

ಮೇಷ: ತಾಳ್ಮೆಯಿಂದ ಕಾರ್ಯ ಮಾಡಿ. ಕೃಷಿ ವ್ಯವಹಾರ ಗಳಿಂದ ಹೆಚ್ಚಿದ ವರಮಾನ. ಗುರುಗಳ ಮಾರ್ಗದರ್ಶನ ಪಾಲಿಸಿದರೆ ಯಶಸ್ಸು. ಶುಭಸಂಖ್ಯೆ: 6
ವೃಷಭ: ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ನಿರೀಕ್ಷಿತ ಸ್ಥಾನ ಲಭಿಸಿದ ತೃಪ್ತಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಶುಭಸಂಖ್ಯೆ: 7
ಮಿಥುನ: ತಾಳ್ಮೆಯಿರಲಿ. ಆರೋಗ್ಯ ಗಮನಿಸಿ. ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ಕೆಲಸಗಾರರಿಗೆ ಪೋ›ತ್ಸಾಹಿಸಿ. ಶುಭಸಂಖ್ಯೆ: 9
ಕಟಕ: ಪದವಿಗಾಗಿ ಪ್ರಯತ್ನ. ಅಧ್ಯಯನದಲ್ಲಿ ತತ್ಪರತೆ. ಧಾರ್ವಿುಕ ಕಾರ್ಯಾಸಕ್ತಿ. ಹಣಕಾಸಿನ ವಿಚಾರದಲ್ಲಿ ಕೃಪಣತೆ ಮಾಡದಿರಿ. ಶುಭಸಂಖ್ಯೆ: 1
ಸಿಂಹ: ಹಿರಿಯರಿಂದ ಸಂತೋಷ. ಗೃಹವಾಹನಾದಿ ಖರೀದಿ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಶುಭಸಂಖ್ಯೆ: 2
ಕನ್ಯಾ: ಪರಾಕ್ರಮದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ: 4
ತುಲಾ: ಹಠಮಾರಿತನದಿಂದ ಸುಮ್ಮನೆ ನಿಷ್ಠುರಕ್ಕೆ ಕಾರಣವಾಗದಿರಿ. ತಾಳ್ಮೆಯಿಂದ ವ್ಯವಹರಿಸಿ. ನಿರೀಕ್ಷಿತ ಗುರಿ ಸಾಧಿಸಿಕೊಳ್ಳಿ. ಶುಭಸಂಖ್ಯೆ: 6
ವೃಶ್ಚಿಕ: ಆರೋಗ್ಯ ವೃದ್ಧಿ. ಹೆಚ್ಚಿದ ಗೌರವ. ಬಂಧುಮಿತ್ರರ ಸಹಕಾರ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಕೆಲಸ ಸಿಗುವ ಸಾಧ್ಯತೆ. ಶುಭಸಂಖ್ಯೆ: 6
ಧನುಸ್ಸು: ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವ. ಆಸ್ತಿ ಭೂಮಿ ಕಟ್ಟಡ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಮಧ್ಯಮ. ಶುಭಸಂಖ್ಯೆ 8
ಮಕರ: ಮಕ್ಕಳಿಂದ ಹೆಚ್ಚಿದ ಸಂತೋಷ. ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ವಿಪುಲ ಅವಕಾಶ. ಅನಿರೀಕ್ಷಿತ ಧನಾಗಮ. ಶುಭಸಂಖ್ಯೆ: 1
ಕುಂಭ: ಆಸ್ತಿ ವಿಚಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ. ಧನಾರ್ಜನೆ ಉತ್ತಮ. ಶುಭಸಂಖ್ಯೆ: 4
ಮೀನ: ಗೃಹೋಪಯೋಗಿ ವಸ್ತುಗಳ ಸಂಗ್ರಹ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಹೆಚ್ಚಿದ ವರಮಾನ. ಗೃಹದಲ್ಲಿ ಸಂತಸ. ಶುಭಸಂಖ್ಯೆ: 6