

ಮೇಷ: ಅಪರಿಚಿತ ವ್ಯಕ್ತಿಗಳ ಆಗಮನದ ಕಾರಣದಿಂದ ವ್ಯರ್ಥ ಕಾಲಹರಣವಾಗಬಹುದು. ಆದರೆ ಹೆಚ್ಚು ಗಾಬರಿಪಡುವುದೇನೂ ಬೇಡ. ಶುಭಸಂಖ್ಯೆ: 8
ವೃಷಭ: ಶ್ವಾಸಕೋಶದ ಸಮಸ್ಯೆಯ ಬಗ್ಗೆ ಗಮನ ವಹಿಸುವುದು ಬಹು ಮುಖ್ಯ. ಖಂಡಿತವಾಗಿ ಈ ಬಗ್ಗೆ ಅಲಕ್ಷ್ಯ ಮಾಡಬೇಡಿ. ಶುಭಸಂಖ್ಯೆ: 4
ಮಿಥುನ: ಬೇರೆ ಊರಿಗೆ ಹೋಗಿಬರಬೇಕಾದಂತಹ ಅವಸರದ ವಿದ್ಯಮಾನ ಜರುಗಬಹುದು. ಆದರೆ ಸ್ವಲ್ಪಮಟ್ಟಿನ ತಾಳ್ಮೆ ಇದ್ದೇ ಇರಲಿ. ಶುಭಸಂಖ್ಯೆ: 1
ಕಟಕ: ಜಗನ್ಮಾತೆ ಮಹಾಲಕ್ಷ್ಮಿಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಿ. ಇದರಿಂದ ಲಾಭದ ದಾರಿಗಳು ತೆರೆದುಕೊಳ್ಳಲು ಸಾಧ್ಯವಿದೆ. ಶುಭಸಂಖ್ಯೆ: 6
ಸಿಂಹ: ಅನಿಸಿದ್ದನ್ನೆಲ್ಲ ಮಾತನಾಡಬೇಡಿ. ಇದರಿಂದ ತೊಂದರೆಗೆ ಸಿಲುಕುವಂತಹ ಸಂದರ್ಭಗಳೇ ಎದುರಾದಾವು. ಎಚ್ಚರವಿರಲಿ. ಶುಭಸಂಖ್ಯೆ: 9
ಕನ್ಯಾ: ಕೆಲಸಕಾರ್ಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಕೊಳ್ಳಿ. ಹೊಸ ಕೆಲಸದ ಯೋಚನೆ ಬಿಟ್ಟು ಯಥಾಸ್ಥಿತಿ ಇರಲಿ. ಶುಭಸಂಖ್ಯೆ: 2
ತುಲಾ: ಆಧ್ಯಾತ್ಮಿಕ ಚಿಂತನೆಗಳ ಆಯಾಮವೂ ನಿಮ್ಮ ವ್ಯಕ್ತಿತ್ವದ ಭಾಗವೇ ಆಗಿದೆ. ಇದರಿಂದ ಪ್ರಶಂಸೆಯೂ ಲಭಿಸಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಹೊಸದಾಗಿ ಪರಿಚಿತವಾದ ಸ್ನೇಹವಲಯವು ನಿಮ್ಮ ಬೌದ್ಧಿಕ, ಭಾವನಾತ್ಮಕ ಸಾಮರ್ಥ್ಯದ ವೃದ್ಧಿಗೂ ಪೂರಕವಾಗಲಿದೆ. ಶುಭಸಂಖ್ಯೆ: 7
ಧನಸ್ಸು: ಬಂಧುಗಳು ನಿಮಗೆ ನೆರವು ನೀಡಬಹುದಾದರೂ ಅವರನ್ನು ಹೆಗಲ ಮೇಲೇನೂ ಎರಿಸಿಕೊಳ್ಳದಿರಿ. ನಿಮಗೇ ತೊಂದರೆ ಆದೀತು. ಶುಭಸಂಖ್ಯೆ: 3
ಮಕರ: ಸುತ್ತಲಿನವರು ಅಚ್ಚರಿಪಡುವಂಥ ಅಮೋಘ ಚಾತುರ್ಯವನ್ನು ಪ್ರದರ್ಶಿಸುವಿರಿ. ಭವಿಷ್ಯಕ್ಕೂ ಇದರಿಂದ ಸಹಾಯ ಸಿಗಲಿದೆ. ಶುಭಸಂಖ್ಯೆ: 8
ಕುಂಭ: ವಿಶ್ವದ ರಂಗಮಂಟಪದಲ್ಲಿ ಎಲ್ಲ ಬಗೆಯ ಪಾತ್ರಗಳನ್ನೂ ಮಾಡಬೇಕಾಗುತ್ತವೆ. ಸಜ್ಜನರನ್ನು ಭೇಟಿಯಾಗುವ ಅವಕಾಶ ಲಭ್ಯ. ಶುಭಸಂಖ್ಯೆ: 4
ಮೀನ: ಮನೆಯಲ್ಲಿನ ಸಮಸ್ಯೆಗಳು ತಲೆನೋವನ್ನೇ ತರಬಹುದು. ಮಹಾವಿಷ್ಣುವನ್ನು ಸ್ತುತಿಸಿ. ತೊಂದರೆ ನಿವಾರಣೆಯಾಗಲಿದೆ. ಶುಭಸಂಖ್ಯೆ: 1