

ಮೇಷ: ದುಡುಕಿನ ನಿರ್ಧಾರ ಬೇಡ. ಸಂಶಯ ಪ್ರವೃತ್ತಿಯಿಂದ ತೊಂದರೆ. ಶುಭ ಕಾರ್ಯಕ್ಕೆ ಚಾಲನೆ. ಕುಟುಂಬದ ಸಲಹೆ ಪಡೆಯಿರಿ. ಶುಭಸಂಖ್ಯೆ: 6
ವೃಷಭ: ಹೊಸ ಉದ್ದಿಮೆಗೆ ಚಾಲನೆ. ದಿನಾಂತ್ಯದಲ್ಲಿ ಆತ್ಮೀಯರ ಆಗಮನದಿಂದ ಸಂತಸ. ಖಾಸಗಿ ಉದ್ಯೋಗಿಗಳಿಗೆ ವಿಶೇಷ ಧನಲಾಭ. ಶುಭಸಂಖ್ಯೆ: 2
ಮಿಥುನ: ಕುಟುಂಬದಲ್ಲಿ ತಾಳ್ಮೆಯಿರಲಿ. ಮಾನಸಿಕ ಒತ್ತಡ. ಕಚೇರಿಯಲ್ಲಿ ಹಿರಿಯರಿಂದ ಸಲಹೆ. ಭಗವತಿಯನ್ನು ಆರಾಧಿಸಿ, ಪೂಜಿಸಿ. ಶುಭಸಂಖ್ಯೆ:7
ಕಟಕ: ಶುಭ ಕೆಲಸಕ್ಕೆ ಚಾಲನೆ. ಅಧ್ಯಾಪಕರಿಗೆ ಬಡ್ತಿ ಸಾಧ್ಯತೆ. ಬಾಳಸಂಗಾತಿಯೊಂದಿಗೆ ಧಾರ್ವಿುಕ ಮಂದಿರಕ್ಕೆ ಭೇಟಿ ನೀಡುವಿರಿ. ಶುಭಸಂಖ್ಯೆ: 1
ಸಿಂಹ: ದುಡುಕುತನದಿಂದ ತೊಂದರೆಯಾದೀತು. ಹಿತಶತ್ರುಗಳ ಬಗ್ಗೆ ಅನುಕಂಪ ಬೇಡ. ಮಕ್ಕಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 8
ಕನ್ಯಾ: ವಾಹನ ಚಾಲನೆ ವೇಳೆ ಅಪಘಾತ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಅನಿರೀಕ್ಷಿತ ಅವಕಾಶ. ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ: 8
ತುಲಾ: ಮಕ್ಕಳಿಗೆ ಮಾರ್ಗದರ್ಶನ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ. ವಿದ್ಯಾರ್ಥಿಗಳಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 6
ವೃಶ್ಚಿಕ: ರಾಜಕೀಯದವರಿಗೆ ಮಹತ್ವದ ಜವಾಬ್ದಾರಿ. ನಟರಿಗೆ ಅವಕಾಶ. ವೈದ್ಯರ ಮಾತು ಪಾಲಿಸಿ. ಸಂಜೆ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 4
ಧನುಸ್ಸು: ಮಗನ ವಿದ್ಯಾಭ್ಯಾಸದಲ್ಲಿ ಅನಿರೀಕ್ಷಿತ ತಿರುವು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಸಫಲತೆ. ಕುಟುಂಬದಲ್ಲಿ ಸಡಗರ. ಶುಭಸಂಖ್ಯೆ:1
ಮಕರ: ನಿಮ್ಮ ಸಮಸ್ಯೆಯನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ:7
ಕುಂಭ: ವಿಶಿಷ್ಟ ವ್ಯಕ್ತಿಯ ಭೇಟಿ. ಅಗತ್ಯಕ್ಕೆ ತಕ್ಕಂತೆ ಹಣ ಖರ್ಚು ಮಾಡಿ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಸಂಜೆ ಸಿಹಿ ಸುದ್ದಿ. ಶುಭಸಂಖ್ಯೆ: 1
ಮೀನ: ಬಯಸದೆ ಬಂದ ಅವಕಾಶ ತಿರಸ್ಕರಿಸಬೇಡಿ. ಪ್ರಯಾಣ. ಉದ್ಯೋಗ ಆಕಾಂಕ್ಷಿಗಳಿಗೆ ಸ್ಪರ್ಧೆ. ಉನ್ನತ ವಿದ್ಯಾಭ್ಯಾಸ ಯಶಸ್ಸು. ಶುಭಸಂಖ್ಯೆ: 8