ಈ ರಾಶಿಯವರಿಗಿಂದು ಬಹುಮಾನ ರೂಪದಲ್ಲಿ ಹಣ ದೊರಕುವುದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬಹುದಿನಗಳ ಆಸೆ ಈಡೇರುವುದು. ತಂದೆಯ ಬಂಧುಗಳಿಂದ ನಷ್ಟ. ಪುಣ್ಯಕರ್ಮದ ಫಲಪ್ರಾಪ್ತಿ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ: 5

ವೃಷಭ: ಹತ್ತಿರದ ಪ್ರಯಾಣದ ಸಾಧ್ಯತೆ. ರಾಜಕೀಯ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಆಸ್ತಿಯಿಂದ ಲಾಭ. ಬಡವರಿಗೆ ಸಹಾಯ ಮಾಡಿ. ಶುಭಸಂಖ್ಯೆ: 5

ಮಿಥುನ: ಧನ ಮತ್ತು ಉದ್ಯೋಗ ನಷ್ಟ ಆಗುವ ಸಂಭವವಿದೆ. ಕುಟುಂಬದಲ್ಲಿ ವಾಗ್ವಾದಗಳು. ಪತ್ರ ವ್ಯವಹಾರಗಳಿಗೆ ಅನುಕೂಲಕರ ದಿನ. ಶುಭಸಂಖ್ಯೆ: 3

ಕಟಕ: ಸ್ವಂತ ಉದ್ಯಮದವರಿಗೆ ಅನುಕೂಲ. ಧಾರ್ವಿುಕ ಚಿಂತನೆ. ಸರ್ಕಾರಿ ಅಧಿಕಾರಿಗಳಿಂದ ಧನ ನಷ್ಟ. ಯತ್ನ ಕಾರ್ಯದಲ್ಲಿ ಜಯ. ಶುಭಸಂಖ್ಯೆ: 3

ಸಿಂಹ: ನಷ್ಟದ ಪ್ರಮಾಣ ಅಧಿಕವಾಗದಂತೆ ಮುನ್ನೆಚ್ಚರ ವಹಿಸಿ. ಬಡ್ತಿ ಮತ್ತು ಪ್ರಶಂಸೆ ನಿಮಗೆ ಸಿಗಲಿದೆ. ತಂದೆಯಿಂದ ಅನುಕೂಲವಿದೆ. ಶುಭಸಂಖ್ಯೆ: 8

ಕನ್ಯಾ: ಆಸ್ತಿ ನಷ್ಟವಾಗುವ ಅಪಾಯವಿದೆ, ಜಾಣತನದಿಂದ ವ್ಯವಹರಿಸಿ. ಅಧಿಕಾರಿಗಳಿಗೆ ಬಡ್ತಿ ಸಿಗುವುದು. ದಾಂಪತ್ಯ ಸಮಸ್ಯೆ ಪರಿಹಾರ. ಶುಭಸಂಖ್ಯೆ: 1

ತುಲಾ: ನಿರೀಕ್ಷಿಸುತ್ತಿದ್ದ ಉದ್ಯೋಗ ದೊರೆತು ಸಂತಸ. ಕೆಲಸ ಕಾರ್ಯಗಳಲ್ಲಿ ಜಯ. ಶತ್ರು ದಮನ. ಋಣ ರೋಗ ಬಾಧೆಗಳಿಂದ ಮುಕ್ತಿ. ಶುಭಸಂಖ್ಯೆ: 6

ವೃಶ್ಚಿಕ: ಪ್ರಯಾಣ ಮಾಡುವ ಸಂದರ್ಭ ಬರುವುದು. ದೂರ ಪ್ರದೇಶಕ್ಕೆ ತೆರಳಲು ಮಾನ್ಯತೆ. ರಾಜಕೀಯ ವ್ಯಕ್ತಿಗಳಿಂದ ಅನುಕೂಲವಿದೆ. ಶುಭಸಂಖ್ಯೆ: 4

ಧನುಸ್ಸು: ಬಹುಮಾನ ರೂಪದಲ್ಲಿ ಹಣ ದೊರಕುವುದು. ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಕಾಳಜಿ ಅಗತ್ಯ. ಮನೆ ವಾತಾವರಣ ಕಲುಷಿತ. ಶುಭಸಂಖ್ಯೆ:6

ಮಕರ: ಶುಭಕಾರ್ಯಕ್ಕೆ ವಿಘ್ನ ಎದುರಾಗಲಿದೆ. ಸ್ನೇಹಿತರು ದೂರವಾಗುವ ಸಾಧ್ಯತೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಶುಭಸಂಖ್ಯೆ: 7

ಕುಂಭ: ಪಾಲುದಾರಿಕೆ ವ್ಯವಹಾರಕ್ಕಾಗಿ ಹಣ ಹೂಡಿಕೆ. ದಾಂಪತ್ಯ ಸಮಸ್ಯೆಗಳು ಉಲ್ಬಣ. ಮಾತಿನಿಂದ ತೊಂದರೆ ತಂದುಕೊಳ್ಳಬೇಡಿ. ಶುಭಸಂಖ್ಯೆ: 3

ಮೀನ: ಗರ್ಭಿಣಿಯರು ಎಚ್ಚರಿಕೆ ವಹಿಸಿ. ಉದ್ಯೋಗ ಮಾಡುವ ಸ್ಥಳದಲ್ಲಿ ಉತ್ತಮ ವಾತಾವರಣ. ಮನೋ ರೋಗಗಳು ಜಾಸ್ತಿಯಾದಾವು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net