ನಿತ್ಯಭವಿಷ್ಯ| ಈ ರಾಶಿಯವರಿಗಿಂದು ಹಲವು ದಿನಗಳ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ

Nitya-Bhavishya-vvani-1-2-1-1
Published on

ಮೇಷ: ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕುಟುಂಬದ ಸಮಸ್ಯೆ ಬಗೆಹರಿಯಲಿದೆ. ಹೊಸ ಉದ್ಯಮಕ್ಕೆ ಚಾಲನೆ. ಶುಭಸಂಖ್ಯೆ: 7

ವೃಷಭ: ರಾಜಕೀಯದಲ್ಲಿರುವವರು ತಾಳ್ಮೆಯಿಂದ ವರ್ತಿಸಿದರೆ ವಿಶೇಷ ಅಧಿಕಾರ ಪ್ರಾಪ್ತಿ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 4

ಮಿಥುನ:ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಅನಾರೋಗ್ಯ ಕಾಡಬಹುದು. ಹಳೆಯ ವಿವಾದದ ಪುನರಾವರ್ತನೆ. ಮಕ್ಕಳೊಂದಿಗೆ ಕಿರಿಕಿರಿ. ಶುಭಸಂಖ್ಯೆ: 1

ಕಟಕ: ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಬಹಳ ದಿನಗಳ ಕನಸು ನನಸು. ಪತಿಯೊಂದಿಗೆ ವಿಹಾರ. ಉತ್ತಮ ಭೋಜನ. ಶುಭಸಂಖ್ಯೆ: 5

ಸಿಂಹ: ನಿಮ್ಮ ವಿಚಾರದಿಂದ ಜನಮನ್ನಣೆ. ಆತ್ಮಾಭಿಮಾನದಿಂದ ವರ್ತಿಸಿ. ಹಿರಿಯರೊಂದಿಗೆ ಗೌರವದಿಂದ ಇರಿ. ಶುಭಸಂಖ್ಯೆ: 8

ಕನ್ಯಾ: ಅನವಶ್ಯಕ ತಿರುಗಾಟ ಮಾಡಬೇಕಾದೀತು. ಪರಿಶ್ರಮವೆಲ್ಲ ವ್ಯರ್ಥವಾಗಿ ಬೇಸರ. ಮನೆಯಲ್ಲಿ ಶುಭಕಾರ್ಯದ ಸಡಗರ. ಶುಭಸಂಖ್ಯೆ: 4

ತುಲಾ: ತಾಳ್ಮೆಯಿಂದ ವರ್ತಿಸಿದಷ್ಟು ನಿಮಗೆ ಒಳ್ಳೆಯದು. ಮಕ್ಕಳಿಂದ ಖರ್ಚು. ಹಳೆಯ ರೋಗ ಬಂದು ಬಾಧಿಸಬಹುದು. ಶುಭಸಂಖ್ಯೆ: 5

ವೃಶ್ಚಿಕ: ಸಹೋದರರ ವಿಚಾರದಲ್ಲಿ ಸಮಾಧಾನ. ಆಸ್ತಿ ವಿಚಾರದಲ್ಲಿ ಕಿರಿಕಿರಿ ಉಂಟಾದೀತು. ಮನೆ ಬದಲಾವಣೆಗೆ ನಿರ್ಧಾರ. ಶುಭಸಂಖ್ಯೆ: 6

ಧನುಸ್ಸು: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ತಾಳ್ಮೆಯಿಂದ ವರ್ತಿಸಿ. ಔತಣಕೂಟದಲ್ಲಿ ಭಾಗಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 4

ಮಕರ: ಶ್ರಮಕ್ಕೆ ತಕ್ಕನಾದ ಪ್ರತಿಫಲ ಇಲ್ಲದೇ ನಿರಾಸೆ. ಹಿತೈಷಿಗಳಿಂದ ಸಮಾಧಾನ. ಆತ್ಮೀಯರೊಬ್ಬರ ಭೇಟಿಯಿಂದ ನಿರಾಳ. ಶುಭಸಂಖ್ಯೆ: 2

ಕುಂಭ: ಧನದ ಅಪವ್ಯಯ. ಕುಟುಂಬದಲ್ಲಿ ಪರಸ್ಪರ ಮನಸ್ತಾಪ. ಮಗಳಿಂದ ಶುಭಸುದ್ದಿ. ವ್ಯಾಪಾರಸ್ಥರಿಗೆ ನಷ್ಟವಾಗುವ ಸಂಭವ. ಶುಭಸಂಖ್ಯೆ: 5

ಮೀನ: ನಟರಿಗೆ ವಿಶೇಷ ದಿನ. ಹಲವು ದಿನಗಳ ಶ್ರಮಕ್ಕೆ ಪ್ರತಿಫಲ. ಕೃಷಿಕರಿಗೆ ಅಧಿಕ ಲಾಭ. ಧಾರ್ವಿುಕ ವ್ಯಕ್ತಿಗಳ ಭೇಟಿ ಮಾಡುವಿರಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net