

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾದೀತು. ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾಗುವುದು. ಶುಭಸಂಖ್ಯೆ: 9
ವೃಷಭ: ಆರ್ಥಿಕ ನಷ್ಟವಾಗಿ ಮಾನಸಿಕವಾಗಿ ಗೊಂದಲ ಉಂಟಾದೀತು. ಸಾಲದ ಚಿಂತೆ ಕಾಡಲಿದೆ. ಪಾಲುದಾರಿಕೆಯಲ್ಲಿ ನಷ್ಟ. ಶುಭಸಂಖ್ಯೆ:1
ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಬಂಧುಗಳಿಂದ ಸಹಾಯ. ಭಾವನೆಗಳಿಗೆ ಪೆಟ್ಟು. ಇಷ್ಟ ದೇವರ ಸ್ಮರಣೆಯಿಂದ ಸಮಾಧಾನ. ಶುಭಸಂಖ್ಯೆ: 5
ಕಟಕ: ಮಾನಸಿಕ ಅಸಮತೋಲನ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ. ಆರ್ಥಿಕ ಸಂಕಷ್ಟ ಕಾಡಲಿದೆ. ಶುಭಸಂಖ್ಯೆ: 8
ಸಿಂಹ: ಬಾಂಧವರು ದೂರವಾದಾರು. ದೈಹಿಕ ಅಸಮರ್ಥ ತೆಯ ಅನುಭವ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಜಯ ನಿಮ್ಮ ಪಾಲಿಗಿದೆ. ಶುಭಸಂಖ್ಯೆ: 7
ಕನ್ಯಾ: ಮಾತಿನಿಂದ ಸಮಸ್ಯೆ. ಪ್ರಯಾಣದಲ್ಲಿ ಅಡೆತಡೆಗಳು. ಭವಿಷ್ಯದ ಚಿಂತೆಗಳು. ಕುಲದೇವತಾ ಸ್ಮರಣೆ, ಪ್ರಾಣಾಯಾಮ ಮಾಡಿ. ಶುಭಸಂಖ್ಯೆ: 6
ತುಲಾ: ವ್ಯವಹಾರದಲ್ಲಿ ನಿರೀಕ್ಷಿತ ಮುನ್ನಡೆ ಸಿಗಲಾರದು. ಅಪಕೀರ್ತಿಯ ಭಯ. ಅಧಿಕಾರಿಗಳಿಂದ ಭರವಸೆಯ ಮಾತುಗಳು. ಶುಭಸಂಖ್ಯೆ: 3
ವೃಶ್ಚಿಕ: ಗೆಲುವು ಸಾಧಿಸುವ ಛಲ ನಿಮ್ಮದಾಗಿರಲಿ. ಸಂಗಾತಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ಅನುಕೂಲ ಒದಗಿಬರಲಿದೆ. ಶುಭಸಂಖ್ಯೆ 6
ಧನುಸ್ಸು: ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ ದೊರೆಯುವುದು. ಆಹಾರಕ್ರಮದಲ್ಲಿ ಕಾಳಜಿವಹಿಸಿ ಆರೋಗ್ಯ ಕಾಪಾಡಿಕೊಳ್ಳಿ. ಶುಭಸಂಖ್ಯೆ: 2
ಮಕರ: ಬಾಲಗ್ರಹ ದೋಷಗಳು. ಅನಿರೀಕ್ಷಿತ ಆಪತ್ತು ಮತ್ತು ಉದ್ಯೋಗ ನಷ್ಟ ಸಾಧ್ಯತೆಯಿದೆ. ದುಶ್ಚಟಗಳಿಂದ ಸಮಸ್ಯೆಗಳಾಗಬಹುದು. ಶುಭಸಂಖ್ಯೆ: 9
ಕುಂಭ: ಸ್ಥಿರಾಸ್ತಿಯಿಂದ ನಷ್ಟ ಸಂಭವಿಸಬಹುದು. ಮಾನಸಿಕ ದೌರ್ಬಲ್ಯ. ಕೃಷಿಕರಿಗೆ ಅನನುಕೂಲ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 3
ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು ಕಂಡುಬರಬಹುದು. ದುರ್ವಾರ್ತೆ ಕೇಳುವಿರಿ. ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಸೋಲಿನ ಅನುಭವ. ಶುಭಸಂಖ್ಯೆ: 1