ನಿತ್ಯಭವಿಷ್ಯ| ಈ ರಾಶಿಯವರು ಇಂದು ದುಬಾರಿ ವಸ್ತು ಖರೀದಿಸಬೇಡಿ..

Nitya-Bhavishya-vvani-1-2-1
Published on

ಮೇಷ: ವಿಶಿಷ್ಟವಾದ ಸಿದ್ಧಿಯಿಂದ ಜನಾನುರಾಗವನ್ನು ಪಡೆಯಲಿದ್ದೀರಿ. ಭಗವಾನ್ ಅಗ್ನಿದೇವನನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 8

ವೃಷಭ: ಹಿರಿಯರ ಮುಖಾಂತರ ಬರುವ ಆಸ್ತಿಯನ್ನು ಇಲ್ಲವೇ ಕೆಲವು ಬಗೆಯ ಅನಿರೀಕ್ಷಿತವಾದ ಲಾಭಗಳನ್ನು ಗಳಿಸಲಿದ್ದೀರಿ. ಶುಭಸಂಖ್ಯೆ: 5

ಮಿಥುನ: ಈ ಹಿಂದೆ ಅನೇಕ ರೀತಿಯ ಪರಿಶ್ರಮಗಳೊಂದಿಗೆ ನೀವು ನಡೆಸಿದ ಕೆಲಸಕಾರ್ಯಗಳು ಈಗ ಪ್ರತಿಫಲ ಕೊಡಲಿವೆ. ತುಸು ನಿರಾಳರಾಗಿರಿ. ಶುಭಸಂಖ್ಯೆ: 2

ಕಟಕ: ಆಧ್ಯಾತ್ಮಿಕ ವಿಚಾರಗಳಲ್ಲಿ ಕೈಗೊಳ್ಳುವ ಗಾಢವಾದ ದೀರ್ಘ ಅಧ್ಯಯನವು ನಿಮಗೆ ವಿಶಿಷ್ಟ ಬಗೆಯ ಪ್ರಜ್ಞಾಶಕ್ತಿಯನ್ನು ಒದಗಿಸಲಿದೆ. ಶುಭಸಂಖ್ಯೆ: 9

ಸಿಂಹ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಮನಃಶಾಂತಿಗೆ ಬೇಕಾದ ವಿವಿಧ ಸಹಾಯ ಸಹಕಾರಗಳು ಲಭಿಸುತ್ತವೆ. ಶುಭಸಂಖ್ಯೆ: 4

ಕನ್ಯಾ: ಕೆಲವು ಬಗೆಯ ದುಬಾರಿ ವಸ್ತುಗಳ ಖರೀದಿಯನ್ನು ಈಗ ಸಾಧ್ಯವಿದ್ದಷ್ಟು ಮುಂದೂಡುವುದೇ ಉತ್ತಮ. ಸಮಾಧಾನದ ಮಾರ್ಗವೂ ಲಭ್ಯ. ಶುಭಸಂಖ್ಯೆ: 6

ತುಲಾ: ಆರ್ಥಿಕ ನಷ್ಟಕ್ಕೆ ಅವಕಾಶಗಳು ಎದುರಾಗದಂತೆ ನೋಡಿಕೊಳ್ಳಲು ಅಯೋಗ್ಯರಾದ ಜನರನ್ನು ನಿಮ್ಮಿಂದ ದೂರವೇ ಇಟ್ಟುಬಿಡಿ. ಶುಭಸಂಖ್ಯೆ: 3

ವೃಶ್ಚಿಕ: ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಅವಶ್ಯವೆನಿಸಿದ ಸಹಾಯವು ಸದ್ಯದಲ್ಲೇ ಸಂದಾಯವಾಗಲಿದೆ. ಮನಸ್ಸಿಗೆ ಸಂತೋಷವೂ ಇದೆ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶನಗಳಿದ್ದರೆ ಕೆಂಪು, ನೀಲಿ ಇವೇ ಮುಂತಾದ ಗಾಢ ವರ್ಣದ ವಸ್ತ್ರಧಾರಣೆ ಮಾಡುವುದು ಬೇಡ. ಶುಭಸಂಖ್ಯೆ: 1

ಮಕರ: ಬಾಳಸಂಗಾತಿಯಿಂದ ದೊರೆಯುವ ನೈತಿಕವಾದ ಬೆಂಬಲದಿಂದ ಅಪಾರವಾದ ಸಾಮರ್ಥ್ಯವನ್ನು ಗಳಿಸಲಿದ್ದೀರಿ. ಸಂತಸದಿಂದಿರಿ. ಶುಭಸಂಖ್ಯೆ: 5

ಕುಂಭ: ಹೊಸದಾದ ಅನೇಕ ದಿವ್ಯ ಅನುಭವಗಳಿಂದ ರೋಮಾಂಚನಗೊಳ್ಳಲಿದ್ದೀರಿ. ಯಶಸ್ವಿಯಾದ ಕಾರ್ಯಕ್ಕೂ ಮುಂದಾಗುವಿರಿ. ಶುಭಸಂಖ್ಯೆ: 8

ಮೀನ : ಯೋಗ್ಯರೆನಿಸಿದ ವ್ಯಕ್ತಿಗಳಿಂದ ಅತ್ಯಮೂಲ್ಯವಾದ ಸಲಹೆಯೊಂದನ್ನು ಪಡೆದುಕೊಂಡು ಕಾರ್ಯಸಾಧನೆ ಮಾಡಿ ಜಗತ್ತಿಗೆ ತೋರಿಸಲಿದ್ದೀರಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net