ಈ ರಾಶಿಯವರ ಬದುಕಿನಲ್ಲಿ ಇಂದು ಪವಾಡ ನಡೆಯಲಿದೆ !

Nithya Bhavishya
Published on

ಮೇಷ: ಈಗಾಗಲೇ ಇರುವ ವ್ಯಾಪಾರಕ್ಕೆ

ಹೊಸದನ್ನು ಸೇರಿಸಿಕೊಳ್ಳಬಹುದು. ಚಾತುರ್ಯಕ್ಕೆ

ಹೆಚ್ಚಿನ ಅವಕಾಶ ಇದ್ದಿರಲಿ. ಶುಭಸಂಖ್ಯೆ: 3

ವೃಷಭ: ಒಳಾಂಗಣ ವಿನ್ಯಾಸಗಾರರಿಗೆ

ವಿಶೇಷವಾದ ಅವಕಾಶಗಳು ಒದಗಿಬರಲಿವೆ.

ಮಾತುಕತೆಯಲ್ಲಿ ಸ್ವಲ್ಪ ತಾಳ್ಮೆ ಇರಲಿ. ಶುಭಸಂಖ್ಯೆ: 6

ಮಿಥುನ: ಅಲ್ಪಕಾಲದಿಂದ ಸ್ಥಗಿತಗೊಂಡಂತಿದ್ದ

ನಿಮ್ಮ ವ್ಯಾಪಾರ, ವಹಿವಾಟುಗಳಿಗೆ ಚಾಲನೆ

ದೊರೆತು ನೆಮ್ಮದಿ ಸಿಗಲಿದೆ. ಶುಭಸಂಖ್ಯೆ: 9

ಕಟಕ: ಸಿನಿಮಾದ ಬಗ್ಗೆ ಅತ್ಯಾಸಕ್ತಿ

ಹೊಂದಿರುವುದು ಅಷ್ಟು ಸರಿಯಲ್ಲ. ಮನೆತನದ

ಕೆಲಸಗಳನ್ನು ಖಂಡಿತ ಬಿಡಬೇಡಿ. ಶುಭಸಂಖ್ಯೆ: 5

ಸಿಂಹ: ಗಾಳಿಸುದ್ದಿಗಳಿಂದ ಮನಸ್ಸು

ನೋಯುವಂತಹ ಸಂದರ್ಭ ಸೃಷ್ಟಿಯಾದೀತು.

ಆಂಜನೇಯನ ಸ್ತುತಿ ಕ್ಷೇಮಕರ. ಶುಭಸಂಖ್ಯೆ: 8

ಕನ್ಯಾ: ಗಳಿಕೆಯಲ್ಲಿ ಗಮನಾರ್ಹವಾದ ಏರಿಕೆಯಿದೆ.

ಹಾಗೆಂದು ವಿಪರೀತ ಧಾರಾಳತನ

ತೋರಿಸಿಕೊಳ್ಳಲು ಹೋಗಬೇಡಿ. ಶುಭಸಂಖ್ಯೆ: 2

ತುಲಾ: ಹೊಸ ಯೋಜನೆಗಳೊಂದಿಗೆ

ಕ್ರಿಯಾಶೀಲರಾಗಲು ಬಯಸಿದ್ದೀರಿ. ಆರಂಭಿಕ

ಸಿದ್ಧತೆಗಳಿಗೆ ಮುಂದಾಗಬಹುದು. ಶುಭಸಂಖ್ಯೆ: 7

ವೃಶ್ಚಿಕ: ನಿಮ್ಮ ಯೋಜನೆಗಳಿಗೆ ಬೆಂಬಲವನ್ನು

ವ್ಯಕ್ತಪಡಿಸುವುದರ ಮೂಲಕ ಅನುಯಾಯಿಗಳು

ನಿಮ್ಮನ್ನು ಗೆಲ್ಲಿಸಲಿದ್ದಾರೆ. ಶುಭಸಂಖ್ಯೆ: 1

ಧನಸ್ಸು: ಆಮದು ರಫ್ತು ವ್ಯವಹಾರಗಳಲ್ಲಿ

ಸಫಲತೆಯನ್ನು ಪಡೆಯುವ ಯೋಜನೆ

ಯಶಸ್ವಿಯಾಗಲಿದೆ. ಮೈಮರೆಯದಿರಿ. ಶುಭಸಂಖ್ಯೆ: 4

ಮಕರ: ಶೀಘ್ರದಲ್ಲಿಯೇ ನಿಮ್ಮ ಕಾರ್ಯಯೋಜನೆಗಳು

ಸಿದ್ಧಿಸಲಿವೆ. ಇಷ್ಟದೇವರ ಅನುಗ್ರಹ

ಕೂಡ ನಿಮ್ಮ ಬೆನ್ನಿಗಿರಲಿದೆ. ಶುಭಸಂಖ್ಯೆ: 3

ಕುಂಭ: ಅನೇಕ ಕ್ಲಿಷ್ಟಕರ ಸನ್ನಿವೇಶಗಳಿಂದ

ಹೊರಬರುವ ಪವಾಡ ಜರುಗಲಿದೆ. ಶ್ರೀ ಗುರು

ದತ್ತಾತ್ರೇಯನ ಸ್ತುತಿ ಮಾಡಿ. ಶುಭಸಂಖ್ಯೆ: 9

ಮೀನ: ಕೆಲವು ವ್ಯವಹಾರಗಳು ನೀವು

ಅಂದುಕೊಂಡಷ್ಟು ಸರಳವಾಗಿ ಲಾಭ ನೀಡಲಾರವು.

ಆದರೆ ಶ್ರಮಕ್ಕೆ ಮೋಸವಿಲ್ಲ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net