ಈ ರಾಶಿಯವರಿಗೆ ಇಂದು ಯತ್ನ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಜಯ: ನಿತ್ಯಭವಿಷ್ಯ

Nitya-Bhavisya-FILEminimizer
Published on

ಮೇಷ: ಅನೇಕ ಪ್ರತಿರೋಧಗಳ ನಡುವೆ ಗೃಹ ನಿರ್ವಣದ ಪ್ರಾರಂಭ. ಆರ್ಥಿಕ ಚಟುವಟಿಕೆಗಳು ಕ್ಷೀಣ. ಕೆಲಸಗಾರರಿಂದ ನಷ್ಟ. ಶುಭಸಂಖ್ಯೆ: 6

ವೃಷಭ: ದಿನದ ಪ್ರಾರಂಭದಲ್ಲಿ ಅಸಹನೆಯಿಂದ ತೊಂದರೆ. ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮ. ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 3

ಮಿಥುನ: ಉತ್ತಮ ಅವಕಾಶಗಳು ನಿಮ್ಮ ದಾರಿಯಲ್ಲಿವೆ. ಸದುಪಯೋಗ ಮಾಡಿಕೊಳ್ಳಿ. ಮನಶ್ಶಾಂತಿ, ಜಮೀನು ವಿಷಯದಲ್ಲಿ ಗೊಂದಲ. ಶುಭಸಂಖ್ಯೆ: 8

ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಮಾನಸಿಕ ಚಿಂತೆ ಕಾಡೀತು. ಅನಾರೋಗ್ಯ ಸಾಧ್ಯತೆ. ಯತ್ನ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 6

ಸಿಂಹ: ದುಂದುವೆಚ್ಚಕ್ಕೆ ಕಡಿವಾಣ. ಶತ್ರು ಬಾಧೆ ನಿವಾರಣೆ. ಮನಕ್ಲೇಷ. ವಿದೇಶ ವ್ಯವಹಾರಗಳಿಗಾಗಿ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ:1

ಕನ್ಯಾ: ಜನ ಬೆಂಬಲ ಹೆಚ್ಚುವುದು. ನಿರೀಕ್ಷೆಗೆ ತಕ್ಕಂತೆ ಆದಾಯ ಬರಲಿದೆ. ಮಾನಸಿಕ ಸಮಾಧಾನ. ಸರ್ಕಾರಿ ಕೆಲಸಗಳಿಗಾಗಿ ಓಡಾಟ. ಶುಭಸಂಖ್ಯೆ: 5

ತುಲಾ: ಯತ್ನ ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಜಯ. ವ್ಯಾಪಾರದಲ್ಲಿ ಜಾಣ್ಮೆಯಿಂದ ವರ್ತಿಸಿ. ಅವಿವಾಹಿತರಿಗೆ ಶುಭಸುದ್ದಿ. ಶುಭಸಂಖ್ಯೆ: 4

ವೃಶ್ಚಿಕ: ತಾತ್ಕಾಲಿಕ ಸಮಸ್ಯೆ ಬಗೆಹರಿಯಲಿವೆ. ದಾಂಪತ್ಯದಲ್ಲಿ ಕಲಹ ಸಾಧ್ಯತೆ, ಸಮಾಧಾನಿಯಾಗಿರಿ. ಸ್ತ್ರೀಯರಿಗೆ ಶುಭ. ದ್ರವ್ಯಲಾಭ. ಶುಭಸಂಖ್ಯೆ: 6

ಧನುಸ್ಸು: ಯಾವುದೇ ಕೆಲಸವಿರಲಿ, ಯೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ. ದಾಂಪತ್ಯದಲ್ಲಿ ಮಧುರ ವಾತಾವರಣ. ನೆಮ್ಮದಿ. ಶುಭಸಂಖ್ಯೆ: 6

ಮಕರ: ಲೋಹದ ವ್ಯಾಪಾರದಲ್ಲಿ ಲಾಭ. ಇತರ ವ್ಯಾಪಾರಿಗಳಿಗೆ ನಷ್ಟವಾಗಬಹುದು. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಒತ್ತಡ. ಶುಭಸಂಖ್ಯೆ: 7

ಕುಂಭ: ಆರ್ಥಿಕ ಮುಗ್ಗಟ್ಟು ಹೆಚ್ಚಿ ಸಾಲಗಾರರಿಂದ ತೊಂದರೆ. ಆಸ್ತಿ ವಿವಾದದಕ್ಕೆ ರ್ತಾಕ ಅಂತ್ಯ ದೊರೆತು ನಿರಾಳ. ಸಂಜೆ ಶುಭಸುದ್ದಿ. ಶುಭಸಂಖ್ಯೆ: 7

ಮೀನ: ಕೆಲಸದ ದಾವಂತದಲ್ಲಿ ಕುಟುಂಬದ ಕಡೆ ನಿರ್ಲಕ್ಷ್ಯ ತರವಲ್ಲ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ಮಹಿಳೆಯರಿಗೆ ಆಭರಣ ಪ್ರಾಪ್ತಿ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net