

ಮೇಷ: ಮೇಲಧಿಕಾರಿಗಳ ವಿಶ್ವಾಸ, ಪ್ರಶಂಸೆ ಗಳಿಸುವಿರಿ. ಸಂಗಾತಿಯೊಡನೆ ಪ್ರೀತಿ. ವೃತ್ತಿ ವಿಚಾರದಲ್ಲಿ ಸ್ವಲ್ಪ ಜಾಗ್ರತೆ. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 4
ವೃಷಭ: ವಾಣಿಜ್ಯ ಕಟ್ಟಡ ಖರೀದಿ ಸಾಧ್ಯತೆ. ಮನಸ್ಸಿಗೆ ನೆಮ್ಮದಿ. ಅಧಿಕ ಖರ್ಚು, ಅಲ್ಪ ಲಾಭ. ಉದ್ಯೋಗದಲ್ಲಿ ಎಚ್ಚರ. ಮನಕ್ಲೇಷ ಉಂಟಾದೀತು. ಶುಭಸಂಖ್ಯೆ: 1
ಮಿಥುನ: ಸಾಲಗಾರರಿಂದ ತೊಂದರೆ. ಕಲಾವಿದರಿಗೆ ಸಾಧಾರಣ. ಪುಣ್ಯಕ್ಷೇತ್ರ ದರ್ಶನ. ಕೃಷಿಯಲ್ಲಿ ಲಾಭ. ವಿರೋಧಿಗಳಿಂದ ದೂರವಿರಿ. ಶುಭಸಂಖ್ಯೆ: 8
ಕಟಕ: ಆಭರಣ ಲಾಭ. ಮಹಿಳೆಯರಿಗೆ ಆಭರಣ ಪ್ರಾಪ್ತಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ. ವಿದ್ಯೆಯಲ್ಲಿ ಅಭಿವೃದ್ಧಿ. ಮಿತ್ರರಲ್ಲಿ ದ್ವೇಷ. ಶುಭಸಂಖ್ಯೆ: 5
ಸಿಂಹ: ಕುಟುಂಬ ಸೌಖ್ಯ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರವಿರಲಿ. ದೂರ ಪ್ರಯಾಣ. ಅನಾರೋಗ್ಯ ಸಾಧ್ಯತೆ. ಧನವ್ಯಯ. ಶುಭಸಂಖ್ಯೆ: 3
ಕನ್ಯಾ: ವಾಸ ಮಾಡುವಲ್ಲಿ ತೊಂದರೆ. ಚಂಚಲ ಮನಸ್ಸು. ಎಲ್ಲಿ ಹೋದರೂ ಅಶಾಂತಿ. ಸಾಧಾರಣ ಫಲ. ಶತ್ರು ಬಾಧೆ ಸಾಧ್ಯತೆ, ಎಚ್ಚರದಿಂದಿರಿ. ಶುಭಸಂಖ್ಯೆ: 4
ತುಲಾ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಲ್ಪ ಲಾಭ. ಮನಸ್ಸಿನಲ್ಲಿ ಅವ್ಯಕ್ತ ಭೀತಿ. ಪ್ರಿಯಜನರ ಭೇಟಿ. ಸತ್ಕಾರ್ಯದಲ್ಲಿ ಆಸಕ್ತಿ. ಶುಭಸಂಖ್ಯೆ: 6
ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ. ಸಣ್ಣವ್ಯಾಪಾರಿಗಳಿಗೆ ಲಾಭ. ಮಿತ್ರರಲ್ಲಿ ಮನಸ್ತಾಪ. ಚಿಂತೆಗೆ ಒಳಪಡುವಿರಿ. ವಿದ್ಯಾಭ್ಯಾಸದಲ್ಲಿ ಅಡಚಣೆ. ಶುಭಸಂಖ್ಯೆ: 3
ಧನುಸ್ಸು: ಬಂಧುಗಳಿಂದ ಮೋಸ. ವ್ಯರ್ಥ ಧನಹಾನಿ. ಯತ್ನ ಕಾರ್ಯಗಳಲ್ಲಿ ಜಯ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ: 6
ಮಕರ: ದಾನ-ಧರ್ಮದಿಂದ ಮನಶ್ಶಾಂತಿ. ಗುರುಗಳ ಭೇಟಿ ಮಾಡುವಿರಿ. ದೈವಿಕ ಚಿಂತನೆ. ಶತ್ರು ನಾಶವಾಗಿ ಸಮಾಧಾನ. ಭಾಗ್ಯ ವೃದ್ಧಿ. ಶುಭಸಂಖ್ಯೆ: 6
ಕುಂಭ: ಸಾಲ ಮಾಡುವ ಸಂಭವ. ಮನಸ್ಸಿಗೆ ಚಿಂತೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಆರೋಗ್ಯ ಭಾಗ್ಯ. ಕೋರ್ಟ್ ಕೆಲಸಗಳಲ್ಲಿ ಮುನ್ನಡೆ. ಶುಭಸಂಖ್ಯೆ: 2
ಮೀನ: ವಿಳಂಬ ಆದ ಕಾರ್ಯಗಳು ಮುಂದುವರಿಯುವವು. ರಾಜಕೀಯದಲ್ಲಿದ್ದವರಿಗೆ ಅವಮಾನ ಸಾಧ್ಯತೆ. ಮಿತ್ರರ ಸಹಾಯ. ಶುಭಸಂಖ್ಯೆ: 8