

ಮೇಷ: ದಿನದ ಆರಂಭ ಶ್ರಮದಾಯಕವಾಗಿದ್ದರೂ ನಂತರ ಎಲ್ಲವೂ ಸುಸೂತ್ರ. ಕಿರಿಕಿರಿಗಳನ್ನು ಶಾಂತವಾಗಿ ಎದುರಿಸಿ ಯಶ ಸಾಧಿಸಿ. ಶುಭಸಂಖ್ಯೆ: 7
ವೃಷಭ: ಕೈಗೊಂಡ ಬಹುಮುಖ್ಯವಾದ ಯೋಜನೆಯೊಂದನ್ನು ಪೂರ್ಣಗೊಳಿಸುವ ಸಾಧ್ಯತೆ. ಆರೋಗ್ಯ ಸಿಬ್ಬಂದಿಗೆ ಹೆಚ್ಚಿನ ಅನುಕೂಲ. ಶುಭಸಂಖ್ಯೆ: 3
ಮಿಥುನ: ವಿಹಾರ, ಔತಣಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಸಾಧ್ಯತೆ. ರಾಜಕಾರಣಿಗಳಿಗೆ ಕೆಲಸದ ಒತ್ತಡ ಹೆಚ್ಚಿ ದೇಹಾಯಾಸ. ಶುಭಸಂಖ್ಯೆ: 6
ಕಟಕ: ಗುರಿ ತಲುಪಬೇಕೆಂಬ ಧಾವಂತದಿದಾಗಿ ಆತಂಕಗಳು ಎದುರಾಗಬಹುದು. ಮಾನಸಿಕ ದೃಢತೆಯಿಂದಾಗಿ ಯಶಸ್ಸು. ಶುಭಸಂಖ್ಯೆ: 3
ಸಿಂಹ: ಸಂತೋಷದ ಸುದ್ದಿಯೊಂದು ನಿಮ್ಮನ್ನು ತಲುಪುತ್ತದೆ. ಮಹತ್ತರ ಸನ್ನಿವೇಶದಲ್ಲಿ ರಕ್ಷಕರಾಗಿ ಕಾರ್ಯನಿರ್ವಹಿಸುವ ಅವಕಾಶ. ಶುಭಸಂಖ್ಯೆ: 4
ಕನ್ಯಾ: ಕಾರ್ಯಬಾಹುಳ್ಯದಿಂದಾಗಿ ಉದ್ಯೋಗದಲ್ಲಿ ಬದಲಾವಣೆಗೆ ಮನಸ್ಸು ಮಾಡುವ ಸಾಧ್ಯತೆ. ಯೋಜನೆಗಳಿಗೆ ಶೀಘ್ರ ಫಲಿತಾಂಶ. ಶುಭಸಂಖ್ಯೆ: 7
ತುಲಾ: ಆತ್ಮವಿಶ್ವಾಸ ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿ ತುಳಿಯುವಿರಿ. ವ್ಯವಹಾರ ನಿಮಿತ್ತ ಪ್ರಮುಖ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6
ವೃಶ್ಚಿಕ: ಮಾಧ್ಯಮದವರ ಸಹಕಾರದಿಂದಾಗಿ ಹೆಚ್ಚಿನ ಪ್ರಚಾರ. ವಿರೋಧಿಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಾದೀತು. ಶುಭಸಂಖ್ಯೆ: 8
ಧನುಸ್ಸು: ಮನೆ ನಿರ್ವಣಕ್ಕೆ ಬಿಡುವಿಲ್ಲದ ಓಡಾಟ. ಗೃಹ ನಿರ್ವಣಕ್ಕೆ ಸಂಬಂಧಿಸಿದ ಅಧಿಕಾರಿ ವರ್ಗದವರೊಂದಿಗೆ ಚರ್ಚೆ ಸಾಧ್ಯತೆ. ಶುಭಸಂಖ್ಯೆ: 7
ಮಕರ: ಕೃಷಿಕರ ವರಮಾನದಲ್ಲಿ ಹೆಚ್ಚಳ. ಪದೋನ್ನತಿಯ ಅವಕಾಶ. ಗಣ್ಯ ವ್ಯಕ್ತಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದೀತು. ಶುಭಸಂಖ್ಯೆ: 2
ಕುಂಭ: ಜೀವನೋಪಾಯಕ್ಕೊಂದು ಹೊಸ ಮಾರ್ಗ ಗೋಚರ. ಸಂಗಾತಿಯಿಂದ ಸಕಾರಾತ್ಮಕ ಸಹಕಾರ ದೊರೆತು ಸಂತೃಪ್ತಿ. ಶುಭಸಂಖ್ಯೆ: 1
ಮೀನ: ಅನಿರೀಕ್ಷಿತ ಕೆಲಸ ಮಾಡಬೇಕಾದೀತು. ಆರ್ಥಿಕ ಉನ್ನತಿಗೆ ವಿಫುಲ ಅವಕಾಶ. ಸೂಕ್ತ ಆಯ್ಕೆಯಲ್ಲಿ ಗೊಂದಲವಾಗುವ ಸಾಧ್ಯತೆ. ಶುಭಸಂಖ್ಯೆ: 9