳು ಬರಬಹುದು: ನಿತ್ಯ ಭವಿಷ್ಯ

Nitya-Bhavishya-vvani-1-2-1-1
Published on

ಮೇಷ: ಕಷ್ಟಕರವಾದಂಥ ಸಂದರ್ಭಗಳನ್ನು ಎದುರಿಸಿ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವಿದೆ. ತಾಳ್ಮೆಯನ್ನು ಕಳೆದುಕೊಳ್ಳದಿರಿ. ಶುಭಸಂಖ್ಯೆ: 4

ವೃಷಭ: ದಡ್ಡರ ಬಳಿ ವಾದಿಸುವಂತಹ ಪ್ರಸಂಗವೂ ಬಂದೀತು. ಆದರೂ ವಾದಿಸದಿರಿ. ಕಿರಿಕಿರಿಯ ಅನುಭವವಾಗುವುದು ನಿಶ್ಚಿತ. ಶುಭಸಂಖ್ಯೆ: 8

ಮಿಥುನ: ರಮ್ಯ ತಾಣಗಳಿಗೆ ಪ್ರವಾಸ ಕಾರ್ಯಕ್ರಮಗಳು ನಿಶ್ಚಯವಾಗುವ ಸಂಭವ ಜಾಸ್ತಿ. ಪಯಣದಲ್ಲಿ ವಿಶೇಷ ಕಾಳಜಿಯನ್ನು ವಹಿಸಿ. ಶುಭಸಂಖ್ಯೆ: 9

ಕಟಕ: ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಮಹತ್ವದ ಕಾಗದಪತ್ರಗಳು ನಿಮಗೆ ಸಂಬಂಧಿಯೊಬ್ಬರಿಂದ ಲಭ್ಯವಾಗಲಿವೆ. ನಿರಾಳರಾಗಿರಿ. ಶುಭಸಂಖ್ಯೆ: 6

ಸಿಂಹ: ಸರಿಯಾದ ಕಾರಣಗಳನ್ನು ಕೊಡಲಾಗದೆ ಗೆಲ್ಲುವ ಸಂದರ್ಭದಲ್ಲಿ ಅಸಹಾಯಕತೆಯೇ ಉಂಟಾಗಬಹುದು. ಧೈರ್ಯವಿರಲಿ. ಶುಭಸಂಖ್ಯೆ: 2

ಕನ್ಯಾ: ಬಾಳಸಂಗಾತಿಯ ಜತೆಗೆ ಮನಸ್ತಾಪಗಳು ಕೂಡ ಬರಬಹುದು. ಕೆಲವು ಕೆಲಸಗಳಲ್ಲಿ ಸ್ವಲ್ಪಮಟ್ಟಿನ ವಿಳಂಬ ಉಂಟಾಗಬಹುದು. ಶುಭಸಂಖ್ಯೆ: 5

ತುಲಾ: ಕಚೇರಿಯಲ್ಲಿ ಸತತ ಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದೀರಿ. ಆದರೂ ಪದೋನ್ನತಿಯ ಸಾಧ್ಯತೆ ನಿಮಗೆ ಹೇರಳವಾಗಿಯೇ ಇದೆ. ಶುಭಸಂಖ್ಯೆ: 7

ವೃಶ್ಚಿಕ: ವಿರೋಧಗಳು ಎದುರಾಗಿ ಬಂದರೂ ಕೆಲವು ಸಹೋದ್ಯೋಗಿಗಳು ಬೆಂಬಲ ಸೂಚಿಸಲಿದ್ದಾರೆ. ಅಧೈರ್ಯವನ್ನು ಬಿಟ್ಟರೆ ಒಳಿತು. ಶುಭಸಂಖ್ಯೆ: 3

ಧನುಸ್ಸು: ಸುಮ್ಮನೆ ಒಣ ತರ್ಕಗಳಿಂದ ನಿಮ್ಮ ಮನಸ್ಸನ್ನು ಕದಡುವಂತಹ ಜನರನ್ನು ದೂರವೇ ಇಟ್ಟುಬಿಡಿ. ಮಾನಸಿಕ ಶಾಂತಿಯೂ ಸಿಗಲಿದೆ. ಶುಭಸಂಖ್ಯೆ: 1

ಮಕರ: ಶ್ರೀ ಲಕ್ಷ್ಮೀನರಸಿಂಹನನ್ನು ಆರಾಧಿಸಿ. ಹಲವು ವಿಚಾರಗಳಲ್ಲಿ ಉಂಟಾಗುತ್ತಿದ್ದ ಸಣ್ಣ ಕಿರಿಕಿರಿಗಳು ಬೇಗಬೇಗನೆ ಕೊನೆಗೊಳ್ಳಲಿವೆ. ಶುಭಸಂಖ್ಯೆ: 9

ಕುಂಭ: ಹಲವು ದಿನಗಳಿಂದ ತೀರ್ಮಾನಗೊಳ್ಳದೆ ಉಳಿದುಕೊಂಡಿದ್ದ ವಿಚಾರಗಳು ನಿಮ್ಮ ಪರವಾಗಿ ಒದಗಿ ಸಮಾಧಾನಪಡಲಿದ್ದೀರಿ. ಶುಭಸಂಖ್ಯೆ: 4

ಮೀನ: ಆರೋಗ್ಯದ ವಿಚಾರದಲ್ಲಿ ಸಾಧ್ಯವಾದಷ್ಟು ಜಾಗ್ರತೆಯಿಂದಿರಿ. ದೂರಪ್ರಯಾಣವನ್ನು ಮುಂದೂಡುವುದೇ ಕ್ಷೇಮಕರ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net