ಈ ರಾಶಿಯವರಿಗೆ ಬಹಳ ದಿನದ ಕನಸು ಕೈಗೂಡಲಿದೆ...

Nitya-Bhavishya-vvani-1-2-1
Published on

ಮೇಷ: ಬಂಧುಬಾಂಧವರೊಡನೆ ನಿಮ್ಮ ಆತ್ಮೀಯತೆ ವೃದ್ಧಿಸಲಿದೆ. ಮಕ್ಕಳ ಚಿಂತೆಯನ್ನು ಬಿಟ್ಟುಬಿಡಿ. ಬಾಳಸಂಗಾತಿಯ ಬೆಂಬಲವಿದೆ. ಶುಭಸಂಖ್ಯೆ: 8

ವೃಷಭ: ವಿಪರೀತ ಕಿರಿಕಿರಿಯಿಂದ ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸಲು ಗಣೇಶನನ್ನು ಅಷ್ಟೋತ್ತರದಿಂದ ಅರ್ಚಿಸಿ. ಶುಭಸಂಖ್ಯೆ: 2

ಮಿಥುನ: ಅಧ್ಯಯನದ ವಿಚಾರದಲ್ಲಿ ವಿದ್ಯಾರ್ಥಿಗಳ ಆಸಕ್ತಿ ವೃದ್ಧಿಸಲಿದೆ. ಆದರೆ ಖಂಡಿತ ಮಾದಕ ಪದಾರ್ಥಗಳಿಂದ ದೂರವಿರಿ. ಶುಭಸಂಖ್ಯೆ: 4

ಕಟಕ: ವೃತ್ತಿಯಲ್ಲಿ ಕೆಲವು ರೀತಿಯ ಸಮಸ್ಯೆಗಳು ತಲೆದೋರಬಹುದು. ವಿನಯದಿಂದಲೇ ಪರಿಸ್ಥಿತಿಯನ್ನು ನಿಭಾಯಿಸಿ. ಶುಭಸಂಖ್ಯೆ: 6

ಸಿಂಹ: ದೂರಪ್ರಯಾಣಕ್ಕೆ ಅವಕಾಶ ದೊರೆತರೂ ಹಣಕಾಸಿನ ಅಭಾವ ಎದುರಾಗಲಿದೆ. ಆತುರದ ನಿರ್ಧಾರ ಕೈಬಿಡಿ. ಶುಭಸಂಖ್ಯೆ: 9

ಕನ್ಯಾ: ಕೆಲವು ಕೌಟುಂಬಿಕ ಸಮಸ್ಯೆಗಳಿಗೆ ವಿಮುಕ್ತಿ ದೊರೆತರೂ ಭೂಸಂಬಂಧಿ ವಿಷಯದಲ್ಲಿ ಮಾತ್ರ ಬಿಕ್ಕಟ್ಟು ಬಂದೀತು. ಶುಭಸಂಖ್ಯೆ: 1

ತುಲಾ: ರಾಜಕೀಯ ಕ್ಷೇತ್ರದವರಿಗೆ ಸಾರ್ವಜನಿಕ ವಲಯದಲ್ಲಿ ಮನ್ನಣೆಯಿದೆ. ಹಿತಶತ್ರುಗಳಿಂದ ಮನಃಶಾಂತಿಗೆ ಭಂಗ ಬಂದೀತು. ಶುಭಸಂಖ್ಯೆ: 7

ವೃಶ್ಚಿಕ: ಅಲ್ಪರ ಸಂಗದಿಂದ ಬಹು ದೂರದಲ್ಲಿಯೇ ಇರಿ. ಸಂಕುಚಿತ ಮನೋಭಾವದವರನ್ನು ನಿಧಾನವಾಗಿ ದೂರ ಸರಿಸಿ. ಶುಭಸಂಖ್ಯೆ: 3

ಧನಸ್ಸು: ಕುಲದೇವತೆಯ ಅನುಗ್ರಹದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯವಾಗಲಿದೆ. ತಾಳ್ಮೆಯಿಂದ ಇದ್ದರೆ ಯಾವ ಕಷ್ಟವೂ ಇರದು. ಶುಭಸಂಖ್ಯೆ: 5

ಮಕರ: ಉನ್ನತ ವ್ಯಾಸಂಗದ ಅವಕಾಶ ಹತ್ತಿರದಲ್ಲಿಯೇ ಲಭ್ಯವಾಗಲಿದೆ. ಆದರೆ ಯಾವುದೇ ಕಾರಣಕ್ಕೂ ಸಾಲಕ್ಕೆ ಮಾತ್ರ ಅಂಟಿಕೊಳ್ಳದಿರಿ. ಶುಭಸಂಖ್ಯೆ: 2

ಕುಂಭ: ವ್ಯಾಪಾರ ಕ್ಷೇತ್ರದಲ್ಲಿ ಹೊಸ ಹೊಸ ವ್ಯಕ್ತಿಗಳ ಪರಿಚಯದಿಂದ ಉತ್ತಮ ಸಲಹೆಗಳು ದೊರೆತು ಸಂತೋಷ ಹೆಚ್ಚಲಿದೆ. ಶುಭಸಂಖ್ಯೆ: 8

ಮೀನ: ಕುಲದೇವತಾ ದರ್ಶನದಿಂದ ಮಾನಸಿಕ ನೆಮ್ಮದಿಯನ್ನು ಪಡೆಯಲಿದ್ದೀರಿ. ಬಹಳ ದಿನಗಳ ಕನಸು ಕೈಗೂಡಲಿದೆ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net