

ಮೇಷ: ನಾಟಕೀಯವಾಗಿ ನೀತಿಯನ್ನು ಬೋಧಿಸುವ ಜನರು ಸಿಗಬಹುದು. ಜಾಣ್ಮೆಯಿಂದಲೇ ಅಂಥ ಜನರನ್ನು ದೂರ ಕಳಿಸಿ. ಶುಭಸಂಖ್ಯೆ: 4
ವೃಷಭ: ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯಕ್ಕೆ ಹೋಗುವವರು ಅಪಾಯ ತಂದುಬಿಟ್ಟಾರು. ಎಚ್ಚರ ಇರಲಿ. ಶುಭಸಂಖ್ಯೆ: 2
ಮಿಥುನ: ಗಾಢ ಬಣ್ಣದ ವಸ್ತ್ರವನ್ನು ಖಂಡಿತ ಧರಿಸದಿರಿ. ಕೆಲವು ಅವಮಾನಗಳಿಂದ ಪಾರಾಗಲು ಈ ಉಪಾಯದಿಂದ ಸಹಾಯವಿದೆ. ಶುಭಸಂಖ್ಯೆ: 1
ಕಟಕ: ನೈತಿಕ ಪ್ರಜ್ಞೆಯ ಉಳಿವಿಗಾಗಿ ಚಿಂತನಶೀಲವಾದ ನಿಮ್ಮ ಸೂಕ್ಷ್ಮ ಪ್ರಯತ್ನಗಳಿಗೆ ಹಲವಾರು ಜನರ ಬೆಂಬಲ ಒದಗಿಬರಲಿದೆ. ಶುಭಸಂಖ್ಯೆ: 8
ಸಿಂಹ: ಸಾಮಾನ್ಯ ಕಾರಣಕ್ಕಾಗಿ ವಾದವಿವಾದಗಳನ್ನು ಹಿಗ್ಗಿಸಬೇಡಿ. ಜೀವನಸಂಗಾತಿಯ ಜತೆಗೂ ಭಿನ್ನಾಭಿಪ್ರಾಯಗಳು ಬೇಡ. ಶುಭಸಂಖ್ಯೆ: 9
ಕನ್ಯಾ: ಉದ್ಯಮಪತಿಗಳಿಗೆ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಆತಂಕ ಉಂಟಾದೀತು. ನಿಯಮಪಾಲನೆ ಸರಿ ಇರಲಿ. ಶುಭಸಂಖ್ಯೆ: 4
ತುಲಾ: ಅಕ್ಕಪಕ್ಕದವರ ಜತೆಗೆ ಮನಸ್ತಾಪ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಸಾಧ್ಯವಾದಷ್ಟರ ಮಟ್ಟಿಗೆ ಮೌನವಾಗಿರುವುದೇ ಯುಕ್ತ. ಶುಭಸಂಖ್ಯೆ: 3
ವೃಶ್ಚಿಕ: ಒಂದೇ ವಿಷಯದ ಬಗ್ಗೆ ಸತತವಾಗಿ ಗಮನ ನೀಡಲು ಕಷ್ಟವಾಗಬಹುದು. ಕಿರಿಕಿರಿಯನ್ನು ಬೇಗ ನಿವಾರಣೆ ಮಾಡಿಕೊಳ್ಳಿ. ಶುಭಸಂಖ್ಯೆ: 6
ಧನು: ತೀಕ್ಷ್ಣವಾಗಿ ಆಲೋಚಿಸುವುದಕ್ಕೂ ಮುನ್ನವೇ ಅಂತಿಮ ನಿರ್ಧಾರ ಬೇಡ. ಸಮಯವನ್ನು ಪಡೆದು ಯೋಚಿಸಿ ನಿರ್ಧರಿಸಿ. ಶುಭಸಂಖ್ಯೆ: 2
ಮಕರ: ಕಾನೂನಿನ ಇತಿಮಿತಿಗಳನ್ನು ಚೆನ್ನಾಗಿಯೇ ಅರಿತಿದ್ದೀರಿ. ಆದರೂ ನಿಮ್ಮ ಹೋರಾಟವನ್ನು ಮಾತ್ರ ಬಿಡಲು ಹೋಗದಿರಿ. ಶುಭಸಂಖ್ಯೆ: 1
ಕುಂಭ: ವಿವಾಹದ ತೊಡಕು ನಿವಾರಣೆಯಾಗುವಂತೆ ಹಿರಿಯರೊಬ್ಬರು ಸಹಕಾರ ಕೊಡಬಲ್ಲರು. ಮನಶ್ಶಾಂತಿಯೂ ಲಭ್ಯ. ಶುಭಸಂಖ್ಯೆ: 5
ಮೀನ: ಸ್ಪಷ್ಟವಾಗಿ ತಿಳಿದಿರುವುದನ್ನು ಮಾತ್ರ ಅಳವಡಿಸಿಕೊಳ್ಳಿ. ಯಾರೋ ಅಪರಿಚಿತರ ಸಲಹೆಗೆ ಪ್ರಾಮುಖ್ಯತೆ ಬೇಡ. ಶುಭಸಂಖ್ಯೆ: 7