

ಮೇಷ: ಸಂಗಾತಿಯ ಸಲಹೆಯಿಂದ ಸೂಕ್ತ ಧನಲಾಭ. ಸ್ನೇಹಿತರಲ್ಲಿ ಕಲಹ, ಮಕ್ಕಳಿಂದ ಗೊಂದಲ, ಮಾನಸಿಕ ವ್ಯಥೆ. ಶುಭಸಂಖ್ಯೆ: 9
ವೃಷಭ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ನಿರುದ್ಯೋಗಿಗಳಿಗೆ ನೌಕರಿ ಲಭ್ಯ, ಪಾಲುದಾರಿಕೆ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ:2
ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ. ಶ್ರದ್ಧೆ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಅಪರಿಚಿತರಿಂದ ಮೋಸ. ಶುಭಸಂಖ್ಯೆ: 3
ಕಟಕ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ಸಿಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಕೈತಪ್ಪುವ ಭೀತಿ. ಮಾತಿನಿಂದ ಗೌರವ. ಶುಭಸಂಖ್ಯೆ: 4
ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಮಕ್ಕಳ ಸಾಧನೆಯಿಂದ ಸಂತಸ. ಹಿತೈಷಿಗಳ ಸಲಹೆ ಪಡೆಯಿರಿ. ಶುಭಸಂಖ್ಯೆ: 8
ಕನ್ಯಾ: ಮಹಿಳೆಯರ ಇಷ್ಟಾರ್ಥ ಸಿದ್ಧಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ನಿಮ್ಮ ವ್ಯಾಪಾರದ ಚತುರತೆಯಿಂದ ಧನಲಾಭ. ಶುಭಸಂಖ್ಯೆ: 7
ತುಲಾ: ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ. ಬಂಧುಗಳ ಆಗಮನ. ಶುಭಕಾರ್ಯಗಳಲ್ಲಿ ಭಾಗಿ. ದೂರ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 9
ವೃಶ್ಚಿಕ: ದ್ರವ್ಯನಾಶ. ದುಃಖದಾಯಕ ಪ್ರಸಂಗಗಳು ಎದುರಾಗುವವು. ಪರರಿಗೆ ವಂಚಿಸುವುದು ಒಳ್ಳೆಯದಲ್ಲ. ಸಾಲಗಾರರ ಕಿರುಕುಳ. ಶುಭಸಂಖ್ಯೆ: 4
ಧನುಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ನೌಕರಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ಕೈಗೊಂಡ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 7
ಮಕರ: ಮುಖ್ಯ ಕೆಲಸಗಳಲ್ಲಿ ಪ್ರಗತಿ. ಧನಲಾಭ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಸ್ತ್ರೀಯರಿಂದ ಶುಭ ಸಮಾಚಾರ. ಶುಭಸಂಖ್ಯೆ:5
ಕುಂಭ: ಹಿರಿಯರ ಮಾತಿಗೆ ಬೆಲೆ ಕೊಡಿ. ಮುಂಗೋಪದಿಂದ ಪಾಲುದಾರರು ದೂರ. ಆಸ್ತಿ ವಿಚಾರದಲ್ಲಿ ಹಿರಿಯರ ಮಾರ್ಗದರ್ಶನ. ಶುಭಸಂಖ್ಯೆ: 6
ಮೀನ: ಮೌನವಾಗಿರಿ. ಸ್ಥಳ ಬದಲಾವಣೆ. ಸ್ಥಿರಾಸ್ತಿ ಮಾರಾಟ. ಕಾರ್ಯದಲ್ಲಿ ವಿಘ್ನ. ಪಾಲುದಾರರಲ್ಲಿ ಮೂಡದ ಒಮ್ಮತ. ಧನ ನಷ್ಟ. ಶುಭಸಂಖ್ಯೆ: 2