ಈ ರಾಶಿಯವರಿಗಿಂದು ಪ್ರೀತಿ-ಪ್ರೇಮ ವಿಷಯಗಳಲ್ಲಿ ಸಮಸ್ಯೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅಧಿಕ ನಷ್ಟ ಉಂಟಾದೀತು. ಶತ್ರು ದಮನ. ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ. ಶುಭಸಂಖ್ಯೆ: 2

ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವುದು. ಸಹೋದರಿಯಿಂದ ಅನುಕೂಲ. ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಶುಭಸಂಖ್ಯೆ: 9

ಮಿಥುನ: ಉದ್ಯೋಗ ಸ್ಥಳ, ಗೃಹ ಬದಲಾವಣೆಯ ಆಲೋಚನೆ. ಮಾತಿನಿಂದ ಕುಟುಂಬಸ್ಥರಿಗೆ ನೋವು ಆಗಬಹುದು.ಗುಪ್ತ ಧನಾಗಮನ. ಶುಭಸಂಖ್ಯೆ: 3

ಕಟಕ: ವ್ಯವಹಾರದಲ್ಲಿ ಅಧಿಕ ಧನಾಗಮನ. ಅನಗತ್ಯ ತಿರುಗಾಟ ಮಾಡುವಿರಿ. ದಕ್ಷತೆ, ಶೌರ್ಯ ದಿಟ್ಟತನ ಪ್ರದರ್ಶಿಸುವಿರಿ. ಶುಭಸಂಖ್ಯೆ: 6

ಸಿಂಹ: ಆದಾಯ ಮತ್ತು ನಷ್ಟ ಸಮಪ್ರಮಾಣದಲ್ಲಿ ಇರಲಿದೆ. ಉತ್ತಮ ಹೆಸರು, ಗೌರವ ಕೀರ್ತಿ ನಿಮ್ಮೆಡೆಗೆ ಬರಲಿದೆ. ಆರ್ಥಿಕ ಒತ್ತಡಗಳು. ಶುಭಸಂಖ್ಯೆ: 3

ಕನ್ಯಾ: ಒತ್ತಡಕ್ಕೆ ಸಿಲುಕುವಿರಿ. ಉದ್ಯೋಗ ಕ್ಷೇತ್ರದಲ್ಲಿ ವಿಪರೀತ ಕೆಲಸ. ನಷ್ಟದ ಪ್ರಮಾಣ ಅಧಿಕ. ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ. ಶುಭಸಂಖ್ಯೆ: 6

ತುಲಾ: ಉದ್ಯೋಗ ಲಾಭ. ನಿಶ್ಚಿತ ಆದಾಯದ ಪ್ರಮಾಣ ಕುಂಠಿತ. ಅದೃಷ್ಟ ವಂಚಿತರು ಎನ್ನುವ ಭಾವನೆ ಬಲಗೊಳ್ಳಬಹುದು. ಶುಭಸಂಖ್ಯೆ: 8

ವೃಶ್ಚಿಕ: ಸರ್ಕಾರದಿಂದ ಸಹಾಯ. ಅನುಕೂಲಕರ ದಿನ. ಮಿತ್ರರಿಂದ ಅದೃಷ್ಟ. ಸಮಾಜದಲ್ಲಿ ಮಾನ ಸಂಮಾನಗಳಿಂದ ಪ್ರತಿಷ್ಠೆ. ಶುಭಸಂಖ್ಯೆ: 7

ಧನುಸ್ಸು: ಅನಿರೀಕ್ಷಿತ ಗಣ್ಯರ ಭೇಟಿ. ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ. ಪ್ರಯಾಣದಲ್ಲಿ ತೊಂದರೆ. ಉದ್ಯೋಗ ಸಮಸ್ಯೆಗಳು. ಶುಭಸಂಖ್ಯೆ: 7

ಮಕರ: ಸಂಗಾತಿಯೊಂದಿಗೆ ಕಲಹ. ಸಹನೆ ಕಳಕೊಳ್ಳಬೇಡಿ. ಪಾಲುದಾರಿಕೆಯಲ್ಲಿ ಸಮಸ್ಯೆಯಾದೀತು. ಮಾನಸಿಕವಾಗಿ ಒತ್ತಡ. ಶುಭಸಂಖ್ಯೆ:3

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು. ಆಹಾರದಿಂದ ಸಮಸ್ಯೆ. ವೈದ್ಯರ ಸಲಹೆ ಪಡೆಯುವುದು ಅಗತ್ಯ. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 1

ಮೀನ: ಪ್ರೀತಿ-ಪ್ರೇಮ ವಿಷಯಗಳಲ್ಲಿ ಸಮಸ್ಯೆ. ಮಕ್ಕಳೊಂದಿಗೆ ವಾಗ್ವಾದ. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟದ ಪ್ರಮಾಣ ಅಧಿಕ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net