

ಮೇಷ: ಹಾಸಿಗೆ ಇದ್ದಷ್ಟೇ ಕಾಲು ಚಾಚುವಂತೆ ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಒಳ್ಳೆಯದರ ಕಡೆಗೆ ದಾರಿ ಲಭ್ಯ. ಶುಭಸಂಖ್ಯೆ: 4
ವೃಷಭ: ಹಿರಿಯರ ಯೋಗಕ್ಷೇಮದ ವಿಚಾರದಲ್ಲಿ ಹಿಂಜರಿಕೆ ಬೇಡ. ನಿಮ್ಮ ಸಮಸ್ಯೆಗಳಿಗೂ ಪರಿಹಾರಗಳು ಸಿಗಲಿವೆ. ಶುಭಸಂಖ್ಯೆ: 2
ಮಿಥುನ: ಉನ್ನತ ವ್ಯಾಸಂಗ ಕೈಗೊಳ್ಳಲು ವಿಶೇಷವಾದ ಅವಕಾಶಗಳು ದೊರೆಯಲಿವೆ. ಶ್ರೀ ದುರ್ಗೆಯನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿ. ಶುಭಸಂಖ್ಯೆ: 6
ಕಟಕ: ಹಳೆಯ ವಿವಾದಗಳಿಂದ ಹೊರಬರುವ ನೀವು ಹೊಸ ಅವಕಾಶಗಳಿಂದಾಗಿ ಜೀವನೋಪಾಯ ಕಾಣುವಿರಿ. ಶುಭಸಂಖ್ಯೆ: 3
ಸಿಂಹ: ಬಾಳಸಂಗಾತಿಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಅವರನ್ನು ಕಾಳಜಿಯಿಂದ ನೋಡಿಕೊಳ್ಳಿ. ಕಷ್ಟಗಳೆಲ್ಲ ದೂರವಾಗಲಿವೆ. ಶುಭಸಂಖ್ಯೆ: 9
ಕನ್ಯಾ: ಮಕ್ಕಳು ಅಕಾರಣವಾಗಿ ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳಬಹುದು. ಸೂಕ್ತ ಮಾತುಗಳಿಂದ ಅವರನ್ನು ಸಮಾಧಾನಪಡಿಸಿ. ಶುಭಸಂಖ್ಯೆ: 1
ತುಲಾ: ನಿಮ್ಮನ್ನು ಕಂಡು ಕೆಲವು ಜನ ಅಸೂಯೆ ಹೊಂದಬಹುದು. ಆದರೆ ನಿಮ್ಮ ಕುರಿತ ಆತ್ಮವಿಶ್ವಾಸ ನಷ್ಟವಾಗದಿರಲಿ. ಶುಭಸಂಖ್ಯೆ: 8
ವೃಶ್ಚಿಕ: ಶ್ರೀಗಣೇಶನ ಕೃಪಾಶೀರ್ವಾದಗಳಿಂದ ಹಲವು ದಿನಗಳ ಕಷ್ಟ ಪರಿಹಾರವಾಗಲಿದೆ. ಸಾಧ್ಯವಾದಷ್ಟು ಶಾಂತರಾಗಿರಿ. ಶುಭಸಂಖ್ಯೆ: 5
ಧನಸ್ಸು: ಹಳೆಯ ಕಚೇರಿಯಲ್ಲೇ ಹೊಸದಾಗಿ ಕೆಲಸ ಮಾಡುವ ಅವಕಾಶ ಸಿಗಬಹುದು. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7
ಮಕರ: ಹತ್ತಿರದವರೇ ನಿಮ್ಮ ಮೇಲೆ ದೋಷಾರೋಪ ಹೊರಿಸಬಹುದು. ಆಪ್ತ ಮಿತ್ರರು ಬಂದು ನಿಮ್ಮನ್ನು ಕಾಪಾಡಲಿದ್ದಾರೆ. ಶುಭಸಂಖ್ಯೆ: 4
ಕುಂಭ: ನಾಲ್ಕು ಜನರ ನಡುವೆ ನಿಮ್ಮ ಚೇತೋಹಾರಿ ಮಾತುಗಳು ಗೆಲುವಿನ ದಾರಿಯ ಕಡೆಗೆ ಬೇಗನೆ ಕೊಂಡೊಯ್ಯಲಿವೆ. ಶುಭಸಂಖ್ಯೆ: 6
ಮೀನ: ಎಷ್ಟೇ ಸಿಟ್ಟು ಬಂದರೂ ಅಬ್ಬರಿಸಬೇಡಿ. ಬೇಸಿಗೆಯ ನದಿಯಂತೆ ಶಾಂತವಾಗಿರಿ. ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 2