

ಮೇಷ: ಪ್ರಯತ್ನದಿಂದ ಫಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಬಂಧುಗಳಿಂದ ವಿರೋಧ ಬರಬಹುದು. ಋಣ ವಿಮೋಚನೆ. ಶುಭಸಂಖ್ಯೆ: 5
ವೃಷಭ: ಅಧಿಕ ವರಮಾನದಿಂದಾಗಿ ಮಾನಸಿಕ ನೆಮ್ಮದಿ. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಮಕ್ಕಳಿಂದ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 9
ಮಿಥುನ: ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತು ಸಮಾಜದಲ್ಲಿ ಗೌರವ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಉಳಿತಾಯ ಮಾಡಿ. ಶುಭಸಂಖ್ಯೆ: 1
ಕಟಕ: ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು. ತಾಳ್ಮೆಯಿಂದ ಇರಿ. ಶುಭಸಂಖ್ಯೆ: 2
ಸಿಂಹ: ಅನಗತ್ಯ ವಿಷಯಗಳಿಂದ ದೂರವಿರಿ. ಊಟಕ್ಕೂ ಸಮಯ ಸಿಗದೇ ಹೋಗಬಹುದು. ಈ ದಿನ ಮೌನವಾಗಿರುವುದೇ ಉತ್ತಮ. ಶುಭಸಂಖ್ಯೆ: 8
ಕನ್ಯಾ: ಆಸ್ತಿ ಲಭಿಸುವ ಸಾಧ್ಯತೆ ಜಾಸ್ತಿ ಇದೆ. ಒತ್ತಡದಿಂದ ಹಗುರಾಗಿ ಮನಃಶಾಂತಿ ದೊರೆಯುವುದು. ಆದಾಯ ಮತ್ತು ವೆಚ್ಚ ಸಮ. ಶುಭಸಂಖ್ಯೆ: 7
ತುಲಾ: ಮಿತ್ರರ ಸಹಾಯ ದೊರೆಯಲಿದೆ. ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಕಾಣಿಸುವುದು. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಲಿದೆ. ಶುಭಸಂಖ್ಯೆ:1
ವೃಶ್ಚಿಕ: ಪಾಪ ಕಾರ್ಯ ಮಾಡುವ ಮನಸ್ಸಾದರೂ ಮುಂದುವರಿಯಬೇಡಿ. ರಿಯಲ್ ಎಸ್ಟೇಟ್ನವರಿಗೆ ಪ್ರಗತಿ. ಶತ್ರುಭಯ. ಅಪನಿಂದನೆ. ಶುಭಸಂಖ್ಯೆ: 4
ಧನುಸ್ಸು: ಯತ್ನ ಕಾರ್ಯನುಕೂಲ. ವ್ಯಾಪಾರದಲ್ಲಿ ಅಧಿಕ ಲಾಭ ನಿಮ್ಮದಾಗಲಿದೆ. ಆಲಸ್ಯ ಭಾವದಿಂದ ಬೇಗ ಹೊರಬನ್ನಿ. ದ್ರವ್ಯಲಾಭ. ಶುಭಸಂಖ್ಯೆ: 6
ಮಕರ: ಮನೋವ್ಯಥೆ ತೀವ್ರವಾಗಿ ಕಾಡಬಹುದು. ಧ್ಯಾನ ಮಾಡುವುದರಿಂದ ಕ್ಷೇಮ. ಸಾಲದಿಂದ ಮುಕ್ತಿ. ದಾಂಪತ್ಯದಲ್ಲಿ ಅಸಮಾಧಾನ. ಶುಭಸಂಖ್ಯೆ: 8
ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ. ಚೋರಾಗ್ನಿ ಭೀತಿ. ವಿಪರೀತ ವ್ಯಸನ ಒಳ್ಳೆಯದಲ್ಲ. ಅತಿಯಾದ ನಿದ್ರೆ, ದುಷ್ಟ ಜನರಿಂದ ಕಿರುಕುಳ. ಶುಭಸಂಖ್ಯೆ: 6
ಮೀನ: ಗುರು ಹಿರಿಯರಲ್ಲಿ ಭಕ್ತಿಯಿಡಿ. ಕೋಪ ನಿಯಂತ್ರಿಸಿ ಕೊಳ್ಳಿ. ನೌಕರಿಯಲ್ಲಿ ಬಡ್ತಿ. ಶೀತ ಸಂಬಂಧೀ ತೊಂದರೆ. ಆಕಸ್ಮಿಕ ಧನಲಾಭ. ಶುಭಸಂಖ್ಯೆ: 3