ಈ ರಾಶಿಯ ಉದ್ಯೋಗಿಗಳಿಗೆ ಇಂದು ವೃತ್ತಿಜೀವನದಲ್ಲಿ ಕೆಲವು ಧರ್ಮಸಂಕಟಗಳು ಕಾಣಿಸಲಿದೆ

Nitya-Bhavishya-vvani-1-2-1
Published on

ಮೇಷ: ವ್ಯಾಪಾರಿಗಳಿಗೆ ಲಾಭವಿದೆ. ಉದ್ಯೋಗಿಗಳಿಗೆ ವೃತ್ತಿಜೀವನದಲ್ಲಿ ಕೆಲವು ಧರ್ಮಸಂಕಟಗಳು ಕಾಣಿಸಬಹುದು. ಅದೃಷ್ಟಸಂಖ್ಯೆ: 3

ವೃಷಭ: ನಿಮ್ಮನ್ನು ಬಳಸಿಕೊಂಡು ತಮ್ಮ ಕಾರ್ಯಗಳನ್ನು ಮಾಡಿಕೊಳ್ಳುವ ಜನರು ಹೆಚ್ಚು ಸಿಗುತ್ತಾರೆ. ಹುಷಾರಾಗಿರಿ. ಅದೃಷ್ಟಸಂಖ್ಯೆ: 1

ಮಿಥುನ: ಇನ್ನೆಂದೂ ಇತರರ ಸಹಾಯ ಪಡೆಯುವ ಯೋಚನೆ ಬೇಡವೇ ಬೇಡ ಅನಿಸುವ ಅನುಭವ ಆಗಬಹುದು. ಅದೃಷ್ಟಸಂಖ್ಯೆ: 6

ಕಟಕ: ಗುರುಗಳ ಮಾರ್ಗದರ್ಶನ ಅದ್ಭುತವಾಗಿ ಲಭಿಸುವ ಕಾರಣ ನಿಶ್ಚಿಂತೆಯಿಂದ ಕೆಲಸಕಾರ್ಯ ಮುಂದುವರಿಸಿ. ಅದೃಷ್ಟಸಂಖ್ಯೆ: 9

ಸಿಂಹ: ನಿಮಗೆ ಆಶ್ವಾಸನೆಗಳೇನೋ ಹೇರಳವಾಗಿಯೇ ಲಭಿಸುತ್ತದೆ. ಆದರೆ ಅವು ಸಾಕಾರಗೊಳ್ಳುವುದು ಮಾತ್ರ ಕಷ್ಟ. ಅದೃಷ್ಟಸಂಖ್ಯೆ: 5

ಕನ್ಯಾ: ಸಣ್ಣ ವಿಚಾರಕ್ಕೂ ಸಿಟ್ಟು ಹೆಚ್ಚಾಗಿ ಬರುವುದರಿಂದ ಕಾರ್ಯದಲ್ಲಿ ಹಾನಿ ಕಾಣಿಸುತ್ತಿದೆ. ಸಮಾಧಾನವಾಗಿರಿ. ಅದೃಷ್ಟಸಂಖ್ಯೆ: 1

ತುಲಾ: ಕೈಗೊಂಡ ಕಾರ್ಯದ ಸಾಫಲ್ಯಕ್ಕಾಗಿ ನಿಮ್ಮ ಪ್ರಯತ್ನ ಸಾಕಾಗದು. ಇನ್ನೂ ಹೆಚ್ಚಿನದಾದ ಪ್ರಯತ್ನಗಳು ಬೇಕು. ಅದೃಷ್ಟಸಂಖ್ಯೆ: 3

ವೃಶ್ಚಿಕ: ಅನಿರೀಕ್ಷಿತವಾಗಿ ದೂರಪ್ರಯಾಣ ಮಾಡಬೇಕಾದ ಸಂದರ್ಭ ಒದಗಿಬರಲಿದೆ. ಮಾನಸಿಕವಾಗಿ ಸಿದ್ಧರಾಗಿ. ಅದೃಷ್ಟಸಂಖ್ಯೆ: 4

ಧನುಸ್ಸು: ಚುರುಕಾಗಿ ವರ್ತಿಸದೆ ಆಲಸ್ಯವನ್ನು ಮಾಡಿ ಒಂದು ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಕಾಗಬಹುದು. ಅದೃಷ್ಟಸಂಖ್ಯೆ: 2

ಮಕರ: ಅಸಹಿಷ್ಣುತೆ ನಿಮಗೆ ರೋಗವಾಗಿ ಕಾಡಬಹುದು. ಆದರೆ ಯಾವುದರ ಬಗೆಗೂ ಅಸಹನೆಯನ್ನು ತೋರದಿರಿ. ಅದೃಷ್ಟಸಂಖ್ಯೆ: 7

ಕುಂಭ: ನಿಮಗೆ ಅರಿವಿಲ್ಲದೆಯೇ ಅಹಂಕಾರವು ನಿಮ್ಮನ್ನು ಆವರಿಸಲಿದೆ. ಹೀಗಾಗಿ ವಿನಮ್ರತೆಯಿಂದಲೇ ವರ್ತಿಸಿ. ಅದೃಷ್ಟಸಂಖ್ಯೆ: 9

ಮೀನ: ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಲಭಿಸದ ಕಾರಣ ಬೇಸರ ಉಂಟಾಗಲಿದೆ. ಇಷ್ಟದೇವರನ್ನು ಶ್ರದ್ಧೆಯಿಂದ ಧ್ಯಾನಿಸಿ. ಅದೃಷ್ಟಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net