ನಿತ್ಯಭವಿಷ್ಯ| ಈ ರಾಶಿಯವರಿಂದು ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಂಡರೆ ಮನಃಶಾಂತಿ ದೊರೆಯಲಿದೆ

Nitya-Bhavishya-vvani-1-2-1
Published on

ಮೇಷ: ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ. ಕುಟುಂಬದ ಸಲಹೆ ಮೇರೆಗೆ ಆಸ್ತಿ ವಿಚಾರ ತೀರ್ವನಿಸಿ, ಮಿತ್ರವರ್ಗದಿಂದ ಲಾಭ. ಶುಭಸಂಖ್ಯೆ: 9

ವೃಷಭ: ಪ್ರಮುಖ ಘಟನೆಗಳಿಗೆ ನೀವು ಸಾಕ್ಷಿಯಾಗುವ ಸಾಧ್ಯತೆ. ಸಹೋದ್ಯೋಗಿ ಗಳಿಂದ ಕಿರಿಕಿರಿ. ಮಕ್ಕಳ ಬಗ್ಗೆ ಕಾಳಜಿವಹಿಸಿ. ಶುಭಸಂಖ್ಯೆ: 2

ಮಿಥುನ: ಶತ್ರುಗಳಿಂದ ತೊಂದರೆ. ದೂರಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಚೇತರಿಕೆ. ಸಂಗಾತಿಯಂದ ಸಮಸ್ಯೆ ಪರಿಹಾರ. ಶುಭಸಂಖ್ಯೆ: 3

ಕಟಕ: ಕಾರ್ಯಕ್ಷೇತ್ರದಲ್ಲಿ ಚಿಕ್ಕ ಮನಸ್ತಾಪ. ಅಮೂಲ್ಯ ವಸ್ತು ಸಂಗ್ರಹ. ಮಹಿಳೆಯರ ಬಹು ದಿನಗಳ ಆಸೆ ಈಡೇರಲಿದೆ. ಶುಭಸಂಖ್ಯೆ: 8

ಸಿಂಹ: ಮನೆ ಬದಲಾವಣೆಗೆ ನಿರ್ಧಾರ. ಔಷಧಿ ವ್ಯಾಪಾರಿಗಳಿಗೆ ಲಾಭ. ಮಿತ್ರರ ಕೆಲಸದಲ್ಲಿ ಸಿದ್ದಿ. ವಾಹನಚಾಲಕರು ಎಚ್ಚರವಾಗಿರಿ. ಶುಭಸಂಖ್ಯೆ: 3

ಕನ್ಯಾ: ಸಂಪನ್ಮೂಲ ದೊರೆತು ಸಾಲ ಮರುಪಾವತಿ. ಹಿರಿಯರನ್ನು ಗೌರವಿಸಿ. ಆಭರಣ ವ್ಯಾಪಾರಿಗಳು ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 2

ತುಲಾ: ಕಳೆದುಕೊಂಡ ವಸ್ತುವಿನ ಪುನರ್ ಲಭ್ಯತೆ. ಧಾರ್ವಿುಕ ಸಮಾರಂಭದಲ್ಲಿ ಪಾಲ್ಗೊಂಡು ಮನಃಶಾಂತಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 7

ವೃಶ್ಚಿಕ: ದೂರಾಲೋಚನೆಯಿಂದ ಯಶಸ್ಸು. ಕುಟುಂಬ ಸಮೇತ ಧಾರ್ವಿುಕ ಯಾತ್ರೆ. ಸಹನೆಯಿಂದ ಕುಟುಂಬ ಕಲಹ ನಿವಾರಿಸಿ. ಶುಭಸಂಖ್ಯೆ: 6

ಧನುಸ್ಸು: ಕಚೇರಿ ಕೆಲಸದಲ್ಲಿ ಆಸಕ್ತಿ. ಮನೆ ಖರೀದಿ ಸಾಧ್ಯತೆ. ಮಕ್ಕಳಿಂದಾಗಿ ಗೌರವ. ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ. ಶುಭಸಂಖ್ಯೆ: 4

ಮಕರ: ಮಗಳ ಆರೋಗ್ಯದಲ್ಲಿ ಏರುಪೇರು. ದೈನಂದಿನ ವ್ಯವಹಾರ ಸುಗಮ. ಪಾಲುದಾರಿಕೆ ವ್ಯವಹಾರವನ್ನು ನಿಲ್ಲಿಸುವ ಪ್ರಯತ್ನ. ಶುಭಸಂಖ್ಯೆ: 5

ಕುಂಭ: ನ್ಯಾಯಾಲಯದಲ್ಲಿ ಜಯ. ಪಾಲುದಾರಿಕೆಯಲ್ಲಿ ಹಿಂಜರಿತ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ. ಇಷ್ಟ ದೇವರ ದರ್ಶನ. ಶುಭಸಂಖ್ಯೆ: 4

ಮೀನ: ಪ್ರತಿಭಾನ್ವಿತರಿಗೆ ಅವಕಾಶ. ವೈಯಕ್ತಿಕ ಸಮಸ್ಯೆಗೆ ಆತ್ಮೀಯ ಸ್ನೇಹಿತ ನಿಂದ ಪರಿಹಾರ. ಪ್ರೇಮ ವಿಚಾರದಲ್ಲಿ ಎಚ್ಚರಿಕೆ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net