

ಮೇಷ: ಗ್ರಹಗತಿಗಳ ಏರುಪೇರಿನ ಅನುಭವಗಳನ್ನು
ಎದುರಿಸುತ್ತಿದ್ದೀರಿ. ಈ ವೇಳೆ ಪ್ರಮುಖವಾಗಿ
ಮಾತಿನ ಆರ್ಭಟ ತೋರದಿರಿ. ಶುಭಸಂಖ್ಯೆ: 4
ವೃಷಭ: ವಾಣಿಜ್ಯಿಕ ವಹಿವಾಟುಗಳ ಪಾಲುದಾರರನ್ನು
ಜಾಣತನದಿಂದ ಆಯ್ಕೆ ಮಾಡಿಕೊಳ್ಳಿ.
ಹಣವೇ ಮುಖ್ಯವಾಗದಿರಲಿ. ಶುಭಸಂಖ್ಯೆ: 9
ಮಿಥುನ: ಮನಸ್ಸಿಗೆ ಬಂದ ಹಾಗೆ ಚಿನ್ನಾಭರಣಗಳನ್ನು
ಖರೀದಿ ಮಾಡುವುದಕ್ಕೆ ಹೋಗಬೇಡಿ.
ಉಳಿತಾಯಗಳಿಂದ ಒಳಿತಿದೆ. ಶುಭಸಂಖ್ಯೆ: 7
ಕಟಕ: ದಿವ್ಯ ಶಕ್ತಿಯೊಂದರಿಂದ ದೊರೆಯುವ
ಉತ್ತೇಜನವು ನಿಮ್ಮನ್ನು ಲಾಭದ ದಾರಿಯ
ಕಡೆಗೆ ಕರೆದೊಯ್ಯುತ್ತದೆ. ಶುಭಸಂಖ್ಯೆ: 1
ಸಿಂಹ: ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು
ಎಂಬ ಆಲೋಚನೆಯೇ ತಪ್ಪು. ಸಹನೆಗೆ
ಹೆಚ್ಚಿನ ಅವಕಾಶ ಇರಲಿ. ಶುಭಸಂಖ್ಯೆ: 5
ಕನ್ಯಾ: ನೀವು ಅಭೂತಪೂರ್ವವಾದ ಚಿಂತನೆಯ
ಸಾಮರ್ಥ್ಯವನ್ನು ಹೊಂದಿದ್ದೀರಿ. ಆದರೆ ಆತುರ
ಸ್ವಭಾವದಿಂದ ಹೊರಬನ್ನಿ. ಶುಭಸಂಖ್ಯೆ: 3
ತುಲಾ: ಪ್ರಣಯದ ವಿಚಾರದಲ್ಲಿ ಹೊಸ ಆಶಾಕಿರಣ
ಮೂಡಲಿದೆ. ಆದರೆ ನೈತಿಕತೆಯಿಂದ ಕೂಡಿದ
ಬುದ್ಧಿಬಲ ಅಗತ್ಯವಾಗಿದೆ. ಶುಭಸಂಖ್ಯೆ: 8
ವೃಶ್ಚಿಕ: ನಂಬಿಕೆ, ಅಪನಂಬಿಕೆಗಿಂತಲೂ ಇಂದಿನ
ವ್ಯವಹಾರದಲ್ಲಿ ಕಾರ್ಯಶೀಲತೆ ಹಾಗೂ
ಮಾತುಗಾರಿಕೆ ಮುಖ್ಯವಾಗಲಿದೆ. ಶುಭಸಂಖ್ಯೆ: 2
ಧನುಸ್ಸು: ಹೆದರದೆಯೇ ಧೈರ್ಯದಿಂದ ಮುನ್ನುಗ್ಗಿ.
ನಿಮ್ಮ ಕ್ರಿಯಾಶಕ್ತಿಗೆ ಕುಟುಂಬದ ಸದಸ್ಯರ
ಬೆಂಬಲ ಕೂಡ ಸಿಗಲಿದೆ. ಶುಭಸಂಖ್ಯೆ: 6
ಮಕರ: ಕಚೇರಿಯಲ್ಲಿ ವಿನೂತನ ಸೌಕರ್ಯಗಳನ್ನು
ಪಡೆಯಲಿದ್ದೀರಿ. ದೃಢವಾದ ಆತ್ಮಚೈತನ್ಯವೇ
ನಿಮ್ಮನ್ನು ಗೆಲ್ಲಿಸಲಿದೆ. ಶುಭಸಂಖ್ಯೆ: 4
ಕುಂಭ: ಸಾಕುಪ್ರಾಣಿಗಳು ತೊಂದರೆ ಕೊಡಬಹುದು.
ನಿಶ್ಚಿಂತ ಮನೋಭಾವ ಬಿಟ್ಟು ಜಾಗ್ರತೆಯಿಂದ
ಇರಲು ಮನಸ್ಸು ಮಾಡಿ. ಶುಭಸಂಖ್ಯೆ: 9
ಮೀನ: ದೂರದ ಪ್ರವಾಸದ ಯೋಜನೆಗಳಿದ್ದರೆ
ಮುಂದೂಡುವುದೇ ಕ್ಷೇಮಕರ. ಆರೋಗ್ಯದ
ಬಗ್ಗೆ ತುಸು ಎಚ್ಚರ ವಹಿಸಿ. ಶುಭಸಂಖ್ಯೆ: 7