

ಮೇಷ: ಉದ್ಯೋಗಸ್ಥ ಸ್ತ್ರೀಯರಿಗೆ ಆದಾಯ ವೃದ್ಧಿ, ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆ. ಧಾನ್ಯ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಸರ್ಕಾರದ ಕೆಲಸದ ವಿಚಾರದಲ್ಲಿ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯ ದೊರಕಲಿದೆ. ಶತ್ರುಗಳ ಬಾಧೆ ನಿವಾರಣೆಯಾಗಲಿದೆ. ಶುಭಸಂಖ್ಯೆ: 5
ಮಿಥುನ: ಉನ್ನತಿಗಾಗಿ ಚಿಂತನೆ ನಡೆಸಲಿದ್ದೀರಿ. ಪರಿಶ್ರಮದಿಂದ ಯಶಸ್ಸು. ವ್ಯವಹಾರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವಿರಿ. ಶುಭಸಂಖ್ಯೆ: 2
ಕಟಕ: ವಾಹನ ಮಾರಾಟಗಾರರಿಗೆ ಉತ್ತಮ ಲಾಭ. ಕಳೆದುಕೊಂಡ ವಸ್ತು ಸಿಗಬಹುದು. ಮಗಳ ವಿವಾಹ ಸಂಬಂಧ ಒತ್ತಡ ಸಾಧ್ಯತೆ. ಶುಭಸಂಖ್ಯೆ: 7
ಸಿಂಹ: ಖಾಸಗಿ ನೌಕರರಿಗೆ ಸುದಿನ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ ದಿನ. ಲೇವಾದೇವಿ ವ್ಯವಹಾರದಲ್ಲಿ ಮೋಸ. ಶುಭಸಂಖ್ಯೆ: 7
ಕನ್ಯಾ: ಪಾಲುದಾರಿಕೆಯಲ್ಲಿ ಗಣನೀಯ ಪ್ರಗತಿ. ನೌಕರರಿಗೆ ಬಿಡುವು ದೊರಕುವ ಸಾಧ್ಯತೆ. ಮೇಲಧಿಕಾರಿಗಳಿಂದ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 8
ತುಲಾ: ನೆಮ್ಮದಿಯನ್ನು ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ಪ್ರವಾಸ ಸಾಧ್ಯತೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ನಿರೀಕ್ಷಿತ ಯಶ. ಶುಭಸಂಖ್ಯೆ: 6
ವೃಶ್ಚಿಕ: ಆಸ್ತಿ ಖರೀದಿ ಸಾಧ್ಯತೆ. ವಿದ್ಯಾರ್ಥಿಗಳು ಭವಿಷ್ಯದ ಕುರಿತು ದೃಢ ನಿರ್ಧಾರ ತೆಗೆದುಕೊಳ್ಳಿ. ಸಂತಾನ ಅಪೇಕ್ಷಿತರಿಗೆ ಸಿಹಿಸುದ್ದಿ. ಶುಭಸಂಖ್ಯೆ: 3
ಧನುಸ್ಸು: ವಿದೇಶಿ ಕಂಪೆನಿಯಿಂದ ಉದ್ಯೋಗದ ಅವಕಾಶ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಕಿರಿಕಿರಿ. ಶುಭಸಂಖ್ಯೆ: 4
ಮಕರ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಸಿಹಿ ಸುದ್ದಿ. ಆದಾಯದಲ್ಲಿ ಹೆಚ್ಚಳ. ವಿವಾಹ ಪ್ರಯತ್ನದಲ್ಲಿರುವವರಿಗೆ ಕಾರ್ಯಸಿದ್ದಿ. ಶುಭಸಂಖ್ಯೆ: 7
ಕುಂಭ: ಖಾಸಗಿ ಉದ್ಯೋಗಿಗಳಿಗೆ ಬಡ್ತಿ. ಅಧಿಕಾರಿಗಳಿಂದ ಒತ್ತಡ. ಕುಟುಂಬದ ಹಿರಿಯರಿಗೆ ಅನಾರೋಗ್ಯ. ಮಗನ ಭವಿಷ್ಯದ ಚಿಂತೆ. ಶುಭಸಂಖ್ಯೆ: 6
ಮೀನ: ವ್ಯಾಪಾರಸ್ಥರಿಗೆ ಧನ ನಷ್ಟ. ಕುಟುಂಬದ ಸಮಸ್ಯೆಗಳಿಗೆ ಹಿರಿಯರಿಂದ ಪರಿಹಾರ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 3