

ಮೇಷ: ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು
ಮಾಡಿ ಎಂಬ ಒತ್ತಡ ಬರಬಹುದು. ನಯವಾಗಿ
ಸಾಧ್ಯವಿಲ್ಲ ಎಂದು ತಿಳಿಸಿ. ಶುಭಸಂಖ್ಯೆ: 1
ವೃಷಭ: ಬಾಳಸಂಗಾತಿಯ ಜತೆಗೆ ಸುದೀರ್ಘ ಚರ್ಚೆ
ನಡೆಸುವುದರಿಂದ ಆದಾಯ ವೃದ್ಧಿಗೆ ಹೊಸ
ಉಪಾಯಗಳು ದೊರೆಯಲಿವೆ. ಶುಭಸಂಖ್ಯೆ: 5
ಮಿಥುನ: ಮೂಗಿನ ತುದಿಗೇ ಸಿಟ್ಟನ್ನು ಸ್ಥಾಪಿಸಿಕೊಳ್ಳುವ
ದಡ್ಡತನ ಬೇಡ. ಅದರಿಂದ ಹೆಚ್ಚಿನ ತೊಂದರೆ
ಎದುರಾದೀತು. ಎಚ್ಚರವಿರಲಿ. ಶುಭಸಂಖ್ಯೆ: 9
ಕಟಕ: ದುರ್ಗಾದೇವಿಯ ಆರಾಧನೆಯಿಂದ
ಅಂತರಂಗದಲ್ಲಿ ಶಾಂತಿ ಸಮಾಧಾನಗಳು
ವೃದ್ಧಿಸಿ ಚೈತನ್ಯದ ದಾರಿ ಲಭ್ಯ. ಶುಭಸಂಖ್ಯೆ: 2
ಸಿಂಹ: ನಕಾರಾತ್ಮಕ ಹವ್ಯಾಸಗಳಿಗೆ ವಿದಾಯ
ಹೇಳಲು ಇದು ಸಕಾಲವಾಗಿದೆ. ಗುರುಗ್ರಹ
ಸ್ತೋತ್ರವನ್ನು ಪಠಣ ಮಾಡಿ. ಶುಭಸಂಖ್ಯೆ: 6
ಕನ್ಯಾ: ಹೊಸ ಪ್ರದೇಶಕ್ಕೆ ವರ್ಗಾವಣೆ ಹೊಂದುವ
ಸಾಧ್ಯತೆಗಳು ಅಧಿಕ. ಪಾಲಿಗೆ ಬಂದಿದ್ದು
ಪಂಚಾಮೃತ ಎಂದು ಸ್ವೀಕರಿಸಿ. ಶುಭಸಂಖ್ಯೆ: 8
ತುಲಾ: ತಲೆನೋವು ತರುವಂತಹ ಜನ ಸಿಗುತ್ತಾರೆ.
ಆ ಬಗ್ಗೆ ತಲೆಬಿಸಿ ಮಾಡಿಕೊಳ್ಳದೆ ನಿಮ್ಮ
ಪಾಡಿಗೆ ನೀವು ಇದ್ದುಬಿಡಿ. ಶುಭಸಂಖ್ಯೆ: 3
ವೃಶ್ಚಿಕ: ಅತಿಯಾಸೆಯು ವಿಷದಂತೆ ಹಾನಿಯನ್ನು
ಉಂಟುಮಾಡುತ್ತದೆ. ಹೀಗಾಗಿ ಮನಸ್ಸಿನ
ನಿಗ್ರಹದತ್ತ ಮನಸ್ಸು ಮಾಡಿ. ಶುಭಸಂಖ್ಯೆ: 7
ಧನುಸ್ಸು: ಇತರರನ್ನು ಉದ್ರೇಕಗೊಳಿಸುವಂತಹ
ಸವಾಲುಗಳನ್ನು ಹಾಕುವ ಆತುರ ಬೇಡ.
ಶತ್ರುಗಳೂ ಮಿತ್ರರಾಗಬಹುದು. ಶುಭಸಂಖ್ಯೆ: 4
ಮಕರ: ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಸ್ತುತಿ
ಮಾಡಿ. ಹಣಕಾಸಿಗೆ ಸಂಬಂಧಿಸಿದ ವಿಚಾರದ
ಉದ್ವಿಗ್ನತೆಗಳು ದೂರವಾಗಲಿವೆ. ಶುಭಸಂಖ್ಯೆ: 9
ಕುಂಭ: ಹಳೆಯ ಹಣವೇ ಮರಳಿ ಬರದಿರುವಾಗ
ಹೊಸದಾಗಿ ಸಾಲ ಕೊಡಲು ಹೋಗದಿರಿ.
ಸಿಟ್ಟು ಮಾಡಿಕೊಳ್ಳುವದನ್ನು ಬಿಡಿ. ಶುಭಸಂಖ್ಯೆ: 1
ಮೀನ: ಸಾಮಾಜಿಕವಾಗಿ ನಿಮ್ಮನ್ನು ಮೂಲೆಗುಂಪು
ಮಾಡುವಂತಹ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಶುಭಸಂಖ್ಯೆ: 5