ನಿತ್ಯಭವಿಷ್ಯ| ಈ ರಾಶಿಯವರಿಗೆ ಇಂದು ಪತ್ನಿಯೊಂದಿಗೆ ವಿರಸ

nity
Published on

ಮೇಷ: ದೂರದ ಊರಿಂದ ನೆಂಟರ ಆಗಮನ. ಸ್ನೇಹಿತರೊಂದಿಗೆ ವಾಗ್ವಾದ. ಆಸ್ತಿ ವಿಚಾರದಲ್ಲಿ ಅಂತಿಮ ತೀರ್ವನ. ಶುಭಸಂಖ್ಯೆ: 9

ವೃಷಭ: ಕಲಾವಿದರಿಗೆ ಉತ್ತಮ ಅವಕಾಶ. ನನೆಗುದಿಯಲ್ಲಿದ್ದ ಕೆಲಸಕ್ಕೆ ಚಾಲನೆ. ಮನೆಯಲ್ಲಿ ಅಸಮಾಧಾನ. ಶುಭಸಂಖ್ಯೆ: 2

ಮಿಥುನ: ಅಷ್ಟಮದ ಶನಿ ಅನಿರೀಕ್ಷಿತ ಆಘಾತಗಳಿಗೆ ಕಾರಣ ಆಗಬಹುದು. ದುರ್ಗಾರಾಧನೆ ಅಪೇಕ್ಷಣೀಯ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 3

ಕಟಕ: ಪತ್ನಿಯೊಂದಿಗೆ ವಿರಸ. ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯಬೇಡ. ಹಿರಿಯರ ಸಲಹೆ ತೆಗೆದುಕೊಳ್ಳಿ. ಸಂಜೆ ಉತ್ತಮ ಭೋಜನ. ಶುಭಸಂಖ್ಯೆ: 3

ಸಿಂಹ: ಮಿತ್ರರೇ ಶತ್ರುಗಳಾಗಬಹುದು ಜೋಕೆ. ಮಹತ್ವದ ತೀರ್ವನಕ್ಕೆ ಮನೆಯವರಿಂದ ವಿರೋಧ. ಸುಬ್ರಹ್ಮಣ್ಯನನ್ನು ಭಜಿಸಿ. ಶುಭಸಂಖ್ಯೆ: 6

ಕನ್ಯಾ: ನ್ಯಾಯಾಲಯದಲ್ಲಿ ಆಸ್ತಿ ವಿಚಾರಕ್ಕೆ ತೀರ್ಪ. ಕುಟುಂಬದೊಂದಿಗೆ ಸಮಾಲೋಚಿಸಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 2

ತುಲಾ: ಮಕ್ಕಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ. ಕುಟುಂಬದಲ್ಲಿ ಅನಿರೀಕ್ಷಿತ ತಿರುವು. ಹಿರಿಯ ಅಧಿಕಾರಿಗಳಿಂದ ನಿಂದನೆ. ಶುಭಸಂಖ್ಯೆ: 6

ವೃಶ್ಚಿಕ: ಸಹೋದರರೊಂದಿಗೆ ಅಸಮಾಧಾನ. ಸಹೋದರಿಯರೊಂದಿಗೆ ಭೋಜನ. ಆತ್ಮೀಯ ಸ್ನೇಹಿತನ ಸಲಹೆ ಪಡೆಯುವಿರಿ. ಶುಭಸಂಖ್ಯೆ: 5

ಧನಸ್ಸು: ಆರ್ಥಿಕ ಸ್ಥಿತಿ ಬಿಗಡಾಯಿಸೀತು. ಅಪವ್ಯಯ ಮಾಡಬೇಡಿ. ಮಾತನಾಡುವಾಗ ಯೋಚಿಸಿ. ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರ. ಶುಭಸಂಖ್ಯೆ: 2

ಮಕರ: ಆರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಆಹಾರ ಸೇವನೆಯಲ್ಲಿ ಮಿತಿ ಇದ್ದರೆ ಕ್ಷೇಮ. ಧನ್ವಂತರಿಯನ್ನು ಭಜಿಸಿ. ಶುಭಸಂಖ್ಯೆ: 7

ಕುಂಭ: ರಾಜಕೀಯ ರಂಗದಲ್ಲಿ ಇರುವವರಿಗೆ ಅವಮಾನ. ಸಂಗೀತಗಾರರಿಗೆ ವಿಶೇಷ ದಿನ. ಧನದ ಅಪವ್ಯಯ. ಶುಭಸಂಖ್ಯೆ: 3

ಮೀನ : ಅನಪೇಕ್ಷಿತ ಘಟನೆಗಳು ನಡೆಯಬಹುದು. ಕುಟುಂಬದಲ್ಲಿ ಶುಭ ಕೆಲಸಕ್ಕೆ ಚಾಲನೆ. ಮಗಳ ಮದುವೆ ನಿಶ್ಚಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net