

ಮೇಷ: ನಿಮ್ಮ ನಿರ್ಧಾರಗಳಿಂದ ಯಶಸ್ಸಿಗೆ
ಅವಕಾಶವಿದೆ. ಆದರೆ ಅದನ್ನು ದೇವರ
ಎದುರು ಇಟ್ಟು ಪ್ರಾರ್ಥಿಸಿಕೊಳ್ಳಿ. ಶುಭಸಂಖ್ಯೆ: 1
ವೃಷಭ: ದುಷ್ಟ ಪ್ರವೃತ್ತಿಯವರು, ಕೆಟ್ಟ ನಡತೆಯ
ಬೇಜವಾಬ್ದಾರಿ ಜನ ನಿಮ್ಮೊಡನೆ ಸೇರಬಹುದು.
ಎಲ್ಲರನ್ನೂ ನಂಬದಿರಿ. ಶುಭಸಂಖ್ಯೆ: 7
ಮಿಥುನ: ಹಣವನ್ನು ಗಳಿಸುವುದಷ್ಟೇ
ಮುಖ್ಯವಲ್ಲ. ಜತನದಿಂದ ಕಾಪಾಡಿಕೊಳ್ಳುವುದೂ
ಸದ್ಯಕ್ಕೆ ನಿಮಗೆ ಮುಖ್ಯವಾಗಲಿ. ಶುಭಸಂಖ್ಯೆ: 4
ಕಟಕ: ದೊಡ್ಡ ಆಕಾಂಕ್ಷೆಯ ಸಿದ್ಧಿಗಾಗಿ
ಶ್ರಮಿಸುತ್ತಿದ್ದೀರಿ. ಅದು ಸಾಕಾರಗೊಳ್ಳಲು
ವಿನೂತನ ಅವಕಾಶ ಎದುರಾಗಲಿದೆ. ಶುಭಸಂಖ್ಯೆ: 8
ಸಿಂಹ: ಸಂಗಾತಿಯೊಡನೆ ಮನಸ್ತಾಪವಾದೀತು.
ಅದು ತೊಂದರೆಗಳಿಗೆ ಕಾರಣವಾಗಬಹುದು.
ಸಮಾಧಾನ ಇರಲಿ. ಶುಭಸಂಖ್ಯೆ: 5
ಕನ್ಯಾ: ವರ್ತಮಾನದ ಸಂದರ್ಭವು ನಿಮ್ಮನ್ನು
ವೈಷಮ್ಯದ ದಾರಿಗೆ ತಳ್ಳಬಹುದು.
ವಿವೇಚನೆಯಿಂದ ಎಚ್ಚರಿಕೆ ವಹಿಸಿ. ಶುಭಸಂಖ್ಯೆ: 9
ತುಲಾ: ಹಣವು ತಾನಾಗಿ ನಿಮ್ಮ ಖಜಾನೆಗೆ
ಬಂದು ನಿಲ್ಲದು. ಅದಕ್ಕೆ ಬೇಕಾದ
ಯೋಜನೆಗಳಿಗೆ ಬೇಗ ಚಾಲನೆ ನೀಡಿ. ಶುಭಸಂಖ್ಯೆ: 2
ವೃಶ್ಚಿಕ: ತಾಯಿ ಚಾಮುಂಡಿಯನ್ನು ಶ್ರದ್ಧೆಯಿಂದ
ಆರಾಧಿಸಿ. ಮನಸ್ಸಿನ ತಳಮಳಗಳು ಬೇಗನೆ
ಉಪಶಮನವಾಗಲಿವೆ. ಶುಭಸಂಖ್ಯೆ: 6
ಧನಸ್ಸು: ಹೊಸ ವಿಚಾರಗಳನ್ನು ಕುರಿತು
ಬರೆಯಲು ಹೊರಟಿದ್ದೀರಿ. ಶಾರದಾಂಬೆಯ
ಆಶೀರ್ವಾದವನ್ನೂ ಪಡೆದುಕೊಳ್ಳಿ. ಶುಭಸಂಖ್ಯೆ: 3
ಮಕರ: ನೀವು ಸರಿಯಾಗಿಯೇ ತೀರ್ಮಾನ
ಕೈಗೊಳ್ಳಬಹುದು. ಜತೆಗೆ ತಂದೆ-ತಾಯಿಯ
ಸಮ್ಮತಿಯನ್ನೂ ಪಡೆದುಕೊಳ್ಳಿ. ಶುಭಸಂಖ್ಯೆ: 1
ಕುಂಭ: ಗುರು ಹಿರಿಯರನ್ನು ಗೌರವಿಸುವುದರಿಂದ
ಕ್ಷೇಮಕ್ಕೆ ದಾರಿ ಇದೆ. ಒಂಟಿತನ
ನೀಗಿಸಿಕೊಳ್ಳಲು ಹಿಂಜರಿಕೆ ಬೇಡ. ಶುಭಸಂಖ್ಯೆ: 4
ಮೀನ: ಆತ್ಮೀಯ ಸ್ನೇಹಿತರೊಬ್ಬರಿಂದ
ವೈಯಕ್ತಿಕ ಸಂಗತಿಗಳಲ್ಲಿ ಉತ್ತಮವಾದ
ಸಹಾಯ, ಸಹಕಾರ ಲಭ್ಯವಾಗಲಿದೆ. ಶುಭಸಂಖ್ಯೆ: 7