ಈ ರಾಶಿಯವರಿಗಿಂದು ಅನಿರೀಕ್ಷಿತವಾಗಿ ಮಿತ್ರರ ಭೇಟಿ: ನಿತ್ಯಭವಿಷ್ಯ

astrology
Published on

ಮೇಷ: ಉದ್ಯೋಗ ಸ್ಥಳದಲ್ಲಿ ಅಧಿಕ ಧನಾಗಮನ. ಪ್ರೀತಿ-ಪ್ರೇಮ, ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಆತಂಕವಾದೀತು. ಶುಭಸಂಖ್ಯೆ: 8

ವೃಷಭ: ವ್ಯವಹಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3

ಮಿಥುನ: ಪ್ರೀತಿ-ಪ್ರೇಮದ ವಿಷಯದಲ್ಲಿ ಆತಂಕ. ಅಧಿಕ ಖರ್ಚು. ಅತಿಯಾದ ವಿಷಯಾಸಕ್ತಿ. ಪರಿಹಾರ ತುಪ್ಪವನ್ನು ದಾನ ಮಾಡಿ. ಶುಭಸಂಖ್ಯೆ: 9

ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ. ಗುಪ್ತ ವಿಷಯಗಳಿಂದ ಸಮಸ್ಯೆ. ಸ್ಥಿರಾಸ್ತಿ ಅಥವಾ ವಾಹನದ ವಿಚಾರದಲ್ಲಿ ಮೋಸವಾದೀತು. ಶುಭಸಂಖ್ಯೆ: 1

ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಬಲಿಯಾಗುವಿರಿ. ಶುಭಸಂಖ್ಯೆ: 5

ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಸ್ವಂತ ಉದ್ಯೋಗದವರಿಗೆ ಅನುಕೂಲವಾಗಲಿದೆ. ಶುಭಸಂಖ್ಯೆ:3

ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ. ಆಸೆ-ಆಕಾಂಕ್ಷೆಗಳಲ್ಲಿ ವಿಹರಿಸುವಿರಿ. ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚು ಸಮಾಧಾನ ಲಭಿಸಲಿದೆ. ಶುಭಸಂಖ್ಯೆ: 2

ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ ಸಾಧ್ಯತೆ. ಪ್ರಯಾಣದಿಂದ ನಷ್ಟ. ಉದ್ಯೋಗ ಸ್ಥಳದಲ್ಲಿ ಸಂಶಯ ತಲೆದೋರೀತು. ಶುಭಸಂಖ್ಯೆ: 9

ಧನುಸ್ಸು: ಅನಾರೋಗ್ಯ ಸಮಸ್ಯೆ. ಸಾಲಬಾಧೆ ಮತ್ತು ಶತ್ರು ಕಾಟ. ಭವಿಷ್ಯದ ಚಿಂತೆ ಸ್ವಲ್ಪ ಹೆಚ್ಚೇ ಕಾಡುವುದು. ಬಂಧುಗಳಿಂದ ಲಾಭ. ಶುಭಸಂಖ್ಯೆ: 3

ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವ ಸಾಧ್ಯತೆ ಜಾಸ್ತಿ. ಉದ್ಯೋಗದಲ್ಲಿ ಅನುಕೂಲವಿದೆ. ಉತ್ತಮ ಹೆಸರು ಬರಲಿದೆ. ಅಧಿಕ ಖರ್ಚು. ಶುಭಸಂಖ್ಯೆ: 7

ಕುಂಭ: ಮಕ್ಕಳ ವಾಹನ ಅಭಿಲಾಷೆ ಪೂರೈಸಲು ಯತ್ನ. ಪ್ರಯಾಣದಲ್ಲಿ ಶತ್ರು ಕಾಟ. ತಂದೆಯಿಂದ ಸಹಕಾರ. ಉನ್ನತ ವಿದ್ಯೆಯ ಯೋಗ. ಶುಭಸಂಖ್ಯೆ: 4

ಮೀನ: ಮಕ್ಕಳಿಂದ ನೋವು. ಬಂಧು ಬಾಂಧವರೊಂದಿಗೆ ಬಾಂಧವ್ಯ. ವಿನಾಕಾರಣ ಕಲಹಗಳು. ವೇದಾಂತ ಜ್ಞಾನದ ಬಗ್ಗೆ ಚಿಂತೆ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net